ETV Bharat / entertainment

ಆಲಿಯಾ ಭಟ್ - ವೇದಾಂಗ್​ ರೈನಾ ಸ್ಕ್ರೀನ್ ಶೇರ್: 'ಜಿಗ್ರಾ' ಶೂಟಿಂಗ್​ ಕಂಪ್ಲೀಟ್​ - ಆಲಿಯಾ ಭಟ್​

ಆಲಿಯಾ ಭಟ್ ಹಾಗೂ ವೇದಾಂಗ್​ ರೈನಾ ಅಭಿನಯದ 'ಜಿಗ್ರಾ' ಚಿತ್ರೀಕರಣ ಪೂರ್ಣಗೊಂಡಿದೆ.

Jigra shooting completed
ಜಿಗ್ರಾ ಶೂಟಿಂಗ್​ ಕಂಪ್ಲೀಟ್​
author img

By ETV Bharat Karnataka Team

Published : Feb 23, 2024, 8:57 AM IST

ಬಾಲಿವುಡ್ ನಟಿ ಆಲಿಯಾ ಭಟ್ ಯಶಸ್ವಿ ವೃತ್ತಿಜೀವನ ಮನ್ನಡೆಸುತ್ತಿದ್ದಾರೆ. ಕಮರ್ಷಿಯಲ್ ಹಿಟ್, ವಿಮರ್ಶಕರ ಮೆಚ್ಚುಗೆಗಳೆರಡರಲ್ಲೂ ಸತತವಾಗಿ ಯಶಸ್ಸು ಕಾಣುತ್ತಿದ್ದಾರೆ. ಗಂಗೂಬಾಯಿ ಕಥಿಯಾವಾಡಿ ಮತ್ತು ಡಾರ್ಲಿಂಗ್ಸ್‌ ನಂತಹ ಸಿನಿಮಾ ಪಾತ್ರಗಳಿಂದ ಹಿಡಿದು ಬ್ರಹ್ಮಾಸ್ತ್ರ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯವರೆಗೆ ಯಶಸ್ಸನ್ನೇ ಕಂಡಿದ್ದಾರೆ. ಅಲ್ಲದೇ ಹಾರ್ಟ್ ಆಫ್ ಸ್ಟೋನ್‌ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಆಲಿಯಾ ಭಟ್​ ಅವರ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ನಟಿ, ನಿರ್ಮಾಪಕಿ, ಉದ್ಯಮಿ, ಬ್ರ್ಯಾಂಡ್​ಗಳ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಬ್ಯುಸಿ ಶೆಡ್ಯೂಲ್​ ನಡುವೆಯೂ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಪುತ್ರಿ ರಾಹಾಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಇದೀಗ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಜಿಗ್ರಾ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ಚಿತ್ರದಲ್ಲಿ ವೇದಾಂಗ್ ರೈನಾ ಸಹ ಅಭಿನಯಿಸುತ್ತಿದ್ದಾರೆ.

ಗುರುವಾರದಂದು ನಟಿ ಆಲಿಯಾ ಭಟ್​ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ, ವೇದಾಂಗ್​ ರೈನಾ ಜೊತೆಗಿನ ಕ್ಯಾಂಡಿಡ್ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಚಿತ್ರೀಕರಣ ಪೂರ್ಣಗೊಂಡಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇವು ಕ್ಯಾಂಡಿಡ್​ ಫೋಟೋಗಳಾಗಿವೆ. ಮುಸ್ಸಂಜೆಯಲ್ಲಿ ಕ್ಲಿಕ್ಕಿಸಿರುವ ಫೋಟೋಗಳು ಇದಾಗಿದ್ದು, ನದಿ ಬಳಿ ನಗು ಹಂಚಿಕೊಂಡಿದ್ದಾರೆ. ಉತ್ತಮ ಕ್ಷಣಗಳನ್ನು ಕಳೆದಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಒಂದು ಫೋಟೋದಲ್ಲಿ, ವೇದಾಂಗ್ ರೈನಾ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದು ತಮಾಷೆಯ ಕ್ಷಣಗಳನ್ನು ಕಳೆದಿರುವುದು ಸ್ಪಷ್ಟವಾಗಿದೆ. ಫೋಟೋಗಳನ್ನು ಹಂಚಿಕೊಂಡ ಆಲಿಯಾ, "ಜಿಗ್ರಾ ಓಹ್... ಅಬ್ಕಿ ತೇರಿ ಬಾರಿ ಹೋ ವೇದಾಗ್​​ ರೈನಾ. ಜಿಗ್ರಾ ಶೂಟಿಂಗ್​ ಕಂಪ್ಲೀಟ್​. ಸೆಪ್ಟೆಂಬರ್ 27ರಂದು ಸಿನಿಮಾ ತೆರೆಕಾಣಲಿದೆ'' ಎಂದು ಬರೆದುಕೊಂಡಿದ್ದಾರ.

ಇದನ್ನೂ ಓದಿ: 'ಫೋಟೋ' ಚಿತ್ರಕ್ಕೆ ಸಾಥ್​ ನೀಡಿದ ಬಹುಭಾಷಾ ನಟ ಪ್ರಕಾಶ್ ರಾಜ್

ಆಲಿಯಾ ಭಟ್​​ ಜಿಗ್ರಾ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವುದು ಮಾತ್ರವಲ್ಲದೇ, ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ನಿರ್ಮಾಣದ ಬಗ್ಗೆ ಮಾತನಾಡಿ ತಮ್ಮ ಸಂತೋಷ, ಉತ್ಸಾಹವನ್ನು ಹಂಚಿಕೊಂಡಿದ್ದರು. ನಟಿಯ 'ಎಟರ್ನಲ್ ಸನ್‌ಶೈನ್‌' ಹೆಸರಿನ ಚಲನಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕರಣ್​​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್ ಕೂಡ ನಿರ್ಮಾಣ ತಂಡದಲ್ಲಿದೆ. ಪ್ರಭಾವ ಬೀರುವ ಬಲವಾದ ಕಥೆಗಳನ್ನು ತರುವ ಗುರಿ ಹೊಂದಿರುವುದಾಗಿ ನಟಿ ಈಗಾಗಲೇ ತಿಳಿಸಿದ್ದಾರೆ.

ಇದನ್ನೂ ಓದಿ: ಇಟಲಿ 'ಮಿಲನ್​​ ಫ್ಯಾಶನ್​​ ವೀಕ್'ನ​​ ಮೆರುಗು ಹೆಚ್ಚಿಸಿದ ಕನ್ನಡತಿ ರಶ್ಮಿಕಾ ಮಂದಣ್ಣ

2023ರ ಅಕ್ಟೋಬರ್​ನಲ್ಲಿ ಜಿಗ್ರಾ ಸೆಟ್ಟೇರಿತ್ತು. ವಾಸನ್ ಬಾಲಾ ಆ್ಯಕ್ಷನ್​ ಕಟ್​​ ಹೇಳಿರುವ ಈ ಸಿನಿಮಾದಲ್ಲಿ, ಸಹೋದರನನ್ನು ರಕ್ಷಿಸುವ ಗಟ್ಟಿಗಿತ್ತಿ ಸಹೋದರಿ ಪಾತ್ರವನ್ನು ಆಲಿಯಾ ಭಟ್ ನಿರ್ವಹಿಸಿದ್ದಾರೆ. ವೇದಾಂಗ್​ ರೈನಾ ಅವರು ಸಹೋದರನ ಪಾತ್ರ ನಿರ್ವಹಿಸಿದ್ದಾರೆಂದು ಬಹುತೇಕ ನಂಬಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.