ETV Bharat / entertainment

ಬಿಗ್​ ಬಾಸ್​​ ಶೋನಲ್ಲಿ ಜಗದೀಶ್ ಅಶ್ಲೀಲ ಪದ ಬಳಕೆ: 'ಎಲ್ಲವೂ ಗಮನದಲ್ಲಿದೆ' - ಈ ವಾರವಾದ್ರೂ ಸೀರಿಯಸ್​​ ಕ್ಲಾಸ್​ ಕೊಡ್ತಾರಾ ಕಿಚ್ಚ - BIGG BOSS KANNADA 11

'ಬಿಗ್​ ಬಾಸ್ ಕನ್ನಡ​ ಸೀಸನ್​ 11'ರ ಮಂಗಳವಾರದ ಸಂಚಿಕೆಯಲ್ಲಿ ಜಗದೀಶ್ ಕಿರಿಕ್​​ ಕೊಂಚ ಹೆಚ್ಚೇ ಇತ್ತು ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Bigg Boss Kannada 11
ಬಿಗ್​ ಬಾಸ್​ ಕನ್ನಡ 11 (Photo: Social Media)
author img

By ETV Bharat Entertainment Team

Published : Oct 16, 2024, 7:01 AM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​ ಸೀಸನ್​ 11' ಮೂರನೇ ವಾರದ ಆಟ ಮುಂದುವರಿಸಿದ್ದು, ಕಿರುಚಾಟಗಳು ದಿನದಿಂದ ದಿನಕ್ಕೆ ಹೆಚ್ಚೇ ಆಗುತ್ತಿದೆ. ಜಗದೀಶ್​ ವರ್ತನೆ ಮಿತಿ ಮೀರಿದೆ ಎಂಬುದು ಹಲವರ ಅಭಿಪ್ರಾಯ. ನಿನ್ನೆ ರಾತ್ರಿ ಪ್ರಸಾರವಾದ ಎಪಿಸೋಡ್​ನಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಜಗದೀಶ್​​​ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಮೊದಲ ವಾರದಲ್ಲೇ ಕಿರಿಕ್​ ಶುರು ಮಾಡಿದ್ದ ಅವರು ಬಿಗ್​ ಬಾಸ್​ಗೇನೆ ಚಾಲೆಂಜ್​​ ಹಾಕಿದ್ದರು. ನಂತರ ಎರಡನೇ ವಾರದಲ್ಲಿ, ಕೋಪ, ಕಿರುಚಾಟದ ಜೊತೆಗೆ ಮನರಂಜನೆಯ ರಸದೌತಣವನ್ನೂ ಉಣಬಡಿಸಿದ್ದಾರೆ. ಕ್ಯಾಪ್ಟನ್​​ ಆಗಿದ್ದ ಹಂಸ ಅವರ ಕಾಲೆಳೆಯುವುದರ ಜೊತೆಗೆ ಕಾಮಿಡಿ ಮಾಡುತ್ತಾ ಡ್ಯುಯೆಟ್​​ ಮಾಡಿದ್ದಾರೆ. ಎಲ್ಲ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ ಹಿನ್ನೆಲೆ, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಬಿಗ್​ ಬಾಸ್​ ಆಟಕ್ಕೆ ಇವರೇ ಸೂಕ್ತ ಎಂದು ನೋಡುಗರು ಅಭಿಪ್ರಾಯ ವ್ಯಕ್ತಡಿಸಿದ್ದಾರೆ.

ಆದರೆ ಕೆಲವೊಮ್ಮೆ ಇತಿಮಿತಿಗಳನ್ನು ಮೀರಿ ವರ್ತಿಸುತ್ತಾರೆ ಎಂದು ಸಹ ಒಂದಿಷ್ಟು ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ. ಜಗದೀಶ್​​ ಅವರ ಕೆಲ ಅತಿರೇಖದ ವರ್ತನೆಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅದರಂತೆ, ಮಂಗಳವಾರ ರಾತ್ರಿ ಪ್ರಸಾರ ಕಂಡ ಸಂಚಿಕೆಯಲ್ಲೂ ಸಖತ್​ ಸದ್ದು ಮಾಡಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣಗಳ ಲೆಕ್ಕ ಕೊಟ್ಟ ಜಗದೀಶ್​: '50 ಅಲ್ಲ 100 ಕೇಸ್​ ಹಾಕಿಸಿಕೊಳ್ತೀನಿ' ಎಂದ ಲೇಡಿ ಸ್ಪರ್ಧಿ

ಹೌದು, ಅಕ್ಟೋಬರ್​ 15ರ ಎಪಿಸೋಡ್​ನಲ್ಲಿ ಜಗದೀಶ್​ ಅವರು ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಸಂಚಿಕೆ ಆರಂಭದಿಂದಲೇ ಕಿರಿಕ್​ ಶುರು ಮಾಡಿದ ಅವರು, ಕ್ಯಾಮರಾ ಎದುರು ನಿಂತು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಾರ್ಯಕ್ರಮವನ್ನು ಸಹ ಬಹುವಾಗಿ ಟೀಕಿಸಿದ್ದಾರೆ. ಅವರ ಮಾತಿನಲ್ಲಿ ಹಲವು ಬಾರಿ ಬೀಪ್​​ ಸೌಂಡ್​ ಕೇಳಿ ಬಂದಿದೆ. ಮನೆ ಬಿಟ್ಟು ಹೋಗುತ್ತೇನೆಂದು ಬಟ್ಟೆ ಹಿಡಿದು ಹೊರಟು ನಿಂತಿದ್ದಾರೆ. ಕೆಟ್ಟ ಪದಗಳ ಬಳಕೆ ಹಿನ್ನೆಲೆ, ಮನೆಯ ಇತರ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಮೊದಲು, ಉಗ್ರಂ ಮಂಜು ಮತ್ತು ಜಗದೀಶ್​ ಉಗ್ರ ರೂಪ ತಾಳಿದ್ದಾರೆ. ನಂತರ ಚೈತ್ರಾ ಕುಂದಾಪುರ ಕೂಡಾ ರೌದ್ರಾವತಾರ ತಾಳಿದ್ದಾರೆ. ಮನೆಯ ಕ್ಯಾಪ್ಟನ್​ ಶಿಶಿರ್​​​ ಪರಿಸ್ಥಿತಿ ಸುಧಾರಿಸಲು ಹರಸಾಹಸ ಪಟ್ಟಿದ್ದಾರೆ. ಮನೆಯ ಕಠಿಣ ಪರಿಸ್ಥಿತಿ ನಿಯಂತ್ರಿಸಲು ಕ್ಯಾಪ್ಟನ್​ ಪಟ್ಟ ಪ್ರಯತ್ನಕ್ಕೆ ಬಿಗ್​ ಬಾಸ್​ ಕಡೆಯಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ: ಚಾನಲ್​ನೊಂದಿಗಿನ ನನ್ನ ಸಂಬಂಧ ಅದ್ಭುತ, ನನ್ನವರು ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕೂರುವವನಲ್ಲ: ಸುದೀಪ್​​

ಜಗದೀಶ್​ ಅವರ ಅತಿರೇಖದ ವರ್ತನೆಯಿಂದ ಬೇಸತ್ತ ಇತರ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಕ್ಯಾಪ್ಟನ್​ ಮೂಲಕ ಸಂದೇಶ ರವಾನಿಸಿದ್ದಾರೆ. ಎಲ್ಲವೂ ನಮ್ಮ ಗಮನದಲ್ಲಿದೆ. ಈ ಬಗ್ಗೆ ಮಾತನಾಡುವ ಸಂದರ್ಭ ಮಾತನಾಡುತ್ತೇವೆ. ನೀವು ತಾಳ್ಮೆ ಕಳೆದುಕೊಳ್ಳಬೇಡಿ. ಆದಷ್ಟು ಶಾಂತವಾಗಿರಲು ಪ್ರಯತ್ನಿಸಿ. ನಿಮ್ಮ ಭಾವನೆಗಳೂ ಸಹ ನಮಗೆ ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ, ಈ ವಾರವಾದ್ರೂ ಕಿಚ್ಚ ಸುದೀಪ್​​​ ಅವರು ಜಗದೀಶ್​ ಅವರಿಗೆ ಸೀರಿಯಸ್​​ ಕ್ಲಾಸ್​ ಕೊಡ್ತಾರಾ ಅಂತಾ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.