ETV Bharat / entertainment

ಜೂ.ಎನ್​ಟಿಆರ್​​​ ಹಾಡಿಹೊಗಳಿದ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್​​​ - Janhvi on Jr NTR - JANHVI ON JR NTR

ದೇವರ: ಭಾಗ 1ರಲ್ಲ ಸೌತ್​ ಸೂಪರ್ ಸ್ಟಾರ್ ಜೂ.ಎನ್​ಟಿಆರ್​​ ಜೊತೆ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್​​​ ನಟ ಮತ್ತು ಚಿತ್ರತಂಡದ ಕಾರ್ಯವೈಖರಿಯನ್ನು ಮೆಚ್ಚಿ ಕೊಂಡಾಡಿದ್ದಾರೆ.

Jr NTR and Janhvi Kapoor
ಜೂ.ಎನ್​ಟಿಆರ್​​​ - ಜಾಹ್ನವಿ ಕಪೂರ್​​​ (ETV Bharat)
author img

By ETV Bharat Karnataka Team

Published : Jul 26, 2024, 8:47 PM IST

ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್​​​ ತಮ್ಮ ಮುಂದಿನ ಹಿಂದಿ ಚಿತ್ರ ಉಲಜ್ಹ್ ಪ್ರಮೋಶನ್​​​ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಟಾಲಿವುಡ್​ನಲ್ಲೂ ಪ್ರಭಾವ ಬೀರಲು ಸಜ್ಜಾಗಿದ್ಧಾರೆ. ದೇವರ: ಭಾಗ 1ರಲ್ಲಿ, ಸೌತ್​ ಸೂಪರ್ ಸ್ಟಾರ್ ಜೂ.ಎನ್​ಟಿಆರ್​​ ಜೊತೆ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ತಂಗಮ್ ಆಗಿ ನಾಯಕ ನಟಿಯ ಪಾತ್ರ ವಹಿಸಿದ್ದಾರೆ. ಉಲಜ್ಹ್ ಪ್ರಚಾರದ ವೇಳೆ ಜೂನಿಯರ್ ಎನ್‌ಟಿಆರ್ ಬಗ್ಗೆ ಗುಣಗಾನ ಮಾಡಿದ್ದಾರೆ. ನಟನ ಸ್ಕ್ರೀನ್​ ಪ್ರೆಸೆನ್ಸ್, ಸಮರ್ಪಣೆ ಮತ್ತು ಅಸಾಧಾರಣ ನೃತ್ಯ ಕೌಶಲ್ಯಗಳ ಬಗ್ಗೆ ಮಾತನಾಡಿ ಕೊಂಡಾಡಿದ್ದಾರೆ.

ಉಲಜ್ಹ್ ಪ್ರಚಾರದ ಸಂದರ್ಭ, ಜಾಹ್ನವಿ ಕಪೂರ್​​ 'ದೇವರ' ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ನಟ ಜೂನಿಯರ್ ಎನ್‌ಟಿಆರ್, ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. ಸಿನಿಮಾ ನಿರ್ಮಾಣ ಆಗುತ್ತಿರುವ ರೀತಿ, ತಂಡದ ಪರಿಶ್ರಮಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಅವರು ಅಲ್ಲಿ ಕೆಲಸ ಮಾಡುವ ರೀತಿ ನನಗೆ ಇಷ್ಟವಾಯಿತು. ನಾನು ಪ್ರೀತಿಸುತ್ತೇನೆ, ಅವರು ಚಲನಚಿತ್ರವನ್ನು ಕಲಾಕೃತಿಯಂತೆ ಪರಿಗಣಿಸುತ್ತಾರೆ, ಅದು ನನಗೆ ಇಷ್ಟವಾಯಿತು. ಎಂಬುದನ್ನು ನಾನು ಪ್ರೀತಿಸುತ್ತೇನೆ. ಕಥೆ ಹೇಳುವಿಕೆಗೆ ತಮ್ಮನ್ನು ಸಮರ್ಪಿಸಿದ್ದಾರೆ'' ಎಂದು ಗುಣಗಾನ ಮಾಡಿದರು.

ಜೂನಿಯರ್ ಎನ್​ಟಿಆರ್​​ ಅವರ ಪ್ರತಿಭೆ, ಸಾಮರ್ಥ್ಯಗಳನ್ನು ಶ್ಲಾಘಿಸಿದರು. "ಜೂನಿಯರ್ ಎನ್​ಟಿಆರ್​​ ಸರ್ ಒಂದು ಫ್ರೇಮ್​​​ನೊಳಗೆ ಕಾಲಿಟ್ಟಾಗ ಅದು ಜೀವಂತವಾಗುತ್ತದೆ. ಅವರ ಎನರ್ಜಿ ಅಂಥದ್ದು. ಇತ್ತೀಚೆಗೆ ಅವರೊಂದಿಗೆ ಒಂದು ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ಅವರ ಸ್ಪೀಡ್​​ ಮ್ಯಾಚ್​ ಮಾಡಲು ಸಾಧ್ಯವಿಲ್ಲ. ವಿಷಯವೊಂದನ್ನು ಕಲಿಯಲು ನನಗೆ 10 ದಿನ ಹಿಡಿಯಿತು. ಆದರೆ ಅವರು ಅದನ್ನು ಒಂದು ಸೆಕೆಂಡ್‌ನಲ್ಲಿ ಕಲಿತರು'' ಎಂದು ಗುಣಗಾನ ಮಾಡಿದರು.

ಇದನ್ನೂ ಓದಿ: Jr.ಎನ್‌ಟಿಆರ್‌ 'ದೇವರ'ಗೆ ಬಾಲಿವುಡ್‌ನಿಂದ ಮತ್ತೋರ್ವ ವಿಲನ್? - Devara

ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಹೆಚ್ಚು ಮನರಂಜನೆಯಾಗಿದೆ ಎಂದು ವಿವರಿಸಿದರು. ಸೆಟ್‌ನಲ್ಲಿ ಕೆಲಸ ಮಾಡಿದ ಕ್ಷಣ ಬಹಳ ಉತ್ತಮವಾಗಿತ್ತು ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು. ಪ್ರತಿಯೊಬ್ಬರ ಉತ್ಸಾಹ ಮತ್ತು ಸಮರ್ಪಣೆ ಬಹಳ ಪ್ರಭಾವ ಬೀರಿತು ಎಂದು ತಿಳಿಸಿದರು. ಈ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟವೆಂದೇ ನಟಿ ಭಾವಿಸಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಗೆ ವಿನೋದ್​​ ರಾಜ್​​ ಭೇಟಿ, ಸಾಂತ್ವನ: 1 ಲಕ್ಷ ರೂ. ಚೆಕ್ ನೀಡಿದ ನಟ - Vinod Raj visits Renukaswamy House

ಕೊರಟಾಲ ಶಿವ ನಿರ್ದೇಶನದ ಆ್ಯಕ್ಷನ್​​ ಥ್ರಿಲ್ಲರ್ ದೇವರ: ಭಾಗ 1ರಲ್ಲಿ ಜೂನಿಯರ್ ಎನ್‌ಟಿಆರ್ ಅವರ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಜೂನಿಯರ್ ಎನ್‌ಟಿಆರ್ ಜೊತೆಗೆ ಚಿತ್ರದಲ್ಲಿ ಸೈಫ್ ಅಲಿ ಖಾನ್, ಶ್ರುತಿ ಮರಾತೆ, ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ನರೇನ್ ಮತ್ತು ಕಲೈಯರಸನ್ ಸೆರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ಸಿನಿಮಾ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.