ETV Bharat / entertainment

ಬಾಲಿವುಡ್​​ನಲ್ಲಿ ಬ್ಯುಸಿಯಾದ ಸ್ಯಾಂಡಲ್​ವುಡ್​ ಚೆಲುವೆ ಇತಿ ಆಚಾರ್ಯ: ಹೊಸ ಸಿನಿಮಾ ಘೋಷಣೆ - Iti Acharya

author img

By ETV Bharat Karnataka Team

Published : Jul 16, 2024, 3:59 PM IST

ಬಹುಭಾಷಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇತಿ ಆಚಾರ್ಯ ಅವರ ಹೊಸ ಹಿಂದಿ ಚಿತ್ರ ಘೋಷಣೆಯಾಗಿದೆ.

Iti Acharya
ಇತಿ ಆಚಾರ್ಯ (ETV Bharat)

ಇತಿ ಆಚಾರ್ಯ, ನಟನೆ ಜೊತೆಗೆ ಮಾಡೆಲಿಂಗ್​ನಲ್ಲೂ ಮಿಂಚುತ್ತಿರುವ ಚೆಲುವೆ. 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡಿರುವ ಈ ಕನ್ನಡತಿ ಆರ್.ವಿ.ಎಸ್.ಪಿ. ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ.

Iti Acharya
ಇತಿ ಆಚಾರ್ಯ (ETV Bharat)

ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋರ್ಡಿಂಗ್ಸ್​ನಲ್ಲಿ ಕಾಣಿಸಿಕೊಂಡ ಹಿರಿಮೆ ಅವರದ್ದು. ಅಮೆರಿಕದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್​​​​​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತಿ ಆಚಾರ್ಯ ಜನಪ್ರಿಯತೆ ಸಂಪಾದಿಸಿದ್ದಾರೆ. ಜನ್ಮದಿನದ ಸಂಭ್ರಮದಲ್ಲಿರುವ ನಟಿ ಹೊಸ ಸಿನಿಮಾದ ಅಪ್ಡೇಟ್​​ ಹಂಚಿಕೊಂಡಿದ್ದಾರೆ.

Iti Acharya
ಇತಿ ಆಚಾರ್ಯ (ETV Bharat)

ಇದನ್ನೂ ಓದಿ: ವಿಭಿನ್ನ ಪ್ರೇಮಕಥೆಯ 'ಕಡಲೂರ ಕಣ್ಮಣಿ' ಟ್ರೇಲರ್​ ಅನಾವರಣ - Kadaloora Kanmani Trailer

''ದಿ ಶೂಸ್ ಐ ವೋರ್'' ಎಂಬ ಹೊಸ ಹಿಂದಿ ಚಿತ್ರದಲ್ಲಿ ಇತಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಯುವ ಪ್ರತಿಭೆ ಸಂಜಯ್ ಚರಣ್ ನಿರ್ದೇಶನದ ಈ ಸಿನಿಮಾದಲ್ಲಿ ಇನ್ನಮುಲ್ಕ್ ಮತ್ತು ಸ್ಕ್ಯಾಮ್ ಖ್ಯಾತಿಯ ಫೈಸಲ್ ರಶೀದ್​ಗೆ ಜೋಡಿಯಾಗಿ ಕನ್ನಡತಿ ಅಭಿನಯಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇತಿ, 'ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಇದೆ. ಬಹಳ ಉತ್ಸುಕಳಾಗಿದ್ದೇನೆ. ಈ ಪಯಣದಲ್ಲಿ ಸಾಕಷ್ಟು ಕಲಿಯುವುದಿದೆ. ವಿಭಿನ್ನ ಕಥೆಯಾಗಿದ್ದು, ಇದೊಂದು ಟೆಕ್ನಿಕಲ್ ಸಿನಿಮಾ' ಎಂದಿದ್ದಾರೆ. ಇವರು ಕನ್ನಡದಲ್ಲಿ ಕವಚ, ಧ್ವನಿ, ಡೀಲ್‌ ರಾಜಾ, ಪಂಗನಾಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 'ಮ್ಯಾಕ್ಸ್‌' ಆಟ ಶುರು: ಆ್ಯಕ್ಷನ್​​ ಅವತಾರದಲ್ಲಿ ಅಬ್ಬರಿಸಿದ ಅಭಿನಯ ಚಕ್ರವರ್ತಿ - Sudeep Max Teaser

ETV Bharat Logo

Copyright © 2024 Ushodaya Enterprises Pvt. Ltd., All Rights Reserved.