ETV Bharat / entertainment

'ರಾಮಾಯಣ'ಕ್ಕೆ ರಾಕಿಂಗ್ ಸ್ಟಾರ್ ಯಶ್ ಸಹ​ ನಿರ್ಮಾಪಕ? - Yash - YASH

'ರಾಮಾಯಣ'ದಲ್ಲಿ ನಟ ಯಶ್​ ರಾವಣನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇದೀಗ ಸಹ ನಿರ್ಮಾಪಕರಾಗಿಯೂ ಅವರು ಚಿತ್ರತಂಡದ ಭಾಗವಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

Yash
ಯಶ್
author img

By ETV Bharat Karnataka Team

Published : Apr 10, 2024, 4:15 PM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ' ಇತ್ತೀಚೆಗಷ್ಟೇ ಸೆಟ್ಟೇರಿದೆ. ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ಅಂತೆಕಂತೆಗಳು ಜೋರಾಗಿವೆ. ಆದರೆ ಚಿತ್ರತಂಡ ಮಾತ್ರ ಮೌನ ಮುಂದುವರಿಸಿದೆ. ಇದೇ ತಿಂಗಳ ರಾಮನವಮಿ ಸಂದರ್ಭದಲ್ಲಿ ಸಿನಿಮಾ ಘೋಷಣೆಯಾಗುವ ಸಾಧ್ಯತೆಗಳಿದ್ದು, ಏಪ್ರಿಲ್​​ 17ರಂದೇ ಎಲ್ಲದಕ್ಕೂ ಅಧಿಕೃತ ಮಾಹಿತಿ ಸಿಗಲಿದೆ. ಸದ್ಯ ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್ ಯಶ್ ಕುರಿತಾದ ಹೊಸ ಸುದ್ದಿಯೊಂದು ಸಖತ್​ ಸದ್ದು ಮಾಡುತ್ತಿವೆ.

ಏಪ್ರಿಲ್​​ 2ರಂದು ಚಿತ್ರೀಕರಣ ಪ್ರಾರಂಭವಾಗಿದೆ. ಸಣ್ಣಪುಟ್ಟ ದೃಶ್ಯಗಳ ಶೂಟಿಂಗ್​ ನಡೆದಿದೆ. ಇತ್ತೀಚೆಗೆ ಶೂಟಿಂಗ್​ ಸೆಟ್​ನ ಕೆಲವು ಫೋಟೋ, ವಿಡಿಯೋಗಳು ವೈರಲ್​ ಆಗಿದ್ದವು. ಅಯೋಧ್ಯೆಯಂತೆ ತೋರುವ ಸೆಟ್‌ ನಿರ್ಮಾಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದವು. ಅಲ್ಲದೇ ಶ್ರೀರಾಮನ ಪಾತ್ರಕ್ಕೆ ಬಾಲಿವುಡ್​ ಸೂಪರ್ ಸ್ಟಾರ್ ರಣ್​ಬೀರ್ ಕಪೂರ್ ತಯಾರಿ ನಡೆಸುತ್ತಿರುವ ಫೋಟೋಗಳೊಂತೂ ಸಿನಿಪ್ರಿಯರ ಕುತೂಹಲ ದ್ವಿಗುಣಗೊಳಿಸಿತು. ಹೀಗೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದ್ದು, ಸದ್ಯ ಚಿತ್ರದಲ್ಲಿ ಯಶ್ ಸಹ ನಿರ್ಮಾಪಕರು ಎಂಬುದು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.

ಈವರೆಗೆ, ರಾವಣನ ಪಾತ್ರವನ್ನು ಯಶ್​ ನಿರ್ವಹಿಸಲಿದ್ದಾರೆ, ಇದಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆಯಲಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು. ಇದೀಗ ಯಶ್ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ರಾವಣನ ಪಾತ್ರ ನಿರ್ವಹಿಸುವ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೋ ಅಥವಾ ಕೇವಲ ಸಹ ನಿರ್ಮಾಪಕರಾಗಿ ಚಿತ್ರತಂಡದ ಭಾಗವಾಗಲಿದ್ದಾರೋ ಎಂಬುದನ್ನು ಚಿತ್ರತಂಡ ಇನ್ನಷ್ಟೇ ಬಹಿರಂಗಪಡಿಸಲಬೇಕಿದೆ.

ಸದ್ಯದ ಮಾಹಿತಿಯಂತೆ, ರಾಮಾಯಣ ಮೂರು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗ 2025ರ ಮಧ್ಯದಲ್ಲಿ ಬಿಡುಗಡೆ ಆಗಲಿದೆ. ಮೊದಲ ಭಾಗದಲ್ಲಿ ರಾವಣನ ಪಾತ್ರ ಇರುವುದಿಲ್ಲ. ಈ ಭಾಗದಲ್ಲಿ ಶ್ರೀರಾಮ-ಸೀತೆಯ ಮದುವೆ, ಎರಡನೇ ಭಾಗದಲ್ಲಿ ವನವಾಸ ಮತ್ತು ಮೂರನೇ ಭಾಗದಲ್ಲಿ ರಾವಣನೊಂದಿಗಿನ ಯುದ್ಧವನ್ನು ತೋರಿಸುವ ಗುರಿ ಇದೆ.

ಇದನ್ನೂ ಓದಿ: 'ರಾಮಾಯಣ'ಕ್ಕಾಗಿ ₹11 ಕೋಟಿಯ ಅಯೋಧ್ಯೆ ಸೆಟ್ ನಿರ್ಮಾಣ: ವಿಡಿಯೋ ವೈರಲ್ - Ramayana Shooting set

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಬಿಗ್​ ಬಜೆಟ್​ನಲ್ಲಿ ನಿರ್ಮಾಣವಾಗಲಿದೆ. ರಾಮನ ಪಾತ್ರಕ್ಕೆ ರಣ್​ಬೀರ್​, ರಾವಣನ ಪಾತ್ರಕ್ಕೆ ಯಶ್​ ಎಂದು ಹೇಳಲಾಗಿದ್ದು, ಸೀತಾದೇವಿ ಪಾತ್ರಕ್ಕೆ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ. ಈ ಮೊದಲು ಸೀತೆಯ ಪಾತ್ರಕ್ಕೆ ರಣ್​​ಬೀರ್​ ಕಪೂರ್ ಪತ್ನಿ, ಬಾಲಿವುಡ್​​ ಅಭಿನೇತ್ರಿ ಆಲಿಯಾ ಭಟ್​ ಹೆಸರು ಕೇಳಿಬಂದಿತ್ತು.

ಇದನ್ನೂ ಓದಿ: ಝೈದ್ ಖಾನ್ 2ನೇ ಸಿನಿಮಾ ಅನೌನ್ಸ್: 'ಕಲ್ಟ್'ನಲ್ಲಿ 'ಬನಾರಸ್' ಹುಡುಗ - Cult Movie

ಸಿನಿಮಾ ಅಧಿಕೃತವಾಗಿ ಘೋಷಣೆ ಆಗದಿದ್ದರೂ, ರಣ್​ಬೀರ್ ಕಪೂರ್ ಆರ್ಚರಿ (ಬಿಲ್ಲುಗಾರಿಕೆ) ಸೇರಿದಂತೆ ಇತರೆ ಕಠಿಣ ತರಬೇತಿ ಪಡೆಯುತ್ತಿರುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಹಿನ್ನೆಲೆಯಲ್ಲಿ ಸಿನಿಮಾ ಬರುವುದು ಪಕ್ಕಾ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ರಣ್​​ಬೀರ್ ಅವರ ಫಿಟ್ನೆಸ್​ ಟ್ರೈನರ್ ನಮ್​ವುಕ್​​ ಕಂಗ್ ನಟನ ಹೆಡ್​ಸ್ಟ್ಯಾಂಡ್​ ಫೋಟೋ ಹಂಚಿಕೊಂಡು "ಮೊದಲ ಹೆಡ್‌ಸ್ಟ್ಯಾಂಡ್, ರಾಮಾಯಣ, ನ್ಯೂ ಸ್ಕಿಲ್, ಟ್ರೇನಿಂಗ್‌ ವಿತ್‌ ನಮ್, ಪ್ರಿಪರೇಶನ್​​" ಎಂಬ ಕ್ಯಾಪ್ಷನ್​ ಕೊಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.