ETV Bharat / entertainment

ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಜೂ.​ಎನ್​​ಟಿಆರ್; ಅಮ್ಮನ ಆಸೆ ಈಡೇರಿಸಿದ ಆರ್​ಆರ್​ಆರ್​ ಸ್ಟಾರ್​ - Jr NTR Visits Udupi Temple - JR NTR VISITS UDUPI TEMPLE

ಸ್ಯಾಂಡಲ್​ವುಡ್​ನ ಡಿವೈನ್​ ಸ್ಟಾರ್ ಖ್ಯಾತಿಯ ರಿಷಬ್​​ ಶೆಟ್ಟಿ​, ಕೆಜಿಎಫ್​ ಸ್ಟಾರ್ ಡೈರೆಕ್ಟರ್​​​ ಪ್ರಶಾಂತ್​ ನೀಲ್ ಮತ್ತು ಆರ್​ಆರ್​ಆರ್​​ ಸ್ಟಾರ್ ಜೂ.​ಎನ್​​ಟಿಆರ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ತಮ್ಮ ತಾಯಿಯ ಬಹುದಿನಗಳ ಆಸೆ ಈಡೇರಿಸೋ ಸಲುವಾಗಿ ಜೂ.​ಎನ್​​ಟಿಆರ್ ಅಮ್ಮನೊಂದಿಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದಿದ್ದಾರೆ.

film famous personalities in Udupi Temple
ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಚಿತ್ರರಂಗದ ಹೆಸರಾಂತರು (ETV Bharat)
author img

By ETV Bharat Entertainment Team

Published : Aug 31, 2024, 6:22 PM IST

Updated : Aug 31, 2024, 6:34 PM IST

ಟಾಲಿವುಡ್ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರು ಕುಂದಾಪುರದಲ್ಲಿರುವ ತಮ್ಮ ತಾಯಿಯ ತವರು ಮನೆಗೆ ಭೇಟಿ ನೀಡಿದ್ದಾರೆ. ಇಂದು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ವಿಶೇಷ ಕ್ಷಣಗಳನ್ನು ಹಂಚಿಕೊಳ್ಳೋ ಮೂಲಕ ಗಮನ ಸೆಳೆದಿದ್ದಾರೆ. ಶನಿವಾರ ಶೇರ್ ಮಾಡಿರುವ ಪೋಸ್ಟ್‌ನಲ್ಲಿ ಅವರ ಇತ್ತೀಚಿನ ನಗರ ಭೇಟಿಯ ಮೂರು ಚಿತ್ರಗಳನ್ನು ಕಾಣಬಹುದಾಗಿದೆ. ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಪಡೆಯೋ ಮೂಲಕ ತಮ್ಮ ತಾಯಿಯ ಬಹುಕಾಲದ ಕನಸನ್ನು ಈಡೇರಿಸಿದ್ದಾರೆ.

ನಟ ಹಂಚಿಕೊಂಡಿರುವ ಮೊದಲ ಚಿತ್ರದಲ್ಲಿ ಜೂನಿಯರ್ ಎನ್​​​ಟಿಆರ್ ತಮ್ಮ ತಾಯಿಯೊಂದಿಗೆ ನಿಂತಿರೋದನ್ನು ಕಾಣಬಹುದು. ಇಬ್ಬರೂ ದೇವಸ್ಥಾನದೆದುರು ನಗುಮೊಗದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡನೇ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಅವರ ತಾಯಿಯೊಂದಿಗೆ ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ ಕೂಡಾ ಇದ್ದಾರೆ. ಕೊನೆಯ ಫೋಟೋದಲ್ಲಿ ಜೂನಿಯರ್ ಎನ್‌ಟಿಆರ್, ರಿಷಬ್ ಶೆಟ್ಟಿ ಮತ್ತು ಕೆಜಿಎಫ್​​ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕಾಣಬಹುದು.

Jr NTR Visits Udupi Temple
ಪ್ರಶಾಂತ್​ ನೀಲ್​, ರಿಷಬ್​ ಶೆಟ್ಟಿ, ಜೂ.​ಎನ್​​ಟಿಆರ್ (ETV Bharat)

ತಾಯಿಯ ಕನಸು ಈಡೇರಿಸಿದ ಜೂ.ಎನ್​ಟಿಆರ್​: ಗಮನ ಸೆಳೆಯುವಂತಹ ಫೋಟೋಗಳನ್ನು ಹಂಚಿಕೊಂಡಿರುವ ಆರ್‌ಆರ್‌ಆರ್ ಸ್ಟಾರ್, "ನನ್ನನ್ನು ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೇವರ ದರ್ಶನ ಪಡೆಯುವ ನನ್ನ ತಾಯಿಯ ಕನಸು ಕೊನೆಗೂ ನನಸಾಗಿದೆ. ಸೆಪ್ಟೆಂಬರ್ 2 ರಂದು ಅವರ ಹುಟ್ಟುಹಬ್ಬವಿದ್ದು, ಅದಕ್ಕೂ ಮುನ್ನ ಅವರ ಕನಸು ನನಸಾಗಿಸಿರುವುದು ನಾನವರಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್​​​" ಎಂದು ಬರೆದುಕೊಂಡಿದ್ದಾರೆ.

ರಿಷಬ್​ ಶೆಟ್ಟಿಗೆ ವಿಶೇಷ ಧನ್ಯವಾದಗಳು: ಮಾತು ಮುಂದುವರಿಸಿದ ಖ್ಯಾತ ನಟ, ''ಇದನ್ನು ಸಾಧ್ಯವಾಗಿಸಿದ ವಿಜಯ್​​ ಕಿರಗಂದೂರ್​ ಸರ್ ಮತ್ತು ನನ್ನ ಆತ್ಮೀಯ ಸ್ನೇಹಿತ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದಗಳು. ನನ್ನ ಆತ್ಮೀಯ ಸ್ನೇಹಿತ ರಿಷಬ್​ ಶೆಟ್ಟಿ ಅವರಿಗೆ ವಿಶೇಷ ಧನ್ಯವಾದಗಳು. ಅವರ ಬೆಂಬಲ ಈ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಿದೆ" ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್​ ಶೇರ್ ಮಾಡಿದ ರಿಷಬ್​ ಶೆಟ್ಟಿ: ಜೂನಿಯರ್​ ಎನ್​ಟಿಆರ್​​ ಹಂಚಿಕೊಂಡ ಫೋಟೋಗಳ ಜೊತೆಗೆ ಮತ್ತೊಂದು ಗ್ರೂಪ್​ ಫೋಟೋವನ್ನೂ ಹಂಚಿಕೊಂಡಿರುವ ಕಾಂತಾರ ಸ್ಟಾರ್​ ರಿಷಬ್​ ಶೆಟ್ಟಿ, ''ಶ್ರೀ ಕೃಷ್ಣನ ಸನ್ನಿಧಿಯಲ್ಲಿ'' ಎಂಬ ಕ್ಯಾಪ್ಷನ್​​ ಕೊಟ್ಟಿದ್ದಾರೆ.

ಇದನ್ನೂ ಓದಿ: ಬರ್ತ್​​​ಡೇ, ಬಿಗ್​​ಬಾಸ್​ ಬಗ್ಗೆ ಮಾಹಿತಿ ಕೊಟ್ಟ ಸುದೀಪ್​​: 'ದರ್ಶನ್ ಬಗ್ಗೆ ಮಾತನಾಡಿ ನೋವು ಕೊಡೋದು ಬೇಡ'ವೆಂದ ಕಿಚ್ಚ - Sudeep

ಜೂನಿಯರ್ ಎನ್​​​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ನಿರತರಾಗಿದ್ದಾರೆ. ಈ ಪ್ರೊಜೆಕ್ಟ್​​​ ಅನ್ನು ತಾತ್ಕಾಲಿಕವಾಗಿ ಎನ್​​ಟಿಆರ್​​​​31, ಎನ್​​ಟಿಆರ್​ನೀಲ್​​ ಅಥವಾ ಡ್ರ್ಯಾಗನ್ ಹೆಸರಿನಲ್ಲಿ ಕರೆಯಲಾಗುತ್ತಿದೆ. ಹೈ ಆ್ಯಕ್ಷನ್​​​ ಡ್ರಾಮಾದಲ್ಲಿ ಬ್ಲಾಕ್‌ಬಸ್ಟರ್ ಆರ್​ಆರ್​ಆರ್​, ಕೆಜಿಎಫ್‌ಗೆ ಹೆಸರುವಾಸಿಯಾಗಿರುವ ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕೆಲಸ ಮಾಡುತ್ತಿರುವ ಹಿನ್ನೆಲೆ ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಇತ್ತೀಚೆಗಷ್ಟೇ ತಿಳಿಸಿದ್ದಾರೆ.

ಇದನ್ನೂ ಓದಿ: ಕಾದಂಬರಿ ಜೇತ್ವಾನಿ ಕುಟುಂಬಕ್ಕೆ ರಾಜಕೀಯ ಮುಖಂಡನಿಂದ ಕಿರುಕುಳ: ಮಾಧ್ಯಮಗಳೆದುರು ಕಣ್ಣೀರಿಟ್ಟ ನಟಿ - Kadambari Jethwani

'ಕಾಂತಾರ' ಪ್ರೀಕ್ವೆಲ್ ಸಲುವಾಗಿ ಸಖತ್​​ ಸುದ್ದಿಯಲ್ಲಿರುವ​​ ಸ್ಯಾಂಡಲ್​ವುಡ್​ ಡಿವೈನ್​ ಸ್ಟಾರ್​​ ಖ್ಯಾತಿಯ ನಟ, ನಿರ್ದೇಶಕ, ನಿರ್ಮಾಪಕ ರಿಷಬ್​ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ನಿನ್ನೆಯಷ್ಟೇ ತೆರೆಗಪ್ಪಳಿಸಿದೆ. ಪ್ರಮೋದ್ ಶೆಟ್ಟಿ ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಿನಿಮಾಗೆ ಸೆಲೆಬ್ರಿಟಿಗಳೂ ಸೇರಿದಂತೆ ಪ್ರೇಕ್ಷಕರು ಬಹುತೇಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Aug 31, 2024, 6:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.