ETV Bharat / entertainment

ವಿಶ್ವ ಚಾಂಪಿಯನ್ನರಿಗೆ​ ಯಶ್​​, ಸುದೀಪ್​, ರಶ್ಮಿಕಾ ಸೇರಿ ಕನ್ನಡ ತಾರೆಯರಿಂದ ಅಭಿನಂದನೆ - Sandalwood Stars Reactions - SANDALWOOD STARS REACTIONS

ಟಿ-20 ವಿಶ್ವಕಪ್​​​ ಪಂದ್ಯದಲ್ಲಿ ಭಾರತದ ಅಭೂತಪೂರ್ವ ಸಾಧನೆಗೆ ಸ್ಯಾಂಡಲ್‌ವುಡ್​ ಸ್ಟಾರ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

Yash, Rashmika, Sudeep
ಯಶ್​​, ರಶ್ಮಿಕಾ, ಸುದೀಪ್ (ETV Bharat)
author img

By ETV Bharat Karnataka Team

Published : Jun 30, 2024, 12:55 PM IST

ಟಿ-20 ವಿಶ್ವಕಪ್​​​ ಪಂದ್ಯದಲ್ಲಿ 11 ವರ್ಷಗಳ ಬಳಿಕ ಭಾರತ ಗೆಲುವಿನ ನಗೆ ಬೀರಿದೆ. ಕ್ರೀಡಾಭಿಮಾನಿಗಳು, ಜನಸಾಮಾನ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ತಿಳಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರೂ ಕೂಡ ಟೀಂ ಇಂಡಿಯಾ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಇತಿಹಾಸದಲ್ಲಿ ಕೆತ್ತಿದ ಗೆಲುವು- ಯಶ್: 'ಇತಿಹಾಸದಲ್ಲಿ ಕೆತ್ತಿದ ಗೆಲುವು. ಟಿ20 ವಿಶ್ವಕಪ್ 2024 ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಜೈ ಹಿಂದ್' ಎಂದು ನಟ ಯಶ್ ಬರೆದುಕೊಂಡಿದ್ದಾರೆ.

ಸುದೀಪ್​ ಟ್ವೀಟ್​: ದ್ರಾವಿಡ್, ಕೊಹ್ಲಿ, ಹಾರ್ದಿಕ್ ಪಾಂಡ್ಯ ಸೇರಿ ಕೆಲವರ ಹೆಸರು ಉಲ್ಲೇಖಿಸಿ ಅಭಿನಂದನೆ ತಿಳಿಸಿರುವ ನಟ ಕಿಚ್ಚ ಸುದೀಪ್, ಬಹಳ ಸಂತೋಷವಾಗಿದೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ: ನಟಿ ರಶ್ಮಿಕಾ ಮಂದಣ್ಣ ಭಾರತ ತಂಡದ ಫೋಟೋ ಹಂಚಿಕೊಂಡು, ಹಾರ್ಟ್, ಸ್ಟ್ರೆಂತ್ ಜೊತೆ ಕುಣಿದು ಕುಪ್ಪಳಿಸುತ್ತಿರುವ ಎಮೋಜಿ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.

'ಗೋಡೆ' ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು- ಶಿವಣ್ಣ: ಟೀಂ ಇಂಡಿಯಾದ ಫೋಟೋ ಹಂಚಿಕೊಂಡಿರುವ ಶಿವಣ್ಣ, ''ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, 'ಗೋಡೆ' ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು. ಅಭಿನಂದನೆಗಳು ಟೀಂ ಇಂಡಿಯಾ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, 'ಗೋಡೆ' ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು: ಶಿವ ರಾಜ್‌ಕುಮಾರ್‌ - Shiva Rajkumar

ರಿಷಬ್​ ಶೆಟ್ಟಿ ಟ್ವೀಟ್: ರೋಹಿತ್​, ವಿರಾಟ್​​​ ಎದ್ದು ಕಾಣುವ ಫೋಟೋ ಹಂಚಿಕೊಂಡ ಬ್ಲಾಕ್​ಬಸ್ಟರ್ ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿ, ''ಐತಿಹಾಸಿಕ ಗೆಲುವು. ಸುದೀರ್ಘ ವರ್ಷಗಳ ನಂತರ ನಮ್ಮ ಕ್ರಿಕೆಟಿಗರು ಟಿ20 ವಿಶ್ವಕಪ್ ಮನೆಗೆ ತಂದಿದ್ದಾರೆ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ರಾಧಿಕಾ ಕುಮಾರಸ್ವಾಮಿ ಅಭಿನಯದ 'ಅಜಾಗ್ರತ' ಚಿತ್ರ ನಿರ್ದೇಶಕನಿಗೆ ಅದ್ಧೂರಿ ಉಡುಗೊರೆ - Ajagratha Film Director Shashidhar

ವಸಿಷ್ಠ ಸಿಂಹ, ಗಣೇಶ್​​ ಪೋಸ್ಟ್: ನಟ ವಸಿಷ್ಠ ಸಿಂಹ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಭಾರತ ತಂಡದ ಫೋಟೋ ಹಂಚಿಕೊಂಡು, ಅಭಿನಂದನೆಗಳು ಟೀಂ ಇಂಡಿಯಾ ಎಂದಿದ್ದಾರೆ. ನಟ ಗಣೇಶ್​​ ಕೂಡ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ, ಚಾಂಪಿಯನ್ಸ್​, ಗ್ರೇಟ್​ ಟೀಂ ವರ್ಕ್, ಇಂಡಿಯಾ - ಇಂಡಿಯಾ - ಇಂಡಿಯಾ ಎಂದು ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.