ETV Bharat / entertainment

ಯಶ್​​ ಜೊತೆ ಸ್ಕ್ರೀನ್​ ಶೇರ್: 'ಟಾಕ್ಸಿಕ್​'ನಲ್ಲಿ ಕಾಣಿಸಿಕೊಳ್ಳುವ ಸುಳಿವು ಬಿಟ್ಟುಕೊಟ್ಟ ಕರೀನಾ

ಟಾಕ್ಸಿಕ್​​​ನಲ್ಲಿ ಕರೀನಾ ಕಪೂರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಊಹೆ. ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಈ ಹೊತ್ತಲ್ಲಿ ಸೌತ್​ ಸಿನಿಮಾ ಇಂಡಸ್ಟ್ರಿಯ ಬಿಗ್​ ಪ್ರಾಜೆಕ್ಟ್​ನಲ್ಲಿ ಕಾಣಿಸಿಕೊಳ್ಳುವ ಸುಳಿವನ್ನು ಸ್ವತಃ ಬಾಲಿವುಡ್​ ಬೇಬೋ ಬಿಟ್ಟುಕೊಟ್ಟಿದ್ದಾರೆ.

Kareena Kapoor hinted her debut in South Indian film
'ಟಾಕ್ಸಿಕ್​'ನಲ್ಲಿ ಕರೀನಾ ಕಪೂರ್ ಖಾನ್
author img

By ETV Bharat Karnataka Team

Published : Mar 17, 2024, 5:45 PM IST

ರಾಕಿಂಗ್​ ಸ್ಟಾರ್ ಯಶ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್‌'. ಅಪಾರ ಸಂಖ್ಯೆಯ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರೂ ಕೂಡ ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​ ಬೇಬೋ ಕರೀನಾ ಕಪೂರ್ ಖಾನ್​​ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಬಾಲಿವುಡ್​ ಬೆಡಗಿ ಕರೀನಾ ಕಪೂರ್ ಖಾನ್​​ ಇತ್ತೀಚೆಗೆ ಸೌತ್​ ಸಿನಿಮಾ ಇಂಡಸ್ಟ್ರಿಯ ಬಿಗ್​ ಪ್ರಾಜೆಕ್ಟ್​ನಲ್ಲಿ ಕಾಣಿಸಿಕೊಳ್ಳುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ಯಶ್ ಮುಂದಿನ ಸಿನಿಮಾ 'ಟಾಕ್ಸಿಕ್‌'ನಲ್ಲಿ ನಟಿಯ ಸಂಭಾವ್ಯ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಊಹಾಪೋಹಗಳು ಹುಟ್ಟಿಕೊಂಡಿವೆ.

  • " class="align-text-top noRightClick twitterSection" data="">

ಹಿಂದಿನ ವರದಿಗಳು, ಟಾಕ್ಸಿಕ್‌ನಲ್ಲಿ ಯಶ್ ಅವರೊಂದಿಗೆ ಕರೀನಾ ತೆರೆ ಹಂಚಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದವು. ಚಿತ್ರನಿರ್ಮಾಪಕರು ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಉತ್ಸುಕರಾಗಿದ್ದಾರೆಂದು ವರದಿಗಳು ತಿಳಿಸಿದ್ದವು. ಈ ವರದಿಗಳು, ಅಭಿಮಾನಿಗಳು ಅಧಿಕೃತ ಘೋಷಣೆಗೆ ಕಾತರದಿಂದ ಕಾಯುವಂತೆ ಮಾಡಿತ್ತು.

ಇದೀಗ ಶೇರ್ ಆಗಿರೋ ವಿಡಿಯೋವೊಂದರಲ್ಲಿ, ಕರೀನಾ ತಮ್ಮ ಅಭಿಮಾನಿಗಳೊಂದಿಗೆ ಝೂಮ್ ಸೆಷನ್‌ನಲ್ಲಿ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರುವ ಬಗ್ಗೆ ಮಾತನಾಡುತ್ತಿರುವುದನ್ನು ತೋರಿಸಿದೆ. ಈ ಬಗ್ಗೆ ನಟಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. "ನಾನು ಹೇಳಿದಂತೆ, ನಾನು ಬಿಗ್​ ಸೌತ್ ಪ್ರೊಜೆಕ್ಟ್ ಮಾಡುತ್ತಿರಬಹುದು. ಪ್ಯಾನ್-ಇಂಡಿಯಾ ಸಿನಿಮಾ. ಹಾಗಾಗಿ ನಾನು ಎಲ್ಲಿ ಶೂಟಿಂಗ್​​ನಲ್ಲಿ ಭಾಗಿಯಾಗುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಉತ್ಸುಕಳಾಗಿದ್ದೇನೆ. ಮೊದಲ ಬಾರಿಗೆ ಇದನ್ನು ಮಾಡುತ್ತಿದ್ದೇನೆ'' ಎಂದು ಮಾತನಾಡಿರುವ ವಿಡಿಯೋ ಅದಾಗಿದೆ.

ಇದನ್ನೂ ಓದಿ: 'ಬ್ಯಾಂಗಲೂರ್ ಇಡ್ಲಿ ಬೇಡ': ರಿಷಬ್, ಶಿವಣ್ಣ ಬಳಿಕ 'RCB' ವಿಡಿಯೋದಲ್ಲಿ ಸುದೀಪ್

ನಟಿ ಬಿಟ್ಟುಕೊಟ್ಟಿರುವ ಸುಳಿವು ಅಭಿಮಾನಿಗಳ ನಡುವೆ ವಿವಿಧ ರೀತಿಯ ಚರ್ಚೆಗೆ ಕಾರಣವಾಯಿತು. ಟಾಕ್ಸಿಕ್ ಮತ್ತು ಸಿಂಗಮ್​​​ನಂತಹ ಬಿಗ್​​ ಪ್ರಾಜೆಕ್ಟ್​ಗಳಿಂದ ಹಿಡಿದು ಜಾನೆ ಜಾನ್ ನಂತಹ ಕಂಟೆಂಟ್​​ ಆಧಾರಿತ ಚಿತ್ರಗಳವರೆಗೆ ವೈವಿದ್ಯಮಯ ಪ್ರೊಜೆಕ್ಟ್​ಗಳನ್ನು ಆಯ್ಕೆ ಮಾಡುವಲ್ಲಿನ ಕರೀನಾ ಅವರ ಬಹುಮುಖ ಪ್ರತಿಭೆಯನ್ನು ಹಲವರು ಶ್ಲಾಘಿಸಿದರು. ಬಹುಸಮಯದಿಂದ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವ ಅಭಿಮಾನಿಗಳು ಶ್ಲಾಘಿಸಿದರು. ಅದರಲ್ಲೂ ವಿಶೇಷವಾಗಿ 42ನೇ ವಯಸ್ಸಿನಲ್ಲಿ ಯಶ್ ಜೊತೆ ಪ್ಯಾನ್-ಇಂಡಿಯಾ ಚಿತ್ರದ ಭಾಗವಾಗುತ್ತಿರುವುದನ್ನು ಹೈಲೈಟ್ ಮಾಡಿದರು.

ಇದನ್ನೂ ಓದಿ: ಗೇಮ್ ಚೇಂಜರ್ ಶೂಟಿಂಗ್​ ಸ್ಪಾಟ್​ನಲ್ಲಿ ಜಮಾಯಿಸಿದ ಅಭಿಮಾನಿಗಳು: ರಾಮ್​ ಚರಣ್​​ ವಿಡಿಯೋ ವೈರಲ್​

ಮುಂದಿನ ವರ್ಷ ಏಪ್ರಿಲ್​​ನಲ್ಲಿ ಬಿಡುಗಡೆಯಾಗಲಿರುವ ಯಶ್ ಅವರ ಟಾಕ್ಸಿಕ್ ಚಿತ್ರಕ್ಕೆ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಯಶ್​ ಹಾಗೂ ಗೀತು ಮೋಹನ್‌ದಾಸ್ ಕಾಂಬಿನೇಶನ್​ನ ಚೊಚ್ಚಲ ಚಿತ್ರವಿದು. ಕರೀನಾ ಅವರ ಪಾಲ್ಗೊಳ್ಳುವಿಕೆ ಬಗೆಗಿನ ಅಧಿಕೃತ ಘೋಷಣೆಗಾಗಿ ಸಿನಿಪ್ರಿಯರು ಕಾತರರಾಗಿದ್ದಾರೆ. ನಟಿ ಸದ್ಯ ತಮ್ಮ ಕ್ರ್ಯೂ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಟಬು, ಕೃತಿ ಸನೋನ್, ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ ನಟನೆಯ ಈ ಚಿತ್ರ ಇದೇ ಮಾರ್ಚ್ 29 ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.