ETV Bharat / entertainment

ಸೆನ್ಸಾರ್​ ಪರೀಕ್ಷೆಯಲ್ಲಿ 'ಪೌಡರ್​' ಪಾಸ್​: ಸ್ವಾತಂತ್ರ್ಯ ದಿನದಂದು ಸ್ಪೆಷಲ್​ ಪೋಸ್ಟ್​ ಶೇರ್ - Powder

author img

By ETV Bharat Karnataka Team

Published : Aug 15, 2024, 4:39 PM IST

ಜನಾರ್ಧನ್​ ಚಿಕ್ಕಣ್ಣ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ಚಿತ್ರ 'ಪೌಡರ್​'. ದಿಗಂತ್ ಮಂಚಾಲೆ​, ಧನ್ಯಾ ರಾಮ್​​ಕುಮಾರ್ ಜೊತೆಗೆ ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರ ನಿರ್ವಹಿಸಿರುವ ಈ ಚಿತ್ರ ಸೆನ್ಸಾರ್​ ಪರೀಕ್ಷೆಯಲ್ಲಿ ಪಾಸಾಗಿ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಜೊತೆಗೆ, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಚಿತ್ರತಂಡ ಸ್ಪೆಷಲ್​ ಪೋಸ್ಟ್​​ ಶೇರ್ ಮಾಡಿದೆ.

powder poster
ಪೌಡರ್ ಸಿನಿಮಾಗೆ ಯು/ಎ ಸರ್ಟಿಫಿಕೇಟ್ (KRG Studios Instagram)

'ಪೌಡರ್​​'. ಸ್ಯಾಂಡಲ್​ವುಡ್​ನ ದಿ ಮೋಸ್ಟ್​​ ಎಕ್ಸ್​​ಪೆಕ್ಟೆಡ್​ ಕಾಮಿಡಿ ಡ್ರಾಮಾ. ಶೀರ್ಷಿಕೆ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಇತ್ತೀಚೆಗಷ್ಟೇ ಟ್ರೇಲರ್​​​ ಅನಾವರಣಗೊಳಿಸಿತ್ತು. ಇನ್ನೊಂದು ವಾರದಲ್ಲಿ ಬಿಡುಗಡೆ ಆಗಲಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದೆ. ಇತರೆ ಚಿತ್ರತಂಡಗಳಂತೆ ಕನ್ನಡ ಚಿತ್ರರಂಗದ ಯಶಸ್ಸಿಗೆ ಪೌಡರ್​​ ತಂಡ ಕೂಡ ಶ್ರಮಿಸುತ್ತಿದ್ದು, ಅಭಿಮಾನಿಗಳಿಗೊಂದು ಗುಡ್​ ನ್ಯೂಸ್​ ಕೊಟ್ಟಿದೆ.

ಸಿನಿಮಾ ಹಿಂದಿರುವ ಕೆಆರ್​ಜಿ ಸ್ಟುಡಿಯೋಸ್​​ ಮತ್ತು ನಾಯಕ ನಟ ದಿಗಂತ್​ ಮಂಚಾಲೆ ಇಂದು ತಮ್ಮ ಅಫೀಶಿಯಲ್​​​ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​​​ಗಳಲ್ಲಿ ಪೋಸ್ಟ್​​ ಶೇರ್ ಮಾಡಿ ಸೆನ್ಸಾರ್​ ಪರೀಕ್ಷೆಯಲ್ಲಿ ತಮ್ಮ ಚಿತ್ರ ಪಾಸಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಪೌಡರ್​ ಪೋಸ್ಟರ್​​ ಬಹಳ ಅರ್ಥಪೂರ್ಣವಾಗಿದೆ. ಚಿತ್ರ ಯು/ಎ ಸರ್ಟಿಫಿಕೇಟ್​​ ಪಡೆದಿದ್ದು, U/A ಎಂಬುದು ಕೇಸರಿ ಬಿಳಿ ಹಸಿರು ಬಣ್ಣದಲ್ಲಿದೆ. ಜೊತೆಗೆ, ಪೌಡರ್​​ ಕೂಡ ಕೇಸರಿ ಬಣ್ಣದಲ್ಲಿ ಎದ್ದು ಕಾಣುತ್ತಿದೆ.

ಪೌಡರ್​​ ಒಂದು ಹಾಸ್ಯಮಯ ಸಿನಿಮಾ. ಜನಾರ್ಧನ್​ ಚಿಕ್ಕಣ್ಣ ಆ್ಯಕ್ಷನ್​​ ಕಟ್​​ ಹೇಳಿರುವ ಈ ಚಿತ್ರದಲ್ಲಿ ದಿಗಂತ್​​ ಮಂಚಾಲೆ, ಧನ್ಯಾ ರಾಮ್​ಕುಮಾರ್​​​​ ಮುಖ್ಯಭೂಮಿಕೆಯಲ್ಲಿದ್ದು, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ, ರಂಗಾಯಣ ರಘು, ಅನಿರುದ್ಧ್ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ನಾಗಭೂಷಣ್ ಸೇರಿದಂತೆ ಹಲವರು ಈ ಪೌಡರ್​ ಚಿತ್ರದಲ್ಲಿ ನಟಿಸಿದ್ದಾರೆ.

ಒಂದು ಮ್ಯಾಜಿಕಲ್​ ಪೌಡರ್​ ಪ್ರಭಾವಕ್ಕೊಳಗಾಗಿ ಯುವಕರು ಶ್ರೀಮಂತರಾಗಲು ಮಾಡುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ನಿಜವಾಗಿಯೂ ಈ ಪೌಡರ್ ವರ್ಕ್​​​ಔಟ್​ ಆಗುತ್ತಾ? ಅದನ್ನು ಬಳಸಿದ ಮೇಲೆ ಅವರಿಗೆ ಎದುರಾದ ಸವಾಲುಗಳೇನು? ಎಂಬುದರ ಸುತ್ತ ಕಥೆ ಸಾಗುತ್ತದೆ. ಇದೊಂದು ಕಂಪ್ಲೀಟ್​​ ಫ್ಯಾಮಿಲಿ ಎಂಟರ್​​ಟೈನ್ಮೆಂಟ್​ ಸಿನಿಮಾ. ಸಂಪೂರ್ಣ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದಾದ ಹಾಸ್ಯಚಿತ್ರವಾಗಿದ್ದು, ಸೆನ್ಸಾರ್​​ ಪರೀಕ್ಷೆಯಲ್ಲೂ ಫುಲ್​ ಮಾರ್ಕ್ಸ್‌ ಗಿಟ್ಟಿಸಿಕೊಂಡಿದೆ.

ಇನ್ನೂ ಸ್ವಾತಂತ್ರ್ಯ ದಿನದ ಸಲುವಾಗಿ ಹಂಚಿಕೊಂಡಿರುವ ವಿಶೇಷ ವಿಡಿಯೋದಲ್ಲಿ ಚಿತ್ರತಂಡದವರು ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ. ಒಬ್ಬೊಬ್ಬರಾಗೇ ಬಂದು ಡೈಲಾಗ್ಸ್​​ ಹೊಡೆದಿದ್ದಾರೆ. ವಿಡಿಯೋದಲ್ಲಿ, ''ಎಲ್ಲರಿಗೂ ಸ್ವಾತಂತ್ರ್ಯ ಹಬ್ಬದ ಶುಭಾಶಯಗಳು. ಸ್ವಾತಂತ್ರ್ಯ ಭಾರತದಲ್ಲಿ, ಸ್ವಾತಂತ್ರ್ಯ ರಾಜ್ಯದಲ್ಲಿ, ಸ್ವಾತಂತ್ರ್ಯ ಮಹಾನಗರಿಯಲ್ಲಿ. ಮಾತಿನ ಸ್ವಾತಂತ್ರ್ಯ ಎಷ್ಟು ಮುಖ್ಯವೋ, ನಗುವಿನ ಸ್ವಾತಂತ್ರ್ಯವೂ ಅಷ್ಟೇ ಮುಖ್ಯ. ನಗಲು, ಮಜಾ ಮಾಡಲು, ತರ್ಲೆ ಮಾಡಲು ಫುಲ್​ ಫ್ರೀಡಂ ಇದೆ. ಸೋ ಕಮ್​, ಎಂಜಾಯ್​ ಯುವರ್​ ಫ್ರೀಡಂ. ನಮ್ಮ ಸಿನಿಮಾ ಪೌಡರ್​ ಕೂಡಾ ಆಗಸ್ಟ್​ 23ಕ್ಕೆ ಬಿಡುಗಡೆ ಆಗುತ್ತಿದೆ. ನೋಡಿ, ಎಂಜಾಯ್​ ಮಾಡಿ, ಪ್ರೋತ್ಸಾಹಿಸಿ'' ಎಂದು ತಂಡದವರು ತಿಳಿಸಿದ್ದಾರೆ.

ಇದನ್ನೂ ಓದಿ: 'ಹೋರಾಟಗಳು ನೂರೆಂಟು, ಸ್ವಾತಂತ್ರ್ಯಕ್ಕೆ ವರುಷ ಎಪ್ಪತ್ತೆಂಟು': ಕಿಚ್ಚ ಸೇರಿ ಸೆಲೆಬ್ರಿಟಿಗಳ ಶುಭಾಶಯ - Celebrities Independence Day Wishes

ಯೋಗಿ ಜಿ.ರಾಜ್, ಕಾರ್ತಿಕ್ ಗೌಡ, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ ಸ್ಟುಡಿಯೋಸ್​​ ಬ್ಯಾನರ್​ ಅಡಿ ಹಾಗೇ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್​ ಅಡಿ ಪೌಡರ್​ ಚಿತ್ರ ನಿರ್ಮಿಸಿದ್ದು, ಆಗಸ್ಟ್ 23ಕ್ಕೆ ಬಿಡುಗಡೆ ಆಗಲಿದೆ. ಮಿಷನ್‌ ಘಮ ಘಮ, ಪರಪಂಚ ಘಮ ಘಮ ಹಾಡುಗಳು, ಪೋಸ್ಟರ್, ಗ್ಲಿಂಪ್ಸ್​​ ಈಗಾಗಲೇ ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಟ್ರೇಲರ್​ ಕೂಡಾ ಅನಾವರಣಗೊಂಡಿತ್ತು.

ಇದನ್ನೂ ಓದಿ: ಇದು ಡೊಳ್ಳೊಟ್ಟೆ ಪೊಲೀಸ್ ಕಾನ್ಸ್​​​​ಟೇಬಲ್​​​​ ಕಥೆ: 'ಲಾಫಿಂಗ್​ ಬುದ್ಧ'ನ ಮನರಂಜನೆಗೆ ರೆಡಿಯಾಗಿ - Laughing Buddha Trailer

ETV Bharat Logo

Copyright © 2024 Ushodaya Enterprises Pvt. Ltd., All Rights Reserved.