ETV Bharat / entertainment

'ಕಾಂತಾರ ಶೂಟಿಂಗ್ ಬಹಳ ನಿಗೂಢವಾಗಿರುತ್ತಿತ್ತು': ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರದ ಪೋಷಕ ನಟರು ಅಚ್ಯುತ್, ಪ್ರಮೋದ್ - Achyuth Kumar Pramod Shetty - ACHYUTH KUMAR PRAMOD SHETTY

ಸ್ಯಾಂಡಲ್​ವುಡ್ ಒಟ್ಟು​​ 6 ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 'ಕಾಂತಾರ' ಸಿನಿಮಾ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಮನರಂಜನಾ ವಿಭಾಗದಲ್ಲಿ ಒಟ್ಟು ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಚಿತ್ರದಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿರುವ ಅಚ್ಯುತ್ ಕುಮಾರ್ ಹಾಗೂ ಪ್ರಮೋದ್ ಶೆಟ್ಟಿ 'ಈಟಿವಿ ಭಾರತ' ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Achyuth Kumar Pramod shetty
ನಟರಾದ ಅಚ್ಯುತ್​​ ಕುಮಾರ್ ಮತ್ತು ಪ್ರಮೋದ್​ ಶೆಟ್ಟಿ (ETV Bharat)
author img

By ETV Bharat Karnataka Team

Published : Aug 16, 2024, 7:15 PM IST

ನಟ ಅಚ್ಯುತ್​ ಕುಮಾರ್​ ಮಾತು (ETV Bharat)

2024ರ ವರಮಹಾಲಕ್ಷ್ಮೀ ಹಬ್ಬದ ದಿನ ಕನ್ನಡ ಚಿತ್ರರಂಗಕ್ಕೆ ಶುಭಸುದ್ದಿ ತಂದುಕೊಟ್ಟಿದೆ. ಹೌದು, ಸ್ಯಾಂಡಲ್​ವುಡ್ ಒಟ್ಟು​​ 6 ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 'ಕಾಂತಾರ' ಸಿನಿಮಾ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಮನರಂಜನಾ ವಿಭಾಗದಲ್ಲಿ ಒಟ್ಟು ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಈ ಚಿತ್ರದಲ್ಲಿ ಜಮೀನ್ದಾರನ ಪಾತ್ರ ನಿರ್ವಹಿಸಿರುವ ಅಚ್ಯುತ್ ಕುಮಾರ್ ಹಾಗೂ ಈ ಜಮೀನ್ದಾರನ ಸಹಾಯಕನಾಗಿ ಅಭಿನಯಿಸಿರುವ ಪ್ರಮೋದ್ ಶೆಟ್ಟಿ 'ಈಟಿವಿ ಭಾರತ' ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ನಟ ಅಚ್ಯುತ್​ ಕುಮಾರ್​ ಮಾತನಾಡಿ, ಬಹಳ ಸಂತೋಷ ಆಗುತ್ತಿದೆ. ನನಗೆ, ರಿಷಬ್ ಶೆಟ್ಟಿಗೆ ಹಾಗೂ ಇಡೀ ತಂಡಕ್ಕೆ ಖುಷಿ ತಂದಿದೆ. ಹೆಚ್ಚಾಗಿ ರಿಷಬ್ ಶೆಟ್ಟಿ ರಾತ್ರಿ ಹೊತ್ತು ಚಿತ್ರೀಕರಣ ನಡೆಸುತ್ತಿದ್ದರು. ಕಾಡಿನಲ್ಲಿ ಚಿತ್ರೀಕರಣ ಮಾಡಬೇಕಾದಾಗ ಒಂಥರಾ ನಿಗೂಢವಾಗಿ ಇರುತ್ತಿತ್ತು ಎಂದು ತಮಾಷೆ ಮಾಡಿದರು. ಇನ್ನೂ ಚಿತ್ರದ ಕೊನೆಯಲ್ಲಿ ಬರುವ ಕ್ಲೈಮಾಕ್ಸ್ ಸೀನ್ ಬಗ್ಗೆ ನನಗೆ ಹೇಳಿರಲಿಲ್ಲ.‌ ಸಿನಿಮಾ ನೋಡಿದ ಬಳಿಕ ನನಗೂ ಆಶ್ಚರ್ಯ ಆಗಿತ್ತು. ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತ್ತು ಎಂದು ತಿಳಿಸಿದರು.

ಇದರ ಜೊತೆಗೆ ನಮ್ಮ ಕೆಲಸಗಳನ್ನು ಗುರುತಿಸಲ್ಪಟ್ಟು ಇಂತಹ ಪ್ರಶಸ್ತಿಗಳು ಬಂದಾಗ ನಮಗೆ ಮತ್ತಷ್ಟು ಒಳ್ಳೆ ಸಿನಿಮಾಗಳನ್ನು ಮಾಡಲು ಉತ್ಸಾಹ ಬರುತ್ತದೆ. ಈ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು ನನಗೆ ಹಾಗೂ ನಮ್ಮ ಚಿತ್ರತಂಡಕ್ಕೆ ಸಂತೋಷ ತಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: 'ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ';​ ಯಶ್, ವಿಕ್ರಮ್​​ ಕರೆಮಾಡಿ ವಿಶ್ ಮಾಡಿದ್ರು: ರಿಷಬ್ ಶೆಟ್ಟಿ - Rishab Shetty

ಕಾಂತಾರ ಚಿತ್ರದಲ್ಲಿ ಜಮೀನ್ದಾರನ ಸಹಾಯಕನ ಪಾತ್ರ ನಿರ್ವಹಿಸಿರುವ ಪ್ರಮೋದ್ ಶೆಟ್ಟಿ ಮಾತನಾಡಿ, ನಮ್ಮ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು ಖುಷಿಯಾಗುತ್ತಿದೆ. ನಾವು ಮೊದಲು ಮನರಂಜನಾ ವಿಭಾಗದಲ್ಲಿ ಪ್ರಶಸ್ತಿ ಬರುತ್ತದೆ ಅಂತಾ ಅಂದುಕೊಂಡಿದ್ದೆವು. ಅದರಲ್ಲಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿರೋದು ಬಹಳಾನೇ ಖುಷಿ ಆಗುತ್ತಿದೆ. ಏಕೆಂದರೆ ರಂಗಭೂಮಿಯಿಂದ ನಾವಿಬ್ಬರೂ ಒಟ್ಟಿಗೆ ಬಂದಿದ್ದು, ಸ್ಟೇಟ್ ಲೆವೆಲ್ ನಾಟಕ ಸ್ಪರ್ಧೆಯಲ್ಲಿ ರಿಷಬ್​​ ಸ್ಟೇಟ್ ಅವಾರ್ಡ್ ತೆಗೆದುಕೊಂಡಿದ್ದರು. ಇದೀಗ ಅತ್ಯುತ್ತಮ ನಟನಗೆ ನ್ಯಾಷನಲ್ ಆವಾರ್ಡ್​ ಬಂದಿರುವುದು ಬಹಳ ಖುಷಿ ಕೊಟ್ಟಿದೆ. ನಾವಿಬ್ಬರೂ ಆತ್ಮೀಯ ಸ್ನೇಹಿತರು. ಆದರೂ ಒಂದು ದಿನವೂ ನಾವಿಬ್ಬರೂ ಫ್ರೆಂಡ್​ಶಿಪ್ ಡೇ ಅಂತಾ ಆಚರಣೆ ಮಾಡಿಲ್ಲ. ಬಹುಶಃ ಇದರಿಂದಾಗಿಯೇ ನಮ್ಮ ಸ್ನೇಹದಲ್ಲಿ ಯಾವುದೇ‌ ಮನಸ್ತಾಪ ಆಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಿಷಬ್ ​ಶೆಟ್ಟಿ ಅತ್ಯುತ್ತಮ ನಟ - National Film Awards

ಶೂಟಿಂಗ್ ಅನುಭವ ಚೆನ್ನಾಗಿತ್ತು. ನಾವು ಕರಾವಳಿ ಭಾಗದವರಾಗಿರುವುದರಿಂದ ನಮಗೆ ನೈಟ್​​ ಶೂಟಿಂಗ್ ಕಷ್ಟ ಅನಿಸಲಿಲ್ಲ. ಈ ಸಿನಿಮಾಗಾಗಿ ಲೈಟ್ ಬಾಯ್‌ನಿಂದ ಹಿಡಿದು ಪ್ರತಿಯೊಬ್ಬರೂ ಶ್ರಮ ಹಾಕಿದ್ದು, ಸಿನಿಮಾ ಗೆಲ್ಲಲು ಪ್ರಮುಖ ಕಾರಣ ಅನ್ನೋದು ರಿಷಬ್ ಶೆಟ್ಟಿ ಅವರ ನಂಬಿಕೆ ಎಂದು ಪ್ರಮೋದ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.