ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಸಿನಿಮಾ ಹಿನ್ನೆಲೆಯಿಂದ ಬಂದಿದ್ದರೂ ತಮ್ಮ ಪ್ರತಿಭೆಯಿಂದಲೇ ಒಳ್ಳೆ ಆಫರ್ಗಳನ್ನು ಪಡೆದ ನಟಿ. ಬಾಲಿವುಡ್, ಟಾಲಿವುಡ್ನಲ್ಲಿ ಮಿಂಚಿರುವ ಜಾನ್ವಿ ಕಪೂರ್ ಹೆಸರಲ್ಲಿ ದೊಡ್ಡ ಪ್ರಮಾಣದ ಆಸ್ತಿ ಇದೆ ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಹಾಗಾದರೆ ಅವರ ಟಾಪ್ 5 ಆಸ್ತಿಗಳನ್ನು ನಾವಿಲ್ಲಿ ನೋಡೋಣ.
ಮುಂಬೈನಲ್ಲಿ 65 ಕೋಟಿ ಡ್ಯೂಪ್ಲೆಕ್ಸ್: ಜುಲೈ 2022 ರಲ್ಲಿ ರಾಜ್‌ಕುಮಾರ್ ರಾವ್ ದಂಪತಿಗೆ 44 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಟ್ರಿಪ್ಲೆಕ್ಸ್ ಕಟ್ಟಡವನ್ನು ಮಾರಾಟ ಮಾಡಿದ್ದು ಗೊತ್ತೇ ಇದೆ. ಆ ಬಳಿಕ ಜಾನ್ವಿ ಬಾಂದ್ರಾದಲ್ಲಿ 65 ಕೋಟಿ ರೂಪಾಯಿ ಡ್ಯೂಪ್ಲೆಕ್ಸ್ ಖರೀದಿಸಿದ್ದಾರೆ. 8669 ಚದರ ಅಡಿ ವಿಸ್ತೀರ್ಣದ ಈ ನಿವಾಸದಲ್ಲಿ ಖಾಸಗಿ ಈಜುಕೊಳ ಸಹ ಇದೆ.
ಚೆನ್ನೈನಲ್ಲಿ ಇದೆ ಅತ್ಯಂತ ದುಬಾರಿ ಬಂಗಲೆ: ಮುಂಬೈನಲ್ಲಿ ಹೊಸ ಡ್ಯೂಪ್ಲೆಕ್ಸ್ ಖರೀದಿಸಿದ ಬಳಿಕ, ಜಾನ್ವಿ ಅವರ ಕುಟುಂಬವು ಚೆನ್ನೈನಲ್ಲಿ ನಾಲ್ಕು ಎಕರೆಯಲ್ಲಿ ಐಷಾರಾಮಿ ಮನೆಯೊಂದನ್ನು ನಿರ್ಮಿಸಿದೆ. ತಾಯಿ ಶ್ರೀ ದೇವಿ ಪ್ರೀತಿಯಿಂದ ಕಟ್ಟಿದ ಮನೆಗಳಿವು. ಅಂದ ಹಾಗೆ ಈ ಬಂಗಲೆಗೆ ವಿಶೇಷ ಆಕರ್ಷಣೆಯಾಗಿ ಈಜುಕೊಳ, ಉದ್ಯಾನ, ಗ್ಯಾಲರಿಗಳಿವೆ. ನಟಿ ಶ್ರೀದೇವಿ ಮರಣದ ನಂತರ, ಅವರ ಪತಿ ಬೋನಿ ಕಪೂರ್ ಈ ಮನೆಯನ್ನು ನವೀಕರಿಸಿದ್ದಾರೆ. ಅಷ್ಟೇ ಅಲ್ಲ ನಟಿಯ ನೆನಪುಗಳು ಮಾಸದಂತೆ ಇನ್ನಷ್ಟು ಸುಂದರಗೊಳಿಸಿದ್ದಾರೆ.
ಮರ್ಸಿಡಿಸ್ ಮೇಬ್ಯಾಕ್: ಜರ್ಮೈನ್ ಸೆಡಾನ್‌ನ ಮರ್ಸಿಡಿಸ್ ಮೇಬ್ಯಾಕ್ ಅನ್ನು ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಹೊಂದಿದ್ದಾರೆ. ಈ ಅಪರೂಪದ ಮರ್ಸಿಡಿಸ್ ಮೇ ಬ್ಯಾಕ್ ಅನ್ನು ಜಾನ್ವಿ ಕಪೂರ್ ಸಹ ಖರೀದಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ರೂ.1.94 ಕೋಟಿ. ಇದು ಸೀಟ್ ಮಸಾಜ್‌ಗಳು, ಮಿನಿ ಫ್ರಿಜ್, ಪನೋರಮಿಕ್ ಸನ್ ರೂಫ್, ಬ್ರೈಟ್ ಲೈಟಿಂಗ್ ಮತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
BMW X5: ಜಾನ್ವಿ ಕಪೂರ್ ಅವರ ಗ್ಯಾರೇಜ್‌ನಲ್ಲಿ ಮರ್ಸಿಡಿಸ್ ಮಾತ್ರ ಅಲ್ಲ ಬಿಎಂಡಬ್ಲ್ಯು ಎಕ್ಸ್5 ಕೂಡ ಇದೆ. ಟ್ವಿನ್‌ಪವರ್ ಟರ್ಬೊ V8 ಎಂಜಿನ್‌ನೊಂದಿಗೆ, ಇದು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ. ಇದು 0-100 ರಿಂದ 6.5 ಸೆಕೆಂಡುಗಳಲ್ಲಿ ತನ್ನ ವೇಗವನ್ನು ಹೆಚ್ಚಿಸಿಕೊಂಡು ಮುಂದೆ ಸಾಗುವ ಸಾಮರ್ಥ್ಯವನ್ನು ಹೊಂದಿದೆ.
ಇವರ ಬಳಿ ಇರುವ ಇತರ ದುಬಾರಿ ಕಾರುಗಳು: BMW X5 ಮತ್ತು Mercedes Maybach S560 ಜೊತೆಗೆ 2.7 ಕೋಟಿ ಮೌಲ್ಯದ Lexus LX 570 ಸಹ ಜಾನ್ವಿ ಬಳಿ ಇದೆ. 1.62 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್-ಬೆನ್ಝ್ ಎಸ್-ಕ್ಲಾಸ್, 67 ಲಕ್ಷ ರೂ ಬೆಲೆಯ ಮರ್ಸಿಡಿಸ್ ಜಿಎಲ್ಇ 250ಡಿ ಸಹ ಬಾಲಿವುಡ್ ಚೆಲುವೆಯ ಗ್ಯಾರೇಜ್ ನಲ್ಲಿ ಮಿರ ಮಿರ ಮಿಂಚುತ್ತಿವೆ.
ಇದನ್ನು ಓದಿ: ಜೂನ್ ಕೊನೆಗೆ ಗೆಳೆಯ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ವಿವಾಹ - Sonakshi Sinha
ಬಾಂಬೆ ಬೆಡಗಿ ಸೋನಿ ಚೆರಿಸ್ಟ ಜೊತೆ ಆದಿತ್ಯ ಶಶಿಕುಮಾರ್ ಬೊಂಬಾಟ್ ಡ್ಯಾನ್ಸ್: ನೋಡಿ - Kaadaadi Movie Song