ETV Bharat / entertainment

ಆ ಮೂವರ ಮುಖಾಮುಖಿ, ಅಲ್ಲಿಂದಲೇ ನಿಜವಾದ ಕಲ್ಕಿ ಕಥೆ ಪ್ರಾರಂಭ: ನಿರ್ದೇಶಕ ನಾಗ್​ ಅಶ್ವಿನ್ - Kalki Sequel

'ಕಲ್ಕಿ 2898 ಎಡಿ' ಚಿತ್ರದ ಮತ್ತೊಂದು ಭಾಗದ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ಮಾತನಾಡಿದ್ದಾರೆ.

Nag Ashwin and Prabhas Kalki Poster
ನಾಗ್ ಅಶ್ವಿನ್, ಪ್ರಭಾಸ್​ ಕಲ್ಕಿ ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 5, 2024, 11:04 AM IST

ಬಹುತೇಕ ಚಿತ್ರಮಂದಿರಗಳಲ್ಲೀಗ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರದ್ದೇ ಸದ್ದುಗದ್ದಲ. ಬಹುತಾರಾಗಣದ ಚಿತ್ರ​​​ ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ದುಡ್ಡು ದೋಚುತ್ತಿದೆ. ಅಂದಾಜು 600 ಕೋಟಿ ರೂ ವೆಚ್ಚದ ಪುರಾಣ-ವಿಜ್ಞಾನ ಕಥೆಯಾಧರಿತ​ ಚಿತ್ರ​​ ವಿಶ್ವಾದ್ಯಂತ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿ ಹುಬ್ಬೇರಿಸಿದೆ. ಇದೀಗ ಸಿನಿಪ್ರಿಯರ ಗಮನ ಸೀಕ್ವೆಲ್​ ಮೇಲಿದೆ.

ಇತ್ತೀಚೆಗೆ 'ಕಲ್ಕಿ'ಯ ಮತ್ತೊಂದು ಭಾಗ ಬರಲಿದೆ ಎಂಬುದನ್ನು ಚಿತ್ರತಂಡ ಪ್ರಕಟಿಸಿದೆ. ಈ ಕುರಿತು ನಿರ್ಮಾಪಕ ಅಶ್ವಿನಿದತ್ ಈಗಾಗಲೇ ಹಲವು ಬಾರಿ ಮಾತನಾಡಿದ್ದಾರೆ. ಈಚೆಗಷ್ಟೇ ನಾಗ್ ಅಶ್ವಿನ್ ಕೂಡ ಸೀಕ್ವೆಲ್ ಬಗ್ಗೆ ಪ್ರತಿಕ್ರಿಯಿಸಿದ್ದರು. ಭಾಗ 2ರಲ್ಲಿ ನಿಜವಾದ ಕಥೆ ಪ್ರಾರಂಭವಾಗುತ್ತದೆ ಎಂದಿದ್ದರು.

"ಮುಂದಿನ ಭಾಗಕ್ಕೆ ಸಂಬಂಧಿಸಿದಂತೆ ನಾವು ಸುಮಾರು ಒಂದು ತಿಂಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಶೇಕಡಾ 20ರಷ್ಟು ಭಾಗ ಉತ್ತಮವಾಗಿ ಮೂಡಿಬಂದಿದೆ. ಇನ್ನೂ ಹಲವು ಪ್ರಮುಖ ಸಾಹಸ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದೆ. ಸೀಕ್ವೆಲ್​​ನಲ್ಲಿ ಪ್ರಭಾಸ್, ಕಮಲ್ ಹಾಸನ್ ಮತ್ತು ಅಮಿತಾಭ್​​​ ಬಚ್ಚನ್ ನಡುವೆ ಅದ್ಧೂರಿ ಸಾಹಸ ದೃಶ್ಯಗಳು ಇರಲಿವೆ. ಶಕ್ತಿಶಾಲಿ ಸಾಹಸ ದೃಶ್ಯಗಳನ್ನು ಇಲ್ಲಿ ಕಾಣಬಹುದು'' ಎಂದು ತಿಳಿಸಿದರು.

ಇದೇ ವೇಳೆ,​​​ ಪ್ರೇಕ್ಷಕರಿಂದ ಈ ಸಿನಿಮಾ ಸ್ವೀಕರಿಸಿದ ಅದ್ಧೂರಿ ಸ್ವಾಗತದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು. "ಪ್ರೇಕ್ಷಕರು ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಲ್ಕಿಯನ್ನು ಹಲವರು ಒಂದಕ್ಕಿಂತ ಹೆಚ್ಚು ಬಾರಿ ನೋಡಿದ್ದಾರೆ. ಅದು ಸಿನಿಮಾದ ಯಶಸ್ಸಿನ ಸಂಕೇತ" ಎಂದರು.

ಇದನ್ನೂ ಓದಿ: ಪ್ರಭಾಸ್‌ ಅಭಿನಯದ 'ಕಲ್ಕಿ' ನೋಡಲು ಹೈದರಾಬಾದ್‌ಗೆ ಬಂದ ಜಪಾನ್‌ ಫ್ಯಾನ್ಸ್‌ - Kalki Movie

ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಅವರು ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದರು. ಸೆಟ್‌ನಿಂದ ನಾಯಕ ನಟ ಪ್ರಭಾಸ್ ಅವರ ತೆರೆಮರೆಯ ಫೋಟೋ ಹಂಚಿಕೊಂಡು, "ಈ ಯಶಸ್ಸಿಗೆ ಕ್ಯಾಶುವಲ್​ ಆಗಿ ಕುಳಿತುಕೊಂಡಿರುವ ಈ ವ್ಯಕ್ತಿಯೇ ಕಾರಣ. ಈ ಯುಗದ ಬಿಗ್ ಬಾಕ್ಸ್ ಆಫೀಸ್ ಸ್ಟಾರ್. ಅಭಿಮಾನಿಗಳ ಡಾರ್ಲಿಂಗ್, ನಮ್ಮ ಭೈರವನೀಗ ವಿಶ್ವದ K_" ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: 'ರೂಪಾಂತರ'ದ ಕಿತ್ತಾಳೆ ಸವಿ: ರಾಜ್ ಬಿ ಶೆಟ್ಟಿ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು - Kittale Song From Roopanthara

ಕಳೆದ ಗುರುವಾರ, (ಜೂನ್​​ 27) ಬಹುಭಾಷೆಗಳಲ್ಲಿ 'ಕಲ್ಕಿ' ವಿಶ್ವಾದ್ಯಂತ ತೆರೆಕಂಡಿದ್ದು, ಈಗಾಗಲೇ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​​ ಮಾಡಿದೆ. ಜನಪ್ರಿಯ ನಟರಾದ ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​​, ಕಮಲ್​ ಹಾಸನ್​ ಮುಖ್ಯಭೂಮಿಕೆಯಲ್ಲಿದ್ದಾರೆ. ದಿಶಾ ಪಟಾನಿ ಪ್ರಮುಖ ಪಾತ್ರ ನಿರ್ವಹಿಸಿದ್ದರೆ, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ಮಾಳವಿಕಾ ನಾಯರ್, ಮೃಣಾಲ್ ಠಾಕೂರ್ ಮತ್ತು ಅನ್ನಾ ಬೆನ್ ಸೇರಿದಂತೆ ಜನಪ್ರಿಯ ನಟರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.