ಬಹುದಿನಗಳ ಕಾತರಕ್ಕಿಂದು ತೆರೆಬಿದ್ದಿದೆ. ಅಂತಿಮವಾಗಿ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಬಿಗ್ ಪ್ರಾಜೆಕ್ಟ್ 'ಕಲ್ಕಿ 2898 ಎಡಿ' ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಪ್ರೇಕ್ಷಕರಿಂದ ಸಿನಿಮಾ ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿದೆ. 'ಕಲ್ಕಿ 2898 ಎಡಿ'ಯು ಭವಿಷ್ಯದ ಅಂಶಗಳೊಂದಿಗೆ ಪುರಾಣದ ಸುಂದರ ಮಿಶ್ರಣವೆಂದು ಸಿನಿಪ್ರಿಯರು ಶ್ಲಾಘಿಸಿದ್ದಾರೆ. ಸಿನಿಮಾ ಬಹುತೇಕ ಗೆಲ್ಲುವ ಸುಳಿವನ್ನು ಬಿಟ್ಟುಕೊಟ್ಟಿದೆ.
ST #Kalki2898AD #KALKI #kalki2898ad Excellent Movie @nagashwin7 Nuvu tope anna 🙏🏻 #Prabhas Anna love you as always… Next level… @SrBachchan sir 🫡🫡 @deepikapadukone Superb acting 👊 #BlockbusterKalki Must watch in Big screens 🙌 pic.twitter.com/JNYZzXBSZN
— PK REDDY (@REDDY_PK_SEA) June 26, 2024
ಸೋಷಿಯಲ್ ಮೀಡಿಯಾದಲ್ಲಿಂದು ಕಲ್ಕಿಯದ್ದೇ ಸದ್ದು. ನೆಟ್ಟಿಗರು ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ, ಸೆಲೆಬ್ರೇಶನ್ನ ವಿಡಿಯೋಗಳೂ ಶೇರ್ ಆಗುತ್ತಿವೆ. ಆ ಪೈಕಿ ಬಿಗ್ ಸ್ಕ್ರೀನ್ನ ಫೋಟೋಗಳೂ ಹೊರಬಿದ್ದಿವೆ. ಚಿತ್ರಮಂದಿರಗಳಿಂದ ಫೋಟೋ ಹಂಚಿಕೊಂಡು, ಸಿನಿಪ್ರಿಯರು ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ.
ಆ ಪೈಕಿ ಫೋಟೋವೊಂದರಲ್ಲಿ, ಚಿತ್ರ ತಯಾರಕರು ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ದಿವಂಗತ ರಾಮೋಜಿ ರಾವ್ ಮತ್ತು ಪ್ರಭಾಸ್ ಅವರ ದೊಡ್ಡಪ್ಪ- ಮಾರ್ಗದರ್ಶಕ ದಿವಂಗತ ಯು ಕೃಷ್ಣಂ ರಾಜು ಅವರಿಗೆ ಗೌರವ ಸಲ್ಲಿಸಿರೋದನ್ನು ಕಾಣಬಹುದು. ಹೃತ್ಪೂರ್ವಕ ಶ್ರದ್ಧಾಂಜಲಿಯು ಈ ದಂತಕಥೆಗಳ ಸಾಧನೆ, ಚಲನಚಿತ್ರೋದ್ಯಮದ ಮೇಲಿನ ಪ್ರಭಾವ, ನಿರಂತರ ಪರಂಪರೆಯನ್ನು ಒತ್ತಿ ಹೇಳಿತು.
ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಮತ್ತು ನಟ ಕೃಷ್ಣಂ ರಾಜು ಅವರನ್ನು ಒಳಗೊಂಡ ಸಿನಿಮಾದ ಸ್ಲೈಡ್ ಒಂದನ್ನು ಶೇರ್ ಮಾಡಿದ್ದಾರೆ. "ಲೆಜೆಂಡ್ಸ್ ಲೈವ್ ಫಾರೆವರ್" ಎಂಬ ಕ್ಯಾಪ್ಷನ್ ಅನ್ನು ಈ ಸ್ಲೈಡ್ನಲ್ಲಿ ಕಾಣಬಹುದು. ಇದು, ಭಾರತೀಯ ಸಿನಿಮಾ ಮತ್ತು ವಿಶೇಷವಾಗಿ ದಕ್ಷಿಣ ಚಿತ್ರರಂಗ ಮತ್ತು ಮಾಧ್ಯಮಗಳನ್ನು ರೂಪಿಸುವಲ್ಲಿ ಅವರ ಪ್ರಮುಖ ಪಾತ್ರಗಳನ್ನು ಎತ್ತಿ ತೋರಿಸುತ್ತದೆ.
ರಾಮೋಜಿ ರಾವ್, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಹಾಗೂ ರಾಮೋಜಿ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ, ತಮ್ಮ 87ನೇ ವಯಸ್ಸಿನಲ್ಲಿ ಕೊನೆಯುಸಿರೆಳರದರು. ಸಿನಿಮಾ ಮತ್ತು ಮಾಧ್ಯಮ ಲೋಕಕ್ಕೆ ಅವರ ಕೊಡುಗೆಗಳು ಅಪಾರ. ಚಲನಚಿತ್ರ ನಿರ್ಮಾಪಕರು, ಕಲಾವಿದರು ಸೇರಿದಂತೆ ಜನಸಾಮಾನ್ಯರಿಗೆ ಸ್ಫೂರ್ತಿ ಈ ಸಾಧಕ.
ಇದನ್ನೂ ಓದಿ: 'ದರ್ಶನ್ ನಾಚಿಕೆ ಸ್ವಭಾವದ ವ್ಯಕ್ತಿ, ವಿವಾದಗಳು ಹೊಸತೇನಲ್ಲ': ನಟಿ ಭಾವನಾ ರಾಮಣ್ಣ - Bhavana Ramanna on Darshan Case
ಇನ್ನೂ, ಯು ಕೃಷ್ಣಂ ರಾಜು ತಮ್ಮ ನಟನಾ ಕೌಶಲ್ಯಕ್ಕೆ ಮಾತ್ರವಲ್ಲದೇ ಪ್ರಭಾಸ್ ಅವರಂತಹ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿಯೂ ಹೆಸರುವಾಸಿಯಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದ ಇವರು 2022ರ ಸೆಪ್ಟೆಂಬರ್ನಲ್ಲಿ ತಮ್ಮ 83ನೇ ವಯಸ್ಸಿಗೆ ಕೊನೆಯುಸಿರೆಳೆದರು.
ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಸೇರಿ ಹಲವರು ನಟಿಸಿದ್ದಾರೆ. ಕಥೆ, ಅಭಿನಯ, ನಿರ್ದೇಶನಾ ಶೈಲಿ, ವಿಶುವಲ್ಸ್, ಮೇಕಿಂಗ್ ಚಿತ್ರದ ಹೈಲೈಟ್ಸ್ ಆಗಿದ್ದು, ಸಿನಿಮಾಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಅಂದಾಜಿನ ಪ್ರಕಾರ ಮೊದಲ ದಿನ ಭಾರತದಲ್ಲೇ 200 ಕೋಟಿ ರೂ. ಕಲೆಕ್ಷನ್ ಆಗೋ ಸಾಧ್ಯತೆ ಇದೆ. ಉತ್ತರ ಅಮೆರಿಕಾದಲ್ಲಿ $3.5 ಮಿಲಿಯನ್ ಗಳಿಸಬಹುದು.