ಹೈದರಾಬಾದ್: ಟಾಲಿವುಡ್ನಲ್ಲಿ ಯಶಸ್ಸು ಪಡೆದಿರುವ ನಟಿಯರಾದ ಕೀರ್ತಿ ಸುರೇಶ್ ಮತ್ತು ರಾಶಿ ಖನ್ನಾ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂದು ತಮ್ಮ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ 'ಮಹಾನಟಿ' ಕಂದು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ನಟಿ ರಾಶಿ ಖನ್ನಾ ಕೂಡ ವಿಮಾನ ನಿಲ್ದಾಣದಲ್ಲಿ ಪ್ಯಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ನಟ ಜಾನ್ ಅಬ್ರಹಾಂ ಜೊತೆ 'ಮದ್ರಾಸ್ ಕೆಫೆ' ಸಿನಿಮಾದ ಮೂಲಕ ಮೊದಲ ಬಾರಿ ಬಾಲಿವುಡ್ ಪ್ರವೇಶಿಸಿದ ನಟಿ ರಾಶಿ, ತೆಲುಗಿನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದು, 'ಫರ್ಜಿ' ವೆಬ್ ಸೀರಿಸ್ ಮೂಲಕ ದೊಡ್ಡ ಹಿಟ್ ಪಡೆದರು. ವಿಮಾನ ನಿಲ್ದಾಣದಲ್ಲಿ ಈ ತಾರೆ ಹಸಿರು ಬಣ್ಣದ ಟಾಪ್ಗೆ ಬಿಳಿ ಬಣ್ಣದ ಟ್ರೌಜರ್ ತೊಟ್ಟಿದ್ದು, ಎಂದಿನಂತೆ ಪ್ಯಾಪರಾಜಿಗಳತ್ತ ಮುಗುಳ್ನಗುತ್ತ ವಿಮಾನ ನಿಲ್ದಾಣ ಪ್ರವೇಶಿಸಿದರು.
ಇತ್ತ, ನಟ ವರುಣ್ ಧವನ್ಗೆ ಬೇಬಿ ಜಾನ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಲು ಸಿದ್ಧವಾಗಿರುವ ನಟಿ ಕೀರ್ತಿ ಸುರೇಶ್, ಸಂಭ್ರಮದಿಂದ ವಿಮಾನ ನಿಲ್ದಾಣದಲ್ಲಿ ಕಂಡರು. ಕಂದು ಬಣ್ಣದ ಉಡುಗೆಗೆ ಕ್ರೀಮ್ ಬಣ್ಣದ ಓವರ್ಕೋಟ್ ಮೂಲಕ ಗಮನ ಸೆಳೆದರು. ಇದೇ ವೇಳೆ ನಟಿ ಹಲವರೊಂದಿಗೆ ಸೆಲ್ಫಿಗೂ ಸ್ಮೈಲ್ ಮಾಡಿದರು.
'ಬೇಬಿ ಜಾನ್' ಚಿತ್ರವನ್ನು ಕಲೀಶ್ವರನ್ ನಿರ್ದೇಶಿಸುತ್ತಿದ್ದು, ವಮಿಕ್ ಗಬ್ಬಿ, ಜಾಕಿ ಶ್ರಾಫ್ ಮತ್ತು ರಾಜ್ಫಲ್ ಯಾದವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಟ್ಲಿ ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್ ಮತ್ತು ಸಿನಿ1 ಸ್ಟುಡಿಯೋಸ್ ಮೂಲಕ ಸಮರ್ಪಿಸುತ್ತಿದ್ದಾರೆ.
ಇನ್ನು ನಟಿ ರಾಶಿ ಖನ್ನಾ, ನಟನೆಯ ಸಿದ್ದಾರ್ಥ್ ಮಲ್ಹೋತ್ರಾ ಮುಖ್ಯಭೂಮಿಕೆಯ 'ಯೋಧ' ಚಿತ್ರ ಉತ್ತಮ ಪ್ರದರ್ಶನ ಕಂಡಿತು. ಜೊತೆಗೆ ತಮಿಳಿನಲ್ಲಿ ಅವರ ಹಾರರ್ ಕಾಮಿಡಿ ಸಿನಿಮಾ 'ಅರ್ನಮನಯಿ 4' ಕೂಡ ಸದ್ದು ಮಾಡಿತು. ಈ ಚಿತ್ರದಲ್ಲಿ ನಟಿ ತಮನ್ನಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೆಂಕಟ್ ರಾಘವನ್ ಚಿತ್ರದ ಸಹ ಲೇಖಕರಾಗಿದ್ದಾರೆ. ಎಸ್ಬಿ ರಾಮದಾಸ್ ಕಥೆ ಬರೆದಿದ್ದಾರೆ. ಚಿತ್ರವನ್ನು ಸುಂದರ್ ಸಿ ನಿರ್ಮಾಣ ಮಾಡಿದ್ದಾರೆ. ಬಹು ನಿರೀಕ್ಷೆಯ ಈ ಚಿತ್ರ ಮೇ 3ರಂದು ಬಿಡುಗಡೆಯಾಗಿದ್ದು, ಕಾಲಿವುಡ್ನಲ್ಲಿ ಈ ವರ್ಷದ ದೊಡ್ಡ ಹಿಟ್ ಸಿನಿಮಾ ಇದಾಗಿದೆ.
ಇದನ್ನೂ ಓದಿ: 'ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಸೀಸನ್ 2 ಟೀಸರ್ ರಿಲೀಸ್