ETV Bharat / entertainment

ಬಾಲಿವುಡ್​ ನಟಿ ಕತ್ರಿನಾ ಕೈಫ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ನೆಟ್ಟಿಗರ ತಲೆ ಬಿಸಿ ಮಾಡಿದ ಫೋಟೋ - Katrina Kaif Pregnancy Rumors - KATRINA KAIF PREGNANCY RUMORS

ನಟಿ ದೀಪಿಕಾ ಪಡುಕೋಣೆ ಅವರ ಬೇಬಿ ಬಂಪ್ ವಿಡಿಯೋ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ನಟಿ ಕತ್ರಿನಾ ಕೈಫ್ ಅವರ ಫೋಟೋಗಳು ಸಹ ಜಾಲತಾಣದಲ್ಲಿ ವೈರಲ್​ ಆಗಿವೆ.

Katrina Kaif Pregnancy Rumors Surge as Netizens Decode Clues from Viral Video with Vicky Kaushal
ETV Bhaನಟ ವಿಕ್ಕಿ ಕೌಶಲ್ ಅವರೊಂದಿಗೆ ನಟಿ ಕತ್ರಿನಾ ಕೈಫ್rat (ETV Bharat)
author img

By ETV Bharat Karnataka Team

Published : May 21, 2024, 4:54 PM IST

ಹೈದರಾಬಾದ್: ಬಾಲಿವುಡ್​ ನಟಿ ಕತ್ರಿನಾ ಕೈಫ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಹೀಗೊಂದು ಅನುಮಾನ ನೆಟ್ಟಿಗರ ತಲೆ ಬಿಸಿ ಮಾಡಿದೆ. ನಟಿ ದೀಪಿಕಾ ಪಡುಕೋಣೆ ಅವರ ಬೇಬಿ ಬಂಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಬೆನ್ನಲ್ಲೇ ಕತ್ರಿನಾ ಕೈಫ್ ಅವರ ಕೆಲವು ಫೋಟೋ ಸಹ ನೆಟ್ಟಿಗರ ತಲೆ ಬಿಸಿ ಮಾಡಿದೆ.

Katrina Kaif Pregnancy Rumors Surge as Netizens Decode Clues from Viral Video with Vicky Kaushal
ನಟ ವಿಕ್ಕಿ ಕೌಶಲ್ ಅವರೊಂದಿಗೆ ನಟಿ ಕತ್ರಿನಾ ಕೈಫ್ (ETV Bharat)

ಕತ್ರಿನಾ ತನ್ನ ಪತಿ ಹಾಗೂ ನಟ ವಿಕ್ಕಿ ಕೌಶಲ್ ಅವರೊಂದಿಗೆ ಲಂಡನ್‌ನಲ್ಲಿ ಓಡಾಡುತ್ತಿರುವ ಫೋಟೋ ಇದಾಗಿದ್ದು, ಅಲ್ಲಿನ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕತ್ರಿನಾ ಕೈಫ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರಬಹುದು. ಹಾಗಾಗಿ ಯಾರಿಗೂ ಅನುಮಾನ ಬಾರದಂತೆ ದೊಡ್ಡದಾದ ಬ್ಲೇಜರ್ ಧರಿಸಿರಿವುದನ್ನು ಫೋಟೋದಲ್ಲಿ ನಾವು ಕಾಣಬಹುದು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಅದೇ ರೀತಿ ಹಲವರು ಅನುಮಾನ ವ್ಯಕ್ತಪಡಿಸಿ ಶುಭಾಶಯ ಕೂಡ ತಿಳಿಸಿದ್ದಾರೆ.

ಲಂಡನ್‌ನ ಬೇಕರ್ ಸ್ಟ್ರೀಟ್​ನಲ್ಲಿ ತಾರಾ ದಂಪತಿಯು ತಿರುಗಾಡುವ ದೃಶ್ಯವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಅದರನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿಯು ದೊಡ್ಡದಾದ ಬ್ಲೇಜರ್ ಧರಿಸಿರಿವುದನ್ನು ಮತ್ತು ನಡಿಗೆಯಲ್ಲಿನ ವ್ಯತ್ಯಾಸ ಕಂಡು ಅನುಮಾನ ವ್ಯಕ್ತಪಡಿಸಿರುವ ನೆಟ್ಟಿಗರು, ಮಾಧ್ಯಮ ಮತ್ತು ಫ್ಯಾನ್ಸ್​ಗಳಿಗೆ ಗೊತ್ತಾಗಬಾರದರು ಎಂಬ ಕಾರಣದಿಂದ ವಿಕ್ಕಿ ಕೌಶಲ್ ಪತ್ನಿಯನ್ನು ಲಂಡನ್​ಗೆ ತೆರಳಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕತ್ರಿನಾ ಕೈಫ್ ಪ್ರೆಗ್ನೆಂಟ್ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟಿ ಗುಡ್‌ನ್ಯೂಸ್ ನೀಡಲಿ ಎಂದೇ ಕಾಯುತ್ತಿದ್ದಾರೆ.

ಕತ್ರಿನಾ ಕೈಫ್ ಪ್ರೆಗ್ನೆಂಟ್ ಆಗಿದ್ದಾರೆಂದು ಇದಕ್ಕೂ ಮುನ್ನ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದ್ದವು. ಈ ವರ್ಷದ ಆರಂಭದಲ್ಲಿ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ವಿವಾಹಪೂರ್ವ ಕಾರ್ಯಕ್ರದಲ್ಲಿ ಭಾಗಿಯಾಗಿದ್ದಲೂ ಇದೇ ರೀತಿಯ ಅನುಮಾನ ಉಂಟು ಮಾಡುವ ಕೆಲವು ಫೋಟೋಗಳು ಜಾಲತಾಣದಲ್ಲಿ ಹರಿದಾಡಿದ್ದವು. ಕತ್ರಿನಾ ಕೈಫ್ ಅವರು ‘ಮೇರಿ ಕ್ರಿಸ್​​ಮಸ್’ ಬಳಿಕ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.

ಇದನ್ನೂ ಓದಿ: ಸುಶ್ಮಿತಾ ಸೇನ್​ ಮಿಸ್​ ಯುನಿವರ್ಸ್​​ ಸಂಭ್ರಮಕ್ಕೆ 30 ವರ್ಷ; ಆ ಕ್ಷಣವನ್ನು ವಿಶೇಷ ಚಿತ್ರದ ಮೂಲಕ ಹಂಚಿಕೊಂಡ ನಟಿ - SUSHMITA SEN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.