ETV Bharat / entertainment

'ಲವ್​​ ಸ್ಟೋರಿಯಾನ್'​: ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ನಿಜ ಜೀವನದ 6 ಪ್ರೇಮಕಥೆಗಳ ಸೀರೀಸ್​​​

author img

By ETV Bharat Karnataka Team

Published : Feb 6, 2024, 2:02 PM IST

ಫೆಬ್ರವರಿ 14ರಂದು ಅಮೆಜಾನ್​​ ಪ್ರೈಮ್​​ ವಿಡಿಯೋದಲ್ಲಿ 'ಲವ್​​ ಸ್ಟೋರಿಯಾನ್' ಸೀರೀಸ್​​​​ ರಿಲೀಸ್​​ ಆಗಲಿದೆ.

Love Storiyaan
ಲವ್​​ ಸ್ಟೋರಿಯಾನ್

ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ದೇಶಕ - ನಿರ್ಮಾಪಕ ಕರಣ್​ ಜೋಹರ್​ ತಮ್ಮ ಮುಂದಿನ ಪ್ರೊಜೆಕ್ಟ್​​​​ ಘೋಷಿಸಿ, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದಾರೆ. ನಿಜ ಜೀವನದ ಪ್ರೇಮಕಥೆಗಳ ಆರು ಭಾಗಗಳ ಸೀರೀಸ್​​​​​​ 'ಲವ್​ ಸ್ಟೋರಿಯಾನ್​​' ಪ್ರೇಮಿಗಳ ದಿನದಂದು ಬಿಡುಗಡೆ ಆಗಲಿದೆ.

ಪ್ರೇಮಿಗಳ ದಿನದ ವಿಶಿಷ್ಟ ಸಂದರ್ಭಕ್ಕಾಗಿ ನಿಜ - ಜೀವನದ ಪ್ರೇಮ ಕಥೆಗಳ ಸರಣಿಯನ್ನು ಸಂಗ್ರಹಿಸಿದ್ದೇನೆ ಎಂದು ಕರಣ್​ ಜೋಹರ್​​ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಬಹಿರಂಗಪಡಿಸಿದ್ದಾರೆ. ಈ ಸರಣಿಯು, ದೇಶಾದ್ಯಂತದ ಆರು ಜೋಡಿಗಳ ಕಥೆಯನ್ನೊಳಗೊಂಡಿದೆ. ಅವರು ತಮ್ಮ ಪ್ರೀತಿ, ಭರವಸೆ, ಸಂತೋಷ ಮತ್ತು ಗೆಲುವಿನ ಕಥೆಗಳನ್ನು ಹಂಚಿಕೊಂಡಿದ್ದಾರೆ. ಈ ಸರಣಿಯು ಅಮೆಜಾನ್​​ ಪ್ರೈಮ್​​ ವಿಡಿಯೋದಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿದ ಕರಣ್​ ಜೋಹರ್​​, "ಭಾರತದಾದ್ಯಂತದ ಸಚ್ಚಿ ಮೊಹಬ್ಬತ್ ಕಿ ಸಚ್ಚಿ ಕಹಾನಿಯಾನ್ - ಈ ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಬಳಿಗೆ ಬರಲಿದೆ. ಫೆಬ್ರವರಿ 14 ರಂದು ಅಮೆಜಾನ್​​ ಪ್ರೈಮ್​​ ವಿಡಿಯೋದಲ್ಲಿ ಮಾತ್ರ 'ಲವ್​​ ಸ್ಟೋರಿಯಾನ್' ಸೀರಿಸ್​ ಲಭ್ಯವಾಗಲಿದೆ'' ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ ಇಂಡಿಕರ್, ಅರ್ಚನಾ ಫಡ್ಕೆ, ಕೊಲಿನ್ ಡಿ'ಕುನ್ಹಾ, ಹಾರ್ದಿಕ್ ಮೆಹ್ತಾ, ಶಾಜಿಯಾ ಇಕ್ಬಾಲ್ ಮತ್ತು ವಿವೇಕ್ ಸೋನಿ ಎಂಬ ಆರು ನಿರ್ದೇಶಕರು ಈ ಸೀರಿಸ್​​ನಲ್ಲಿ ಕೆಲಸ ಮಾಡಿದ್ದಾರೆ. ಧರ್ಮಟಿಕ್ ಎಂಟರ್‌ಟೈನ್‌ಮೆಂಟ್ ಈ ಸೀರೀಸ್​​​​ ಅನ್ನು ನಿರ್ಮಾಣ ಮಾಡಿದೆ. ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಸೋಮೆನ್ ಮಿಶ್ರಾ ಕಾರ್ಯ ನಿರ್ವಾಹಕ ನಿರ್ಮಾಪಕರಾಗಿ ಈ ತಂಡದ ಭಾಗವಾಗಿದ್ದಾರೆ. ಈ ಸೀರಿಸ್​, ಮಾಜಿ ಪತ್ರಕರ್ತರಾದ ಪ್ರಿಯಾ ರಮಣಿ, ಸಮರ್ ಹಲರ್ನ್‌ಕರ್ ಮತ್ತು ನಿಲೋಫರ್ ವೆಂಕಟರಮಣ್​​ ಅವರು ಸ್ಥಾಪಿಸಿದ ಸೋಷಿಯಲ್​ ಮೀಡಿಯಾ ಕಮ್ಯುನಿಟಿ 'ಇಂಡಿಯಾ ಲವ್ ಪ್ರಾಜೆಕ್ಟ್‌'ನ ನಿಜ ಜೀವನದ ಕಥೆಗಳಿಂದ ಪ್ರೇರಿತವಾಗಿದೆ.

ಇದನ್ನೂ ಓದಿ: ರಿಲೀಸ್​ಗೆ ರೆಡಿ 'ನಗುವಿನ ಹೂಗಳ ಮೇಲೆ': ಹಿರಿತೆರೆಯಲ್ಲಿ‌‌ ಮೋಡಿ ಮಾಡಲು ಸಜ್ಜಾಯ್ತು ಕಿರುತೆರೆ ಜೋಡಿ

ಕರಣ್ ಜೋಹರ್ ಅವರ ಧರ್ಮಟಿಕ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಈ ಸೀರೀಸ್​​ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಪ್ರೈಮ್ ವಿಡಿಯೋದಲ್ಲಿ ಲಾಂಚ್​ ಆಗಲಿದೆ. ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ನಿರ್ದೇಶಕ ಕರಣ್​​ ಜೋಹರ್, 'ಅಭಿಮಾನಿಗಳಿಗೆ ನಿಜ ಜೀವನದ ಕಥೆಗಳನ್ನು ಹೇಳುವ ಧರ್ಮಟಿಕ್‌ನ ಮೊದಲ ಪ್ರಯತ್ನ ಇದು' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಗ್ಗಿದ ಗಳಿಕೆ: 'ಫೈಟರ್'​ ಚಿತ್ರ 12 ದಿನದ ಕಲೆಕ್ಷನ್​ ಹೀಗಿದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.