ಶಿಮ್ಲಾ (ಹಿಮಾಚಲ ಪ್ರದೇಶ): ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದೇಶದ ರೈತರ ಪ್ರತಿಭಟನೆಯನ್ನು ಬಾಂಗ್ಲಾದೇಶ ದಂಗೆಗೆ ಹೋಲಿಸಿ ಮಾತನಾಡಿದ್ದಾರೆ. ರೈತರ ಹೋರಾಟದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಹೇಳಿದ್ದು, ನಟಿಯ ಹೇಳಿಕೆಗಳಿಗೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ವಿಡಿಯೋವನ್ನು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ''ಬಾಂಗ್ಲಾದೇಶದಲ್ಲಿ ಏನಾಯಿತು, ಒಂದು ವೇಳೆ ನಮ್ಮ ದೇಶದ ನಾಯಕತ್ವ ಬಲವಾಗಿರಲಿಲ್ಲವೆಂದರೆ ಇಲ್ಲಿಯೂ (ಭಾರತದಲ್ಲಿ) ಅಂತಹ ಘಟನೆಗಳು ಸಂಭವಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರಲಿಲ್ಲ" ಎಂಬುದಾಗಿ ಹೇಳಿದ್ದಾರೆ.
Kangana Ranaut: Bangladesh like anarchy could have happened in India also like in the name of Farmers protest. Outside forces are planning to destroy us with the help of insiders. If it wouldn't have been foresight of our leadership they would have succeded. pic.twitter.com/05vSeN8utW
— Megh Updates 🚨™ (@MeghUpdates) August 25, 2024
'ರೈತ ಪ್ರತಿಭಟನೆ ಒಂದು ಪ್ಲ್ಯಾನ್': ಇಲ್ಲಿ ನಡೆದ ರೈತ ಪ್ರತಿಭಟನೆ ಸಂದರ್ಭ ಅನೇಕ ಸಾವುನೋವುಗಳಾದವು. ಅತ್ಯಾಚಾರಗಳಂತಹ ದುರ್ಘಟನೆಯೂ ಸಂಭವಿಸಿತು. ರೈತರ ಹಿತಾಸಕ್ತಿಯನ್ನೊಳಗೊಂಡ ಮಸೂದೆಯನ್ನು ಹಿಂತೆಗೆದುಕೊಂಡಾಗ ಇಡೀ ದೇಶಕ್ಕೇನೆ ಶಾಕ್ ಆಯಿತು. ಆ ರೈತರಿನ್ನೂ ಅಲ್ಲೇ ಕುಳಿತಿದ್ದಾರೆ. ಬಿಲ್ ಹಿಂಪಡೆದಿರುವುದು ಸಹ ಅವರಿಗೆ ಗೊತ್ತಿಲ್ಲ. ಇದು ಬಾಂಗ್ಲಾದೇಶದಲ್ಲಿ ನಡೆದಂತೆ ದೀರ್ಘಾವಧಿಯ ಯೋಜನೆಯಾಗಿತ್ತು. ಈ ರೀತಿಯ ಷಡ್ಯಂತ್ರದ ಹಿಂದೆ ಚೀನಾ ಮತ್ತು ಅಮೆರಿಕದಂತಹ ವಿದೇಶಿ ಶಕ್ತಿಗಳಿದ್ದವು. ಅವು ಇಲ್ಲಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
DSGMC strongly objects the deliberate attempt by Ms. Kangana Ranaut, Director & Co-Producer to misrepresent Sikhs as the separatists in her upcoming movie " emergency".
— Harmeet Singh Kalka (@hskalka) August 22, 2024
in the teaser released recently, it is observed that an anti-sikh narrative about the martyrs of june 1984 is… pic.twitter.com/Z3dfWWWFzB
ಮಿಶ್ರ ಪ್ರತಿಕ್ರಿಯೆ: ಬಿಜೆಪಿ ಸಂಸದೆಯ ಹೇಳಿಕೆಗಳು ಪರ ವಿರೋಧ ಚರ್ಚೆಗೆ ಎಡೆಮಾಡಿಕೊಟ್ಟಿವೆ. ಪ್ರತಿಪಕ್ಷಗಳಿಂದ ಆಕ್ರೋಶ ಎದುರಿಸುತ್ತಿದ್ದು, ಪಂಜಾಬ್‌ನ ವಿರೋಧ ಪಕ್ಷದ ನಾಯಕರು ನಟಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
अभी थप्पड़ का निशान गया नहीं फिर वही बात कह गयी
— Dhruv Rathee Parody (@Dhruv_Rathee20) August 25, 2024
अब फिर कोई बेटी उठ खड़ी हुई तो दोनों गाल पर थप्पड़ जड़ कर जायेगी #KanganaRanaut तेरी हरकत हर बार थप्पड़ खाने वाला ही होता है
अब इस पर भाजपाई क्या बोलेंगे
प्रधानमंत्री जी क्या कहना है आपको इस पर pic.twitter.com/6CrNfx9sLN
ಬಿಜೆಪಿ ಸಂಸದೆಯ ಬಂಧನಕ್ಕೆ ಆಗ್ರಹ: ಕಾಂಗ್ರೆಸ್ ನಾಯಕ ರಾಜ್ ಕುಮಾರ್ ವರ್ಕಾ ಅವರು ಕಂಗನಾ ರನಾವತ್ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನಟಿಯ ವಿರುದ್ಧ ಪ್ರಕರಣ ದಾಖಲಿಸಿ ದಿಬ್ರುಗಢ ಜೈಲಿಗೆ ಕಳುಹಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಮನವಿ ಮಾಡಿದ್ದಾರೆ. ಕಂಗನಾ ಬಿಜೆಪಿಯ ಬೆಂಬಲವನ್ನು ಹೊಂದಿರುವುದರಿಂದ ತಮ್ಮ ಮಾತಿಗೆ ಕಡಿವಾಣ ಹಾಕುವುದಿಲ್ಲ. ಇದೆಲ್ಲವನ್ನು ಬಿಜೆಪಿಯೇ ನಡೆಸುತ್ತಿದೆ" ಎಂದು ವರ್ಕಾ ದೂರಿದರು.
'ಕಂಗನಾ ಭಾಷಣಕ್ಕೆ ಕಡಿವಾಣ'ವಿಲ್ಲ: ಆಮ್ ಆದ್ಮಿ ಪಕ್ಷದ (ಎಎಪಿ) ಪಂಜಾಬ್ ಹಿರಿಯ ವಕ್ತಾರ ನೀಲ್ ಗಾರ್ಗ್ ಅವರು ಕಂಗನಾರ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ಬಿಜೆಪಿ ಸಂಸದೆ ಪಂಜಾಬ್ ವಾತಾವರಣವನ್ನು ಹಾಳು ಮಾಡುವ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಕಂಗನಾ ರಣಾವತ್ ಕೆಲವೊಮ್ಮೆ ಪಂಜಾಬ್ ರೈತರನ್ನು ದೂಷಿಸುವ ಹೇಳಿಕೆಗಳನ್ನು ನೀಡುತ್ತಾರೆ, ಕೆಲವೊಮ್ಮೆ ಪಂಜಾಬಿಗಳನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಅವರಿಗೆ ಬಿಜೆಪಿ ಕೇಂದ್ರ ನಾಯಕತ್ವದ ಬೆಂಬಲವಿರುವುದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಅಥವಾ ಪಕ್ಷ ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆಗಳನ್ನು ನೀಡುವಂತೆ ತಿಳಿಸುತ್ತಿದೆ ಎಂದು ತೋರುತ್ತಿದೆ ಎಂದು ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆಗಳನ್ನು ನಿಯಂತ್ರಿಸಿ: ಕಿಸಾನ್ ಆಂದೋಲನದ ಸಮಯದಿಂದಲೂ ಬಿಜೆಪಿ ಪಂಜಾಬ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ನೀಲ್ ಗಾರ್ಗ್ ಆರೋಪಿಸಿದ್ದಾರೆ. "ಮೋದಿ ಸರ್ಕಾರದ ವಿರುದ್ಧ ಯಾರೇ ಧ್ವನಿ ಎತ್ತಿದರೂ, ಕೇಂದ್ರ ಸರ್ಕಾರ ಅವರ ಮಾನಹಾನಿ ಮಾಡಲು ಅಥವಾ ಕಿರುಕುಳ ನೀಡಲು ಪ್ರಯತ್ನಿಸುತ್ತದೆ" ಎಂದು ತಿಳಿಸಿದ್ದಾರೆ. ಅಲ್ಲದೇ, ಪಂಜಾಬ್‌ನಲ್ಲೂ ಅದೇ ಪರಿಸ್ಥಿತಿ. ಕಂಗನಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ನಿಯಂತ್ರಿಸುವಂತೆ ಎಎಪಿ ನಾಯಕ ಬಿಜೆಪಿಯ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದಾರೆ.
'ಸರ್ಕಾರವೇ ಕಂಗನಾ ಜೊತೆಗಿದೆ': "ಇತರ ಧರ್ಮಗಳ ವಿರುದ್ಧ ಮಾತನಾಡುವ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು" ಎಂದು ಮಾಜಿ ಸಂಸದರು ಮತ್ತು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಬಾದಲ್ ಕೇಳಿದ್ದಾರೆ. ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಅವರನ್ನು ಜೈಲಿಗೆ ಕಳುಹಿಸಬೇಕು. ಆದರೆ ಸರ್ಕಾರವೇ ಅವರ ಜೊತೆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಗನಾ ರಣಾವತ್ ವಿರುದ್ಧ ಪಂಜಾಬ್ ಬಿಜೆಪಿ ಆಕ್ರೋಶ: ಪಂಜಾಬ್ ಬಿಜೆಪಿ ನಾಯಕ ಹರ್ಜಿತ್ ಸಿಂಗ್ ಗ್ರೆವಾಲ್ ಅವರು ಕಂಗನಾ ರಣಾವತ್ ಅವರ ಹೇಳಿಕೆಗಳನ್ನು ತಳ್ಳಿಹಾಕಿದರು. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಕಂಗನಾ ಪ್ರತಿಕ್ರಿಯಿಸಬಾರದೆಂದು ಹೇಳಿದ್ದಾರೆ.
ಪಂಜಾಬ್ ಗಡಿ ರಾಜ್ಯವಾಗಿದೆ. ದೇಶದ ಪ್ರಧಾನಿ ರೈತರ ಬಿಲ್‌ಗಳನ್ನು ಹಿಂಪಡೆದಿದ್ದಾರೆ. ಈಗ ಕಂಗನಾ ರಣಾವತ್ ಅದರ ಬಗ್ಗೆ ಪ್ರತಿಕ್ರಿಯಿಸಬಾರದು" ಎಂದು ತಿಳಿಸಿದ್ದಾರೆ.
ಕಂಗನಾ ಸಿನಿಮಾ ಎಮರ್ಜೆನ್ಸಿಗೆ ವಿರೋಧ: ಕಂಗನಾ ರಣಾವತ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ'ಗೆ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಪರಬಂಧಕ್ ಸಮಿತಿ ಚಿತ್ರವನ್ನು ನಿಷೇಧಿಸುವಂತೆ ಕೋರಿತ್ತು.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ನಟಿ ಪದ್ಮಜಾ ರಾವ್‌ಗೆ ದಂಡ ವಿಧಿಸಿದ ಕೋರ್ಟ್ - Padmaja Rao Check Bounce Case