ETV Bharat / entertainment

'ವಾರ್​-2'ನಲ್ಲಿ ಮತ್ತೊಬ್ಬ ತೆಲುಗು ಸ್ಟಾರ್​: ಈ ಕ್ಯಾರೆಕ್ಟರ್​ ತುಂಬಾ ಪವರ್‌ಫುಲ್​ ಅಂತೆ! - War 2 Movie - WAR 2 MOVIE

Jr NTR War 2 Cast: ಜೂನಿಯರ್ ಎನ್​ಟಿಆರ್ ಹಾಗೂ ಹೃತಿಕ್ ರೋಷನ್ ಕಾಂಬಿನೇಷನ್​ನಲ್ಲಿ ತಯಾರಾಗುತ್ತಿರುವ ಬಿಗ್ ಬಜೆಟ್ ಸಿನಿಮಾ 'ವಾರ್ 2'. ಸದ್ಯ ಶೂಟಿಂಗ್ ಹಂತದಲ್ಲಿರುವ ಈ ಚಿತ್ರತಂಡಕ್ಕೆ ಮತ್ತೊಬ್ಬ ತೆಲುಗು ನಟ ಎಂಟ್ರಿ ಕೊಡಲಿದ್ದಾರೆ.

JAGAPATHI BABU  ANOTHER TELUGU ACTOR JOIN IN WAR 2  HRITHIK ROSHAN  BOLLYWOOD MOVIE
ಈ ಕ್ಯಾರೆಕ್ಟರ್​ ತುಂಬಾ ಪವರ್​ ಫುಲ್​ ಅಂತೆ
author img

By ETV Bharat Karnataka Team

Published : Apr 1, 2024, 7:59 PM IST

'ಯಂಗ್ ಟೈಗರ್' ಜೂನಿಯರ್ ಎನ್​ಟಿಆರ್, ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಿಗ್​ ಬಜೆಟ್ ಚಿತ್ರ 'ವಾರ್ 2'. ಸದ್ಯ ಶೂಟಿಂಗ್ ಹಂತದಲ್ಲಿರುವ ಈ ಚಿತ್ರವನ್ನು 'ಬ್ರಹ್ಮಾಸ್ತ್ರ' ಖ್ಯಾತಿಯ ಅಯನ್ ಮುಖರ್ಜಿ ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಎನ್‌ಟಿಆರ್ ಮೊದಲ ಬಾರಿಗೆ ಬಿಟೌನ್‌ಗೆ ಎಂಟ್ರಿ ನೀಡಿದ್ದು ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಹೊಂದಿದ್ದರು. ಆದರೆ ಇತ್ತೀಚೆಗಷ್ಟೇ ಚಿತ್ರದ ಬಗ್ಗೆ ಒಂದು ಸುದ್ದಿ ಟ್ರೆಂಡಿಂಗ್ ಆಗಿದೆ. ಅಂದರೆ ಈ ಸಿನಿಮಾ ಮೂಲಕ ಮತ್ತೊಬ್ಬ ತೆಲುಗು ಸ್ಟಾರ್ ಎಂಟ್ರಿ ಕೊಡಲಿದ್ದಾರೆ. ಅವರು ಬೇರಾರೂ ಅಲ್ಲ ಫ್ಯಾಮಿಲಿ ಸ್ಟಾರ್ ಜಗಪತಿ ಬಾಬು.

ದರ್ಶನ್ ಅಭಿನಯದ 'ಕಾಟೇರಾ' ಚಿತ್ರದಲ್ಲಿ ಅದ್ಭುತವಾಗಿ ನಟಿಸಿರುವ ಜಗಪತಿ ಬಾಬು ಈ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರ ತುಂಬಾ ಪವರ್‌ಫುಲ್ ಆಗಿರುತ್ತದೆ ಮತ್ತು ಚಿತ್ರಕ್ಕೆ ತುಂಬಾ ಮುಖ್ಯ ಎಂದು ಹೇಳಲಾಗಿದೆ. ಆದರೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

'ವಾರ್ 2' ಚಿತ್ರದ ವಿಷಯಕ್ಕೆ ಬರುವುದಾದರೆ, ಯಶ್‌ರಾಜ್ ಸ್ಪೈ ಯೂನಿವರ್ಸ್​ನ ಭಾಗವಾಗಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಎನ್‌ಟಿಆರ್ ನಡುವಿನ ಪ್ರಮುಖ ಸಾಹಸ ದೃಶ್ಯಗಳು ಇರುತ್ತವೆ. ಇದಲ್ಲದೇ ಎನ್​ಟಿಆರ್ ಇಂಡಿಯನ್ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಸಿನಿಮಾ ವಲಯದಲ್ಲಿ ಕೇಳಿಬರುತ್ತಿದೆ. ಸದ್ಯ 'ದೇವರ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅವರು 'ವಾರ್​-2' ಚಿತ್ರೀಕರಣ ಮುಗಿದ ನಂತರ ಸೆಟ್‌ ಸೇರಲಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸಲ್ಮಾನ್ ಖಾನ್ ಮತ್ತು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳಿವೆ.

ದೇವರ ಶೂಟಿಂಗ್: ಮತ್ತೊಂದೆಡೆ, 'ದೇವರ' ಚಿತ್ರೀಕರಣ ಕೂಡ ವೇಗದಲ್ಲಿ ಸಾಗುತ್ತಿದೆ. ಇದರಲ್ಲಿ ಎನ್‌ಟಿಆರ್‌ಗೆ ಜೋಡಿಯಾಗಿ ಬಿಟೌನ್ ತಾರೆ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಕಾಂತ್ ಮತ್ತೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ದಸರಾ' ತಂಡದಿಂದ ಮತ್ತೊಂದು ಸಿನಿಮಾ: ರಗಡ್‌ ಲುಕ್‌ನಲ್ಲಿ ನಾನಿ, ಫಸ್ಟ್‌ ಲುಕ್‌ ರಿವೀಲ್ - Nani Movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.