ETV Bharat / entertainment

ಯಕ್ಷಗಾನ ಅಥವಾ ಕಂಬಳ ಕಥೆ? ಕುತೂಹಲ ಹೆಚ್ಚಿಸಿದ ಪ್ರಜ್ವಲ್ ದೇವರಾಜ್ 'ಕರಾವಳಿ' ಪೋಸ್ಟರ್ - Prajwal Devaraj Birthday - PRAJWAL DEVARAJ BIRTHDAY

ಜನಪ್ರಿಯ ನಟ ಪ್ರಜ್ವಲ್ ದೇವರಾಜ್ ಜನ್ಮದಿನ ಹಿನ್ನೆಲೆ, 'ಕರಾವಳಿ' ಪೋಸ್ಟರ್ ಅನಾವರಣಗೊಂಡಿದೆ.

Karavali movie Poster
ಪ್ರಜ್ವಲ್ ದೇವರಾಜ್ 'ಕರಾವಳಿ' ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 4, 2024, 12:17 PM IST

'ಕರಾವಳಿ' ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಮತ್ತು ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ ಈ 'ಕರಾವಳಿ' ನಿರ್ದೇಶಕ ಗುರುದತ್ ಗಾಣಿಗ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. 'ಕರಾವಳಿ' ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇಂದು ಮತ್ತೊಂದು ಕುತೂಹಲಕಾರಿ ಪೋಸ್ಟರ್​​​​ ಅನಾವರಣಗೊಂಡಿದೆ.

ಜನಪ್ರಿಯ ನಟ ಪ್ರಜ್ವಲ್ ದೇವರಾಜ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 37ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಬರ್ತ್​ಡೇ ಪ್ರಯುಕ್ತ ಮುಂದಿನ ಬಹುನಿರೀಕ್ಷಿತ ಕರಾವಳಿ ಚಿತ್ರದಿಂದ ಪೋಸ್ಟರ್ ಅನಾವರಣಗೊಳಿಸಿ, ನಾಯಕ ನಟನಿಗೆ ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ. ಈ ಪೋಸ್ಟರ್ 'ಕರಾವಳಿ' ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾದಿಂದ ಈಗಾಗಲೇ ರಿಲೀಸ್ ಆಗಿರುವ ಪ್ರಜ್ವಲ್ ಅವರ ಎರಡು ಲುಕ್ ಸಹ ಈಗಾಗಲೇ ವೈರಲ್ ಆಗಿದೆ. ಇಂದಿನ ಮತ್ತೊಂದು ಲುಕ್ ಕಥೆ ಸುತ್ತಲಿನ ಕುತೂಹಲವನ್ನು ಹೆಚ್ಚಿಸಿದೆ.

ಪೋಸ್ಟರ್​​​ಗಳಲ್ಲಿ ಈವರೆಗೆ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್​​​, ಈ ಸಿನಿಮಾದಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಅನ್ನೋದೇ ನೋಡುಗರ ಕುತೂಹಲ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ ವಿಭಿನ್ನ ಗೆಟಪ್​​ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಪಟುವಾ? ಎಂಬ ಕುತೂಹಲ ಹೆಚ್ಚಾಗಿದೆ. ಪ್ರಜ್ವಲ್ ಅವರ ಪೋಸ್ಟರ್​​​​ಗಳನ್ನು ನೋಡುತ್ತಿದ್ದರೆ ತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರೆಯೇ ಎಂದು ಸಿನಿಪ್ರಿಯರು ಅಂದಾಜಿಸುತ್ತಿದ್ದಾರೆ.

ಇದನ್ನೂ ಓದಿ: ಒಂದು ವಾರದಲ್ಲಿ ವಿಶ್ವದಾದ್ಯಂತ ₹700 ಕೋಟಿ ಕಲೆಕ್ಷನ್​ ಮಾಡಿದ 'ಕಲ್ಕಿ', ಭಾರತದಲ್ಲೆಷ್ಟು? - Kalki Collection

ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್​​ನಲ್ಲಿ ಪ್ರಜ್ವಲ್ ಕೋಣಗಳ ಮಧ್ಯೆ ಕೊಟ್ಟಿಗೆಯಲ್ಲಿ ಕುಳಿತಿದ್ದಾರೆ. ಗಂಭೀರ ನೋಟ ಬೀರುತ್ತಾ, ಕುಳಿತಿರುವ ಪ್ರಜ್ವಲ್ ಅವರ ಸಿಂಪಲ್ ವ್ಯಕ್ತಿತ್ವದ ಲುಕ್ ಆಕರ್ಷಕವಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿರುವ ಗುರುದತ್ ಗಾಣಿಗ, 'ಹುಟ್ಟುಹಬ್ಬದ ಶುಭಾಶಯಗಳು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಸಿಕಂದರ್'​ ಪೋಸ್ಟರ್ ತಯಾರಿಸಿದ ಪಾಕಿಸ್ತಾನದ ಸಲ್ಮಾನ್ ಖಾನ್ ಅಭಿಮಾನಿ - Salman Khan Sikandar Poster

ಕರಾವಳಿ ಈಗಾಗಲೇ ಶೇ.60ರಷ್ಟು ಚಿತ್ರೀಕರಣವನ್ನು ಮುಗಿಸಿದೆ. ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಳ್ಳಲಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತವೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ಅವರ ನಿರ್ದೇಶನದ ಜೊತೆಗೆ ಅವರದ್ದೇ ಗಾಣಿಗ ಫಿಲ್ಮ್ಸ ಹಾಗೂ ವಿಕೆ ಫಿಲ್ಮ್ಸ್​ ನಿಂದ ನಿರ್ಮಾಣಗೊಳ್ಳುತ್ತಿದೆ. 'ಕರಾವಳಿ' ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್​ನಲ್ಲಿ ಸಿನಿಮಾ ಮೂಡಿಬರಲಿದೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.