ETV Bharat / entertainment

'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಜಪದಲ್ಲಿ ಪಂಚತಂತ್ರ ವಿಹಾನ್: ಜೂ.21ಕ್ಕೆ ಹಾಡು ಅನಾವರಣ - Ibbani Tabbida Ileyali - IBBANI TABBIDA ILEYALI

ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ 'ಓ ಅನಾಹಿತ' ಹಾಡು ಇದೇ ಜೂನ್ 21ರಂದು ಅನಾವರಣಗೊಳ್ಳಲಿದೆ.

Ibbani Tabbida Ileyali cast
'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ತಾರೆಯರು (ETV Bharat)
author img

By ETV Bharat Karnataka Team

Published : Jun 18, 2024, 12:10 PM IST

'ಇಬ್ಬನಿ ತಬ್ಬಿದ ಇಳೆಯಲಿ', ಸುಂದರ ಶೀರ್ಷಿಕೆಯಿಂದ ಸ್ಯಾಂಡಲ್​​ವುಡ್​ನಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ. 'ಪಂಚತಂತ್ರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವಿಹಾನ್ ಅಭಿನಯಿಸುತ್ತಿರೋ ಬಹುನಿರೀಕ್ಷಿತ ಚಿತ್ರ. ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಸುಮಧುರ ಪ್ರೇಮಕಾವ್ಯ. ಶೂಟಿಂಗ್ ಮುಗಿಸಿರೋ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಮೊದಲ ಇಂಪಾದ ಹಾಡು 'ಓ ಅನಾಹಿತ' ಇದೇ ಜೂನ್ 21ರಂದು ಬಿಡುಗಡೆಯಾಗಲಿದೆ.

Vihaan
ವಿಹಾನ್ ನಟನೆಯ' ಇಬ್ಬನಿ ತಬ್ಬಿದ ಇಳೆಯಲಿ' (ETV Bharat)

ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿರುವ ಆರು‌ ಹಾಡುಗಳು ಚಿತ್ರದಲ್ಲಿವೆ. ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಅವರೇ ಈ ಹಾಡನ್ನು ಬರೆದಿದ್ದು, ಮೂಲ ಸಂಯೋಜನೆಯನ್ನೂ ಮಾಡಿದ್ದಾರೆ. ಮಾನ್ಸೂನ್ ರಾಗ ಖ್ಯಾತಿಯ ದೀಕ್ಷಿತ್ ಈ‌ ಗೀತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಪಿಲ್ ಕಪಿಲನ್ ಈ ಹಾಡನ್ನು ಹಾಡಿದ್ದಾರೆ.

ಕಿರಿಕ್ ಪಾರ್ಟಿ ಹಾಗೂ ಅವನ್ನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ಚಂದ್ರಜಿತ್ ಬೆಳಿಯಪ್ಪ, ರಕ್ಷಿತ್ ಅವರ ಸೆವೆನ್ ಓಡ್ಸ್ ಬರಹಗಾರರ ತಂಡದ ಪ್ರಮುಖ ಸದಸ್ಯ ಹಾಗೂ ಕಥಾ ಸಂಗಮ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಈಗ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಹೊಸ ಸಿನಿಮಾಗೆ ಸಿಕ್ತು ಅಭಿನಯ ಚಕ್ರವರ್ತಿ ಸಾಥ್​ - Ramarasa Movie

ಪಂಚತಂತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ವಿಹಾನ್ ಈ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ಐದು ವರ್ಷಗಳ ನಂತರ ವಿಹಾನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಕಿರುತೆರೆಯ ಮೂಲಕ ಜನಮನಸೂರೆಗೊಂಡಿರುವ ಅಂಕಿತ ಅಮರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನ ಸೂಪರ್ ಹಿಟ್ 'ಗೀತಾಂಜಲಿ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್ ಬಹಳ ವರ್ಷಗಳ ನಂತರ ಅಭಿನಯಕ್ಕೆ ಮರಳಿ ಬಂದಿದ್ದಾರೆ. ಮಯೂರಿ ನಟರಾಜ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಅಪ್ಪನ ಕಥೆಗೆ ಮಗನೇ ಹೀರೋ - ನಿರ್ದೇಶಕ, ಆ ಚಿತ್ರ ಯಾವುದು! - Trailer and song launch event

ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ (ನ್ಯೂಯಾರ್ಕ್ ಫಿಲಂ ಅಕಾಡೆಮಿ ಹಾಗೂ ಆಸ್ಕರ್ ಗೋಲ್ಡ್ ರೈಸಿಂಗ್ ಪ್ರೋಗ್ರಾನ್​​​ನಿಂದ ತರಬೇತಿ ಪಡೆದಿದ್ದಾರೆ) ನಿರ್ವಹಿಸಿದ್ದಾರೆ. ರಕ್ಷಿತ್ ಕಾಪ್ ಅವರ ಸಂಕಲನವಿರುವ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕೆ ವಿಎಫ್​ಎಕ್ಸ್​​ ಸ್ಪರ್ಶವನ್ನು ಪಿನಾಕ ಸ್ಟುಡಿಯೋದಲ್ಲಿ ಕೊಡಲಾಗಿದೆ. ಶಶಿಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಸಿ.ಇ.ಓ ಆಗಿ ಶ್ರೀನೀಶ್ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.