ETV Bharat / entertainment

ಮುಂದಿನ ವರ್ಷ ಸೆಟ್ಟೇರಲಿದೆ ಜೂ. ಎನ್​ಟಿಆರ್ - ​ಪ್ರಶಾಂತ್ ನೀಲ್ ಸಿನಿಮಾ: 2 ಭಾಗಗಳಲ್ಲಿ ನಿರ್ಮಾಣ - JR NTR - JR NTR

ಜೂನಿಯರ್ ಎನ್​ಟಿಆರ್ ಹಾಗೂ ​ಪ್ರಶಾಂತ್ ನೀಲ್ ಕಾಂಬಿನೇಶನ್​ನ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬರಲಿದ್ದು, 2025ಕ್ಕೆ ಸೆಟ್ಟೇರಲಿದೆ.

Jr NTR-Prashanth Neel's next to Be a Two-part Epic Saga; Here's When the Film Will Go on Floors
ಮುಂದಿನ ವರ್ಷ ಸೆಟ್ಟೇರಲಿದೆ ಜೂ. ಎನ್​ಟಿಆರ್-​ಪ್ರಶಾಂತ್ ನೀಲ್ ಸಿನಿಮಾ; 2 ಭಾಗಗಳಲ್ಲಿ ನಿರ್ಮಾಣ
author img

By ETV Bharat Karnataka Team

Published : Mar 26, 2024, 4:17 PM IST

ಆರ್​ಆರ್​ಆರ್​ ಖ್ಯಾತಿಯ ಜೂನಿಯರ್​ ಎನ್​ಟಿಆರ್​​ ಪ್ರಸ್ತುತ ತಮ್ಮ ಬಹುನಿರೀಕ್ಷಿತ ಚಿತ್ರ 'ದೇವರ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರೊಜೆಕ್ಟ್​ ಅಲ್ಲದೇ ಮತ್ತೊಂದು ಕುತೂಹಲಾರಿ ಸಿನಿಮಾ ಕೂಡ ನಟನ ಕೈಯಲ್ಲಿದೆ. ಸಲಾರ್ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿರುವ ಹಿನ್ನೆಲೆ, ದಕ್ಷಿಣ ಚಿತ್ರರಂಗ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

ಚಿತ್ರದ ಸುತ್ತಲಿರುವ ಮಾಹಿತಿ ಪ್ರಕಾರ, ಜೂನಿಯರ್ ಎನ್​ಟಿಆರ್​​ ಮತ್ತು ಪ್ರಶಾಂತ್ ನೀಲ್​ ಕಾಂಬಿನೇಶನ್​ನ ಪ್ರೊಜೆಕ್ಟ್ ಬರುವ ವರ್ಷ ಸೆಟ್ಟೇರಲಿದೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಮಾನದಂಡ ಸೃಷ್ಟಿಸುವ ಗುರಿ ಹೊಂದಿರುವ ಹೈ ಆ್ಯಕ್ಷನ್​​ ಸಿನಿಮಾ ಸದ್ಯ ಪ್ರೀ ಪ್ರೊಡಕ್ಷನ್​ ಹಂತದಲ್ಲಿದೆ. ಅಲ್ಲದೇ ಎರಡು ಭಾಗಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ 'ದೇವರ' ಕೂಡ ಎರಡು ಭಾಗಗಳಲ್ಲಿ ಮೂಡಿ ಬರುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ.

ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣ ಮಾಡುವ ನಿರ್ಧಾರ ಉದ್ದೇಶಪೂರ್ವಕ ಸ್ಟ್ರ್ಯಾಟಜಿಗಳಲ್ಲಿ ಒಂದು. ಕಥೆಯನ್ನು ಸಮಗ್ರವಾಗಿ ಅನ್ವೇಷಿಸುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ. ಕೆಜಿಎಫ್ ಕೂಡ ಎರಡು ಭಾಗಗಳಲ್ಲಿ ಮೂಡಿ ಬಂದಿದ್ದು, ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬೋ ಸುತ್ತಲಿನ ನಿರೀಕ್ಷೆ ಹೆಚ್ಚುತ್ತಿದೆ. ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಮೈತ್ರಿ ಮೂವಿ ಮೇಕರ್ಸ್‌' ಮತ್ತೊಂದು ಸಿನಿಮೀಯ ಚಮತ್ಕಾರಕ್ಕೆ ಸಜ್ಜಾಗಿದೆ.

ಚಿತ್ರತಂಡ ಕಥಾವಸ್ತುವನ್ನು ಬಿಟ್ಟುಕೊಟ್ಟಿಲ್ಲ. ಆದರೆ ತೀವ್ರ ಆ್ಯಕ್ಷನ್ ಸೀಕ್ವೆನ್ಸ್ ಮತ್ತು ಅದ್ಭುತ ನಿರೂಪಣೆಯಿಂದಿರುವ ಕಥೆ ಎಂದು ಚಿತ್ರದ ಸುತ್ತಲಿರುವ ಅಂತೆ- ಕಂತೆಗಳು ಸೂಚಿಸಿವೆ. ಕೆಜಿಎಫ್ ಮತ್ತು ಸಲಾರ್‌ನಲ್ಲಿ ಪ್ರಶಾಂತ್ ನೀಲ್ ಅವರ ವಿಭಿನ್ನ ನಿರ್ದೇಶನ ಶೈಲಿ ಸಾಬೀತಾಗಿದೆ. ಹಾಗಾಗಿ ಅವರ ಮುಂದಿನ ತೆರೆ ಮೇಲಿನ ಮ್ಯಾಜಿಕ್​ಗಾಗಿ ಸಿನಿಪ್ರಿಯರು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ದಿಗಂತ್ - ಸಂಗೀತಾ ಶೃಂಗೇರಿ ಅಭಿನಯದ 'ಮಾರಿಗೋಲ್ಡ್' ಟ್ರೇಲರ್ ಅನಾವರಣ - Marigold Trailer

ಸದ್ಯ ಜೂನಿಯರ್ ಎನ್​ಟಿಆರ್​ ದೇವರ ಪಾರ್ಟ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ಅವರಿಗಿದು ಚೊಚ್ಚಲ ತೆಲುಗು ಚಿತ್ರ. ಬಾಲಿವುಡ್​ ನಟ ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇದೇ ಸಾಲಿನ ಅಕ್ಟೋಬರ್ 10ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಂಗನಾ ಹಳೇ ವಿಡಿಯೋ ವೈರಲ್‌ - Kangana Ranaut

ಜೂನಿಯರ್ ಎನ್​ಟಿಆರ್ ಶೀಘ್ರದಲ್ಲೇ ಬಾಲಿವುಡ್​ಗೂ ಎಂಟ್ರಿ ಕೊಡಲಿದ್ದಾರೆ. ಹೃತಿಕ್ ರೋಷನ್ ಜೊತೆ ವಾರ್ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರೀಕರಣ ಪೂರ್ಣಗೊಂಡ ನಂತರ ಯುದ್ಧ 2ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.