ETV Bharat / entertainment

ಬಿಗ್‌ಬಾಸ್ ಛೇಡಿಸಿದ ಜಗದೀಶ್: 'ಕೇಳೋರಿಗೆ ಹೇಳ್ಬೋದು, ಕೇಳದೇ ಇರೋರಿಗೆ ಏನ್ಮಾಡೋದು' ಎಂದ ಸ್ಪರ್ಧಿಗಳು! ಪ್ರೋಮೋ ನೋಡಿ - BIGG BOSS KANNADA 11

''ಕೇಳೋರಿಗೆ ಹೇಳ್ಬೋದು, ಕೇಳದೆ ಇದ್ದೋರಿಗೆ...?'' ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​ನ ಹೊಸ ಪ್ರೋಮೋ ಅನಾವರಣಗೊಂಡಿದೆ.

Bigg Boss Kannada 11
ಬಿಗ್​​ ಬಾಸ್ ಕನ್ನಡ ಸೀಸನ್​​ 11 (Social Media)
author img

By ETV Bharat Entertainment Team

Published : Oct 14, 2024, 6:17 PM IST

Updated : Oct 14, 2024, 6:28 PM IST

ಕನ್ನಡದ ಅತ್ಯಂತ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್​​ 11'ರಲ್ಲಿ ಹಲವು ಮಹತ್ವದ ಘಟನೆಗಳು ಜರುಗುತ್ತಿವೆ. ಯಾವ ಸೀಸನ್​​ಗಳಲ್ಲೂ ಮೊದಲೆರಡು ವಾರಗಳಲ್ಲಿ ನಡೆಯದ ಜಗಳ, ವಾದ ವಿವಾದ, ಕಿರುಚಾಟ ಎಲ್ಲಕ್ಕಿಂತ ಹೆಚ್ಚಾಗಿ ರೂಲ್ಸ್ ಬ್ರೇಕ್​​​ ಈ ಸೀಸನ್​​ನ ಮೊದಲೆರಡು ವಾರದಲ್ಲೇ ನಡೆದಿದೆ. ಮನೆಯಲ್ಲಿ ಅತಿ ಹೆಚ್ಚು ಬಾರಿ ನಿಯಮಗಳನ್ನು ಮುರಿದಿರುವ ಜಗದೀಶ್ ಮತ್ತೆ ಬೇಜವಾಬ್ದಾರಿಯಿಂದ ವರ್ತಿಸಿದಂತೆ ತೋರಿದೆ. ಇದರ ಸುಳಿವನ್ನು ಬಿಗ್​ ಬಾಸ್​ ಪ್ರೋಮೋ ಬಿಟ್ಟುಕೊಟ್ಟಿದೆ.

ಬಿಗ್​ ಬಾಸ್​​ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರದಲ್ಲಿ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್​​ ಆಗಿದ್ದರು. ಎರಡನೇ ವಾರ ಯಾವುದೇ ಎಲಿಮಿನೇಶನ್​​ ನಡೆದಿಲ್ಲ. ವಾರದ ಕತೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್​ ಸುದೀಪ್​ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ಯಶಸ್ವಿಯಾಗಿ ಮೂಡಿಬಂದ ಬೆನ್ನಲ್ಲೇ, ಅಭಿನಯ ಚಕ್ರವರ್ತಿ ಸುದೀಪ್​ ತಮ್ಮ ನಿರೂಪಣೆಗೆ ವಿದಾಯ ಘೋಷಿಸಿದ್ದಾರೆ. ಮುಂದಿನ ಸೀಸನ್​ಗಳನ್ನು ನಾನು ನಡೆಸಿಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಬಿಗ್​ ಬಾಸ್​ ಕೂಡಾ ಸ್ಪರ್ಧಿಗಳ ವರ್ತನೆ ವಿರುದ್ಧ ಆಕ್ರೋಶಗೊಂಡು ಮನೆಯಿಂದ ಹೊರನಡೆದಿದ್ದಾರೆ. ಇಷ್ಟಾದ್ರೂ ಸ್ಪರ್ಧಿ ಜಗದೀಶ್​ ತಮಗೆ ಬೇಕಾದಂತೆ ವರ್ತಿಸತೊಡಗಿದ್ದಾರೆ.

''ಕೇಳೋರಿಗೆ ಹೇಳ್ಬೋದು, ಕೇಳದೆ ಇದ್ದೋರಿಗೆ...?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್‌ಗಳಲ್ಲಿ ಬಿಗ್​​ ಬಾಸ್​​ ಕನ್ನಡ ಪ್ರೋಮೋ ಅನಾವರಣಗೊಳಿಸಿದೆ. ಬೆಳಗ್ಗಿನ ಪ್ರೋಮೋದಲ್ಲಿ, ಸ್ಪರ್ಧಿಗಳ ವರ್ತನೆಗೆ ಆಕ್ರೋಶಗೊಂಡ ಬಿಗ್​ ಬಾಸ್​​ ಮನೆಯಿಂದ ಹೊರನಡೆಯುತ್ತಿದ್ದೇನೆ, ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂಬ ಬಹಳ ಸಿಟ್ಟಿನಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮನೆಯ ಸ್ಪರ್ಧಿಗಳು ಆತಂಕಕ್ಕೊಳಗಾಗಿದ್ದರು. ಆದ್ರೆ ಜಗದೀಶ್​ ಮಾತ್ರ ಕ್ಯಾರೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ.

ಇದನ್ನೂ ಓದಿ: ಉಪೇಂದ್ರ ಯುಐ ರಿಲೀಸ್​ ಡೇಟ್ ಅನೌನ್ಸ್: 'ಸಿನಿಮಾಗಳಿಗೆ ಹಿಟ್ ಫ್ಲಾಪ್ ಅಂತಾ ಹೇಳ್ತಿದ್ರಿ, ಈ ಸಿನಿಮಾ ನಿಮ್ಮನ್ ನೋಡಿ'

ಕ್ಯಾಮರಾ ಎದುರು ನಿಂತ ಜಗದೀಶ್​, ಬಿಗ್​ ಬಾಸ್​ ಆಕಡೆ ಹೋದ್ರೆ ಸ್ವಲ್ಪ ನಾಷ್ಟ ಮಾಡ್ಕೊಳಿ. ಮೈಸೂರ್​ ರೋಡ್​ ಕಡೆ ಹೋದ್ರೆ ತಟ್ಟೆ ಇಡ್ಲಿ ಸಿಗುತ್ತೆ. ತುಮಕೂರ್ ಜಂಕ್ಷನ್​ ಅಲ್ಲಿ ಒಳ್ಳೆ ಚಿತ್ರಾನ್ನ ಸಿಗುತ್ತೆ ತಗೊಳಿ. ಗೌರಿಬಿದನೂರ್ ಕಡೆ ಹೋದ್ರೆ ಚಿಕನ್​ ಫ್ರೈ ಸಿಗುತ್ತೆ ಅಂತಾ ಹೇಳಿದ್ದಾರೆ. ಅಲ್ಲೇ ಇದ್ದ ಧನರಾಜ್​ ಅವರು ಬಿಗ್​ ಬಾಸ್​ ಟ್ರಿಪ್​ಗೆ ಹೋಗಿರೋದಲ್ಲ ಎಂದಿದ್ದಾರೆ. ಆದಾಗ್ಯೂ ಮಾತು ಮುಂದುವರಿಸಿದ ಜಗದೀಶ್​, ಚಿಕ್ಕಬಳ್ಳಾಪುರ ಕಡೆ ಹೋದ್ರೆ ನಾಟಿ ಕೋಳಿ ಫ್ರೈ ಸಿಗುತ್ತೆ ಎಂದಿದ್ದಾರೆ. ನಂತರ, 'ಬಿಗ್ ಬಾಸ್​ ಟ್ರಿಪ್​ಗೆ ಹೋಗಿರೋದಲ್ಲ, ನಮ್ಮ ವರ್ತನೆ ನೋಡಿ, ಬೇಸತ್ತು ಹೋಗಿರೋದು' ಎಂದು ಧನರಾಜ್ ಟೀಕಿಸಿದರು.

ಇದನ್ನೂ ಓದಿ: ಸುದೀಪ್​ ಗುಡ್​ ಬೈ ಬೆನ್ನಲ್ಲೇ ಮನೆಯಿಂದ ಹೊರನಡೆದ ಬಿಗ್​ ಬಾಸ್​​! ಸ್ಪರ್ಧಿಗಳ ಉಡಾಫೆತನದ ವಿರುದ್ಧ ರೊಚ್ಚಿಗೆದ್ದ Bigg Boss

ಮತ್ತೊಂದೆಡೆ ಆತಂಕದಲ್ಲಿ ಕುಳಿತಿದ್ದ ಇತರೆ ಸ್ಪರ್ಧಿಗಳು ಕೇಳೋರಿಗೆ ಹೇಳ್ಬೋದು. ಕೇಳದೇ ಇರೋರಿಗೆ ಅರ್ಥ ಮಾಡಿಸೋದೇಗೆ? ಎಂದು ಚರ್ಚೆ ನಡೆಸಿದ್ದಾರೆ.

Last Updated : Oct 14, 2024, 6:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.