ETV Bharat / entertainment

ಜಗದೀಶ್​ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು; ರಣಾಂಗಣವಾದ ಬಿಗ್ ಬಾಸ್ ಮನೆ - KANNADA BIGG BOSS 11

ಬಿಗ್​ ಬಾಸ್​ ಮನೆಯಲ್ಲಿ ಈಗ ಲಾಯರ್​ ಜಗದೀಶ್​ ವಿರುದ್ಧ ಎಲ್ಲಾ ಸ್ಪರ್ಧಿಗಳು ತಿರುಗಿಬಿದ್ದಿದ್ದು, ಕುತೂಹಲ ಮೂಡಿಸಿದೆ.

BIGG BOSS
ಬಿಗ್ ಬಾಸ್ (ETV Bharat)
author img

By ETV Bharat Karnataka Team

Published : Oct 17, 2024, 1:38 PM IST

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ರಿಯಾಲಿಟಿ ಶೋ ಎಂದು ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಒಂದು ತಿಂಗಳು ಮುಗಿಯೋ ಹೊತ್ತಲ್ಲೇ ಕುಂಬಳಗೋಡಿನಲ್ಲಿರೋ ಬಿಗ್ ಬಾಸ್ ಮನೆಯಲ್ಲಿ ಯುದ್ಧವೇ ಆಗಿದೆ.

ಈ ಶೋನ ಮುಖವಾಣಿಯಾಗಿರುವ ಕಿಚ್ಚ ಸುದೀಪ್ ಯಾವಾಗ ಮುಂದಿನ ವರ್ಷ ಬಿಗ್‌ ಬಾಸ್ 12ರ ಸೀಸನ್ ಅನ್ನು ತಾನು ಹೋಸ್ಟ್ ಮಾಡೋಲ್ಲ ಅಂತಾ ಹೇಳುವ ಮ‌ೂಲಕ ಬಿಗ್ ಬಾಸ್ ವೀಕ್ಷಕರಷ್ಟೇ ಅಲ್ಲದೇ ಸದ್ಯ ಬಿಗ್ ಬಾಸ್ ಮನೆಯಲ್ಲಿರೋ ಕಂಟೆಂಸ್ಟ್ ಗಳಿಗೆ ಬೇಸರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಬಾರಿಯ ಬಿಗ್​ಬಾಸ್ ಮನೆಯ ಟ್ರಂಪ್​ ಕಾರ್ಡ್ ಆಗಿರುವ ಲಾಯರ್ ಜಗದೀಶ್ ಆರ್ಭಟ ಕಳೆದ ಎರಡು ವಾರಕ್ಕಿಂತ ಈ ವಾರ ಜಾಸ್ತಿನೇ ಆಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ರಿವೀಲ್ ಆಗಿರುವ ಇವತ್ತಿನ ಪ್ರೋಮೋ.

ನಿನ್ನೆ ಅನಾವರಣಗೊಂಡ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ, ಉಗ್ರಂ ಮಂಜು ಹಾಗು ತ್ರಿವಿಕ್ರಮ್ ಜೊತೆ ವಾಗ್ವಾದಕ್ಕೆ ಇಳಿದಿದ್ದ ಲಾಯರ್ ಜಗದೀಶ್ ಹಾಗು ತ್ರಿವಿಕ್ರಮ್ ಮಧ್ಯೆ ಹೋಗೋ ಬಾರೋ ಎಂಬ ಏಕವಚನದ ಮಾತುಗಳು ಕೇಳಿಬಂದು ಅತಿರೇಕಕ್ಕೆ ಹೋಗಿತ್ತು. ಅಲ್ಲದೆ, ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ತ್ರಿವಿಕ್ರಮ್ ಕೈ ಕೈ ಮಿಲಾಯಿಸಿದ್ದಾರೆ ಎಂಬ ಕಾರಣಕ್ಕೆ ಈ ಇಬ್ಬರು ಸ್ಪರ್ಧಿಗಳನ್ನ ಬಿಗ್ ಬಾಸ್ ಮನೆಯಿಂದ ಕಿಕ್ ಔಟ್ ಮಾಡಲಾಗಿದೆ ಅನ್ನುವುದರ ಜೊತೆಗೆ ಜಗದೀಶ್ ಅವರ ಕೆಲ‌ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ವು. ಬಿಗ್ ಬಾಸ್ ನೋಡುವ ವೀಕ್ಷಕರು ಕೂಡ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ್ರು ಅಂತಾ ಅಂದುಕೊಂಡಿದ್ರು. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಆಗಿರೋದೇ ಬೇರೆ.

ಯೆಸ್ ಕಳೆದ ವಾರ ಸುದೀಪ್ ಅವರಿಂದ ಮೆಚ್ಚುಗೆ ಮಾತುಗಳ ಜೊತೆಗೆ ಉಡಾಫೆ ಮಾತುಗಳಿಗೆ ಕಿಚ್ಚನಿಂದ
ಲಾಯರ್ ಜಗದೀಶ್​ಗೆ ಸರಿಯಾಗಿ ಕ್ಲಾಸ್ ಆಗಿತ್ತು. ಇಷ್ಟು ಆದರೂ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗಳ ಜೊತೆ ಹೊಂದಿಕೊಂಡು ಹೋಗ್ತಾರೆ ಅಂದುಕೊಂಡಿದ್ರು. ಆದ್ರೆ ಜಗದೀಶ್ ಸಹ ಸ್ಪರ್ಧಿ ಚೈತ್ರಾ ಕುಂದಾಪುರಗೆ ಏಕವಚನದ ಪದ ಬಳಸುವ ಜೊತೆಗೆ ಇಡೀ ಬಿಗ್ ಬಾಸ್ ಮನೆ ಜಗದೀಶ್ ವಿರುದ್ಧ ತಿರುಗಿ ಬಿದ್ದಿದೆ. ಇದರ ಜೊತೆ ಹಂಸ ಅವರು ಜಗದೀಶ್ ಅವರನ್ನು ನೀವೇ ವಾಪಸ್​ ಕರೆಯಿಸಿಕೊಳ್ಳುತ್ತೀರಾ ಇಲ್ಲಾ ನಾವೇ ಹೊಡಿಸಬೇಕಾ ಅಂತಾ ಬಿಗ್ ಬಾಸ್ ಗೆ ಆವಾಜ್ ಬಿಟ್ಟಿದ್ದಾರೆ.

ಇನ್ನು ಬಿಗ್​ ಬಾಸ್​ ಸೀಸನ್​ 11ರಲ್ಲಿ ಸ್ಟ್ರಾಂಗ್ ಕಂಟೆಂಸ್ಟ್ ಆಗಿರುವ ಲಾಯರ್ ಜಗದೀಶ್ ಸಹ ಸ್ಪರ್ಧಿಗಳ ದೃಷ್ಟಿಯಲ್ಲಿ ಜಗದೀಶ್ ಕೆಟ್ಟವನಾಗಿದ್ರೂ ಕೂಡ ಒಳ್ಳೆ ಎಂಟರ್​ಟೈನರ್. ಅದಕ್ಕೆ ಸಾಕ್ಷಿ ಗೋಲ್ಡ್ ಸುರೇಶ್ ಜೊತೆ ಜಗದೀಶ್ ನನ್ನ ಕುಚಿಕೋ ಗೆಳೆಯ ಅಂತಾ ಹೇಳಿರುವ ಪ್ರೋಮೋ.

ಹೌದು, ಈ ಬಾರಿಯ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಟ್ರಾಂಗ್ ಕಂಟೆಂಸ್ಟ್ ಪೈಕಿ ಜಗದೀಶ್ ಕೂಡ ಒಬ್ಬರು. ಸಹ‌ ಸ್ಪರ್ಧಿಗಳೆಲ್ಲ ನನ್ನ ವಿರುದ್ಧ ಆಗಿದ್ದಾರೆ ಅಂತಾ ತಿಳಿದು ಜಗದೀಶ್ ಗೋಲ್ಡ್ ಸುರೇಶ್ ಗೆ ಹೇಗೆ ಬೆಣ್ಣೆ‌ ಹಚ್ಚುತ್ತಿದ್ದಾರೆ ನೋಡಿ. ಎಲ್ಲಾರ ತಲೆಯಲ್ಲಿ ಏನು ಓಡ್ತಾ ಇದೆ ಅಂತಾ ನಾನೇ ತಲೆಗೆ ಹುಳ ಬಿಟ್ಟಿದ್ದೀನಿ ಅಂತಾ ಧರ್ಮ ಕೀರ್ತಿರಾಜ್, ಧನರಾಜ್ ಗೆ ಹೇಳಿದ್ದಾರೆ. ಹಾಗೇ ಧನರಾಜ್ ಗೆ ನೀನು ನನ್ನ ತಮ್ಮನಥರ ಅಂತಾ ಪುಸಲಾಯಿಸುತ್ತಿದ್ದಾರೆ. ಇದರಲ್ಲಿ ಐಶ್ವರ್ಯ ಸಿಂಧೋಗಿ ಹತ್ತಿರ ಮದುವೆ ಬಗ್ಗೆ ಮಾತನಾಡೋದು, ನಾನೇ ಎಲ್ಲಾ ಟಿವಿಯಲ್ಲಿ ಕಾಣಿಸ್ತಿನಿ ಎಂಬ ಅತಿಯಾದ ಆತ್ಮವಿಶ್ವಾಸ ನೋಡುಗರಿಗೆ ಸಕತ್ ಎಂಟರ್​ಟೈನ್​ಮೆಂಟ್​ ಆಗಿದೆ.

ಇನ್ನು, ಜಗದೀಶ್ ಆರ್ಭಟಕ್ಕೆ ಬಿಗ್ ಬಾಸ್​ನ ಎಲ್ಲಾ ಸ್ಪರ್ಧಿಗಳು ಏನು ಮಾಡಿದ್ರು ಅನ್ನೋದು ಇವತ್ತಿನ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: 'ಸದ್ದು', ಯಾರೂ ತುಟಿಕ್​ ಪಿಟಿಕ್​ ಅನ್ನೋ ಹಾಗಿಲ್ಲ! ತಾಳ್ಮೆ ಕಳೆದುಕೊಂಡ ಬಿಗ್ ​​ಬಾಸ್​: ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.