ETV Bharat / entertainment

ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಟ್ರೇಲರ್​​: ಪ್ರೇಕ್ಷಕರ ರಿಯಾಕ್ಷನ್​​​ ಹೀಗಿತ್ತು - Indian 2 Trailer - INDIAN 2 TRAILER

ಕಮಲ್ ಹಾಸನ್ ಅಭಿನಯದ ಮತ್ತು ಶಂಕರ್ ನಿರ್ದೇಶನದ ಪ್ಯಾನ್ - ಇಂಡಿಯನ್​ ಸಿನಿಮಾ 'ಇಂಡಿಯನ್ 2' ಜುಲೈ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಚೆನ್ನೈನಲ್ಲಿ ಆಯ್ದ ಪ್ರೇಕ್ಷಕರಿಗೆ ಟ್ರೇಲರ್ ಪ್ರದರ್ಶಿಸಿದ್ದು, ಪ್ರತಿಕ್ರಿಯೆಗಳು ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿವೆ.

Indian 2 Trailer
ಇಂಡಿಯನ್ 2 ಟ್ರೇಲರ್ ರಿವ್ಯೂವ್ (X handle)
author img

By ETV Bharat Karnataka Team

Published : Jun 25, 2024, 2:13 PM IST

ಸೌತ್ ಸೂಪರ್ ಸ್ಟಾರ್​ ಕಮಲ್ ಹಾಸನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಇಂಡಿಯನ್ 2'. ಮುಂದಿನ ತಿಂಗಳು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಈ ಸೀಕ್ವೆಲ್ ಬ್ಲಾಕ್ ಬಸ್ಟರ್ ಹಿಟ್ ಆಗುವ ನಿರೀಕ್ಷೆಯಿದೆ. ಸಿನಿಪ್ರಿಯರ ಗಮನ ಸೆಳೆಯೋ ನಿಟ್ಟಿನಲ್ಲಿ, ಚಿತ್ರದ ಪ್ರಚಾರ ಸಾಗಿದೆ. ಚಿತ್ರತಂಡ ಈವರೆಗೆ ನಿಯಮಿತ ಅಪ್​ಡೇಟ್ಸ್ ಒದಗಿಸಿತ್ತು.

ಇಂದು, ಅದ್ಧೂರಿ ಪ್ರಮೋಶನ್​ ಸಲುವಾಗಿ ಇಂಡಿಯನ್ 2 ಟ್ರೇಲರ್ ಅನ್ನು ಚೆನ್ನೈನ ಥಿಯೇಟರ್​​​ನಲ್ಲಿ ಪ್ರದರ್ಶಿಸಲಾಯಿತು. ಟ್ರೇಲರ್ ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಚಿತ್ರಮಂದಿರದಲ್ಲಿ ಟ್ರೇಲರ್ ವೀಕ್ಷಿಸಿದವರು ಎಕ್ಸ್ ಸೇರಿದಂತೆ ವಿವಿಧ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಇಂಡಿಯನ್ 2 ಟ್ರೇಲರ್ ಭಾಗಶಃ ಬಿಡುಗಡೆಯಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಇನ್ನಷ್ಟೇ ತೆರೆಗಪ್ಪಳಿಸಬೇಕಿದೆ. ಚಿತ್ರಮಂದಿರದಲ್ಲಿ ಟ್ರೇಲರ್​ ವೀಕ್ಷಿಸಿದವರ ಪೈಕಿ ಹೆಚ್ಚಿನವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡು ನಿಮಿಷಗಳ ವಿಡಿಯೋದಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಹೇಗೆ ಲಂಚ ಕೇಳುತ್ತಾರೆ ಎಂಬುದನ್ನು ತೋರಿಸಲಾಗಿದೆ.

ಟ್ರೇಲರ್​ ಸೋಷಿಯಲ್​ ಮೀಡಿಯಾದಲ್ಲಿ ಇಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಗೆ ಇನ್ನೆರಡು ವಾರಗಳಿದ್ದು, ಪ್ರಚಾರದ ವಿಡಿಯೋಗೆ ಸಿಕ್ಕಿರುವ ಸಕಾರಾತ್ಮಕ ಪ್ರತಿಕ್ರಿಯೆ ಸಿನಿಮಾಗೆ ಪ್ಲಸ್ ಪಾಯಿಂಟ್​ ಆಗಿ ಕೆಲಸ ಮಾಡಲಿದೆ ಅನ್ನೋ ಭರವಸೆ ಚಿತ್ರತಂಡದ್ದು.

'ಇಂಡಿಯನ್ 2', 1996ರ 'ಇಂಡಿಯನ್' ಚಿತ್ರದ ಮುಂದುವರಿದ ಭಾಗ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಬಂಡವಾಳ ಹೂಡಿರೋ ಈ ಚಿತ್ರದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸೇನಾಪತಿಯಾಗಿ ಮರಳಲಿದ್ದಾರೆ. ಎರಡು ದಶಕಗಳ ನಂತರ ನಿರ್ದೇಶಕ ಶಂಕರ್ ಮತ್ತು ನಟ ಕಮಲ್ ಹಾಸನ್ ಮತ್ತೆ ಒಂದಾಗಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ: ಪ್ರಭಾಸ್​​ 'ಕಲ್ಕಿ' ಚಿತ್ರದ 'ಬುಜ್ಜಿ' ವಾಹನವನ್ನೇರಿದ ಡಿವೈನ್ ಸ್ಟಾರ್ ರಿಷಬ್​ ಶೆಟ್ಟಿ - Rishab Shetty rides Bujji

ಕಥೆ ಮತ್ತು ನಾಯಕ ನಟ ಕಮಲ್ ಹಾಸನ್ ಅವರ ನೋಟ ಚಿತ್ರದ ಹೈಲೈಟ್ಸ್ ಎಂದೇ ಹೇಳಬಹುದು. ಬರೋಬ್ಬರಿ 28 ವರ್ಷಗಳ ಬಳಿಕ ಸೀಕ್ವೆಲ್​​ ಬರುತ್ತಿದ್ದು, ಗುರುತು ಸಿಗಲಾರದಷ್ಟು ವಿಭಿನ್ನ ನೋಟದಲ್ಲಿ, ವಯಸ್ಸಾದ ಪಾತ್ರದಲ್ಲಿ ಕಮಲ್​ ಹಾಸನ್​​ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಈಗಾಗಲೇ ಅನಾವರಣಗೊಂಡಿರುವ ಪೋಸ್ಟರ್​​ಗಳು ಬಿಟ್ಟುಕೊಟ್ಟಿವೆ.

ಇದನ್ನೂ ಓದಿ: 'ಭಾರತದ ಕರಾಳ ಅಧ್ಯಾಯ': 'ಎಮರ್ಜೆನ್ಸಿ'ಗಿಲ್ಲ ಶೀಘ್ರ ಬಿಡುಗಡೆ ಭಾಗ್ಯ, ಮತ್ತೆ ಸಿನಿಮಾ ಮುಂದೂಡಿದ ಕಂಗನಾ ​​ - Emergency New Release Date

ಬಹುನಿರೀಕ್ಷಿತ ಸೀಕ್ವೆಲ್​​ ಶೂಟಿಂಗ್​ಗೆ ಬಹಳ ಸಮಯ ಹಿಡಿದಿದೆ. ಅಂತಿಮವಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದ್ದು, ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುವ ನಿರೀಕ್ಷೆಯಿದೆ. ಚಿತ್ರ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಮೂರನೇ ಭಾಗ ಕೆಲ ತಿಂಗಳುಗಳ ನಂತರ ತೆರೆಗಪ್ಪಳಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.