ಉದ್ಯಮ ಸಾಮ್ರಾಜ್ಯದ ಸಾಮ್ರಾಟ ರತನ್ ಟಾಟಾ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆ ಹಿನ್ನೆಲೆ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಹಾನ್ ವ್ಯಕ್ತಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ ಸ್ಟೋರಿ: ''ಟೈಟಾನ್ ಗಡಿಯಾರದ ಸದ್ದು ನಿಂತಿದೆ. ರತನ್ ಟಾಟಾ, ಭಾರತದ ಹೆಮ್ಮೆ. ಸಮಗ್ರತೆ, ನಾಯಕತ್ವ, ಪರೋಪಕಾರದ ಸಂಕೇತ. ಭಾರತದ ಆರ್ಥಿಕತೆಯನ್ನು ಎತ್ತರಕ್ಕೆ ಕೊಂಡೊಯ್ಯುಲು ತಮ್ಮನ್ನು ಸಮರ್ಪಿಸಿದ್ದರು. ಅವರ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ, ಅವರು ಇಹಲೋಕ ತ್ಯಜಿಸಿರಬಹುದು. ಆದ್ರೆ ಅವರ ಪ್ರಭಾವ ನಮ್ಮೆಲ್ಲರ ಹೃದಯದಲ್ಲಿ ಸದಾ ಜೀವಂತ. ರೆಸ್ಟ್ ಇನ್ ಪೀಸ್ ಸರ್'' ಎಂದು ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಬರೆದುಕೊಂಡಿದ್ದಾರೆ.
ಶಿವಣ್ಣ ಟ್ವೀಟ್: ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ರತನ್ ಟಾಟಾ ಅವರ ಫೋಟೋ ಹಂಚಿಕೊಂಡ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ''ಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾರವರಿಗೆ ಭಾವಪೂರ್ಣ ಶ್ರದ್ಧಾಂಜಲಿ'' ಎಂದು ಬರೆದುಕೊಂಡಿದ್ದಾರೆ.
ಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾರವರಿಗೆ ಭಾವಪೂರ್ಣ ಶ್ರದ್ಧಾಂಜಲಿ pic.twitter.com/lX6mBerdFu
— DrShivaRajkumar (@NimmaShivanna) October 9, 2024
ಗೀತಾಪಿಕ್ಚರ್ಸ್ ಪೋಸ್ಟ್: ಶಿವರಾಜ್ಕುಮಾರ್ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ ಗೀತಾಪಿಕ್ಚರ್ಸ್ ಕೂಡಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡು, ''ದೇಶ ಕಂಡ ಅತ್ಯದ್ಬುತ ವ್ಯಕ್ತಿಗಳಲ್ಲಿ ಒಬ್ಬರಾದ ರತನ್ ಟಾಟಾ ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ'' ಎಂದು ಬರೆದುಕೊಂಡಿದ್ದಾರೆ.
ಉಪೇಂದ್ರ ಟ್ವೀಟ್: 'ಮಹಾನ್ ಚೇತನ ರತನ್ ಟಾಟಾ ರವರಿಗೆ ಭಾವಪೂರ್ಣ ವಿದಾಯ.. ಓಂ ಶಾಂತಿ' ಎಂದು ಜನಪ್ರಿಯ ನಟ ಉಪೇಂದ್ರ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಮಹಾನ್ ಚೇತನ ರತನ್ ಟಾಟಾ ರವರಿಗೆ ಭಾವಪೂರ್ಣ ವಿದಾಯ..
— Upendra (@nimmaupendra) October 10, 2024
ಓಂ ಶಾಂತಿ..🙏🙏🙏 pic.twitter.com/TUwbydwAQk
ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್: ಟಾಟಾ ಸಮೂಹದ ಮುಖ್ಯಸ್ಥರಾದ ಶ್ರೀ ರತನ್ ಟಾಟಾ ಅವರಿಗೆ ಭಾವಪೂರ್ಣ ನಮನಗಳು. ಓಂ ಶಾಂತಿ ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.
ಟಾಟಾ ಸಮೂಹದ ಮುಖ್ಯಸ್ಥರಾದ ಶ್ರೀ ರತನ್ ಟಾಟಾ ಅವರಿಗೆ ಭಾವಪೂರ್ಣ ನಮನಗಳು.
— Ashwini Puneeth Rajkumar (@Ashwini_PRK) October 10, 2024
ಓಂ ಶಾಂತಿ.
The Icon of leadership, philanthropy and ethics!
His legacy will continue to inspire generations. May his soul rest in peace.#RatanTata pic.twitter.com/XBVSvfB0K3
ರಕ್ಷಿತ್ ಶೆಟ್ಟಿ ಟ್ವೀಟ್: ನಮ್ರತೆಯ ಪ್ರತಿರೂಪ, ಜಂಟಲ್ಮ್ಯಾನ್ ಮತ್ತು ಗೌರವಾನ್ವಿತ ಉದ್ಯಮಿ. ದೇಶಕ್ಕೆ ನಿಮ್ಮ ಕೊಡುಗೆ ಮತ್ತು ನಿಮ್ಮ ಸಮಾಜ ಸೇವೆಯನ್ನು ಎಂದಿಗೂ ಮರೆಯಲಾಗದು ಸರ್. ನಾವು ನಿಜವಾಗಿಯೂ ರತನ್‌ನನ್ನು ಕಳೆದುಕೊಂಡಿದ್ದೇವೆ ಎಂದು ಚಾರ್ಲಿ ಖ್ಯಾತಿಯ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
Epitome of humilty, a true gentlman and a revered businessman. Your contribution to the country and service to mankind will never be forgotten sir. We’ve truly lost a Ratan!
— Rakshit Shetty (@rakshitshetty) October 10, 2024
Om Shanti! pic.twitter.com/jhcQZSwuTv
ಸತೀಶ್ ನಿನಾಸಂ ಪೋಸ್ಟ್: ರತನ್ ಟಾಟಾ ಫೋಟೋ ಹಂಚಿಕೊಂಡಿರುವ ನಟ ಸತೀಶ್ ನಿನಾಸಂ ಕೈ ಮುಗಿಯುವ ಎಮೋಜಿ ಹಾಕಿ ತಮ್ಮ ಸಂತಾಪ ಸೂಚಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಪೋಸ್ಟ್: ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ''ಭಾರತವಿದು ನಿಜವಾದ ದಂತಕಥೆಯನ್ನು ಕಳೆದುಕೊಂಡಿದೆ. ರತನ್ ಟಾಟಾ, ದೂರದೃಷ್ಟಿಯ ನಾಯಕ ಮತ್ತು ವಿನಮ್ರ ವ್ಯಕ್ತಿ. ಅಚಲ ನೈತಿಕತೆ, ನಾಯಕತ್ವ ಮತ್ತು ಪರೋಪಕಾರಿ ಮನೋಭಾವಕ್ಕೆ ಒಂದು ಶ್ರೇಷ್ಠ ಉದಾಹರಣೆ. ಅವರ ಪರಂಪರೆ ಮುಂದುವರಿಯಲಿದೆ. ಎಂದಿಗೂ ಸ್ಮರಣೆಯಲ್ಲಿರುತ್ತಾರೆ. ರೆಸ್ಟ್ ಇನ್ ಪೀಸ್ ಸರ್.
ಕೆಆರ್ಜಿ ಸ್ಟುಡಿಯೋಸ್ ಪೋಸ್ಟ್: ಕನ್ನಡದ ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆಆರ್ಜಿ ಸ್ಟುಡಿಯೋಸ್ ಪೋಸ್ಟ್ ಶೇರ್ ಮಾಡಿ, ಭಾರತದ ಕೈಗಾರಿಕೋದ್ಯಮದ "ಹೆಮ್ಮೆ ರತನ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಸ್ಫೂರ್ತಿದಾಯಕ ಮಾತುಗಳು ಮತ್ತು ಕೆಲಸಗಳಿಂದಾಗಿ ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಉಳಿಯುತ್ತೀರಿ ಸರ್ ಎಂದು ಬರೆದುಕೊಂಡಿದೆ.
ಆ್ಯಂಕರ್ ಅನುಶ್ರೀ ಪೋಸ್ಟ್: 'ರತ್ನನ ಪರಪಂಚಕ್ಕೆ ವಿದಾಯ ಹೇಳಿದ ಮಾನವೀಯತೆ ಮೆರೆದ ರತ್ನ. ನಿಜವಾದ ಸ್ಫೂರ್ತಿ. ರೆಸ್ಟ್ ಇನ್ ಪೀಸ್ ಸರ್' ಎಂದು ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಹೀಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ: ರತನ್ ಟಾಟಾ ನಿಧನಕ್ಕೆ ಬಾಲಿವುಡ್ ಕಂಬನಿ; ನಿಮ್ಮ ಪರಂಪರೆ ಪೀಳಿಗೆಗೆ ಸ್ಫೂರ್ತಿ ಎಂದ ಸೆಲಬ್ರಿಟಿಸ್