ETV Bharat / entertainment

ರಕ್ಷಿತ್​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆ ದಿನಾಂಕ ನಾಳೆ ಅನೌನ್ಸ್ - Ibbani Tabbida Ileyali Release Date

author img

By ETV Bharat Karnataka Team

Published : Aug 15, 2024, 2:28 PM IST

ರಕ್ಷಿತ್​ ಶೆಟ್ಟಿ ನಿರ್ಮಾಣದ ಬಹುನಿರೀಕ್ಷಿತ ಚಿತ್ರ 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಸಿನಿಪ್ರಿಯರು ಎದುರು ನೋಡುತ್ತಿದ್ದರು. ಫೈನಲಿ ಸಿನಿಮಾದ ರಿಲೀಸ್​​ ಡೇಟ್ ಅನೌನ್ಸ್​ ಮಾಡುವ ಸಮಯ ಒದಗಿ ಬಂದಿದೆ. ಈ ಬಗ್ಗೆ ರಕ್ಷಿತ್​ ಶೆಟ್ಟಿ ಮಾಲೀಕತ್ವದ ಪರಂವಃ ಸಂಸ್ಥೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಂಡಿದೆ.

Ibbani Tabbida Ileyali poster
ಇಬ್ಬನಿ ತಬ್ಬಿದ ಇಳೆಯಲಿ ಪೋಸ್ಟರ್ (ETV Bharat, Rakshit shetty X Post)

ಕನ್ನಡ ಚಿತ್ರರಂಗದಲ್ಲೀಗ ಹೊಸ ಹುರುಪು. ಕಳೆದ ವಾರ ದುನಿಯಾ ವಿಜಯ್​ ನಟಿಸಿ, ನಿರ್ದೇಶಿಸಿದ್ದ ಭೀಮ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಮತ್ತೆರಡು ಬಹುನಿರೀಕ್ಷಿತ ಚಿತ್ರಗಳಾದ ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಕನ್ನಡದ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಅದರಂತೆ ಸ್ಯಾಂಡಲ್​​​ವುಡ್​ನ ಖ್ಯಾತ ನಟ ರಕ್ಷಿತ್​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಸಜ್ಜಾಗುತ್ತಿದೆ.

ಸದ್ಯ ಚಿತ್ರದಿಂದ ಅನಾವರಣಗೊಂಡಿರುವ ಕಂಟೆಂಟ್​ಗಳು ಇದೊಂದು ಉತ್ತಮ ಕಥೆಯುಳ್ಳ ಸಿನಿಮಾ ಎಂಬುದನ್ನು ಸೂಚಿಸಿದೆ. ಸಿನಿಮಾದ ಪೋಸ್ಟರ್ಸ್​, ಹಾಡುಗಳು ಬಿಡುಗಡೆ ಆಗಿ ಸಿನಿಪ್ರಿಯರ ಗಮನ ಸೆಳೆದಿದ್ದವು. ಅಷ್ಟಕ್ಕೂ ಇದು ರಕ್ಷಿತ್​ ಶೆಟ್ಟಿ ನಿರ್ಮಾಣದ ಚಿತ್ರವಲ್ಲವೇ. ಹಾಗಾಗಿ, ಪ್ರೇಕ್ಷಕರು ಸಿನಿಮಾ ಬಿಡುಗಡೆ ಯಾವಾಗ ಎಂದು ಪ್ರಶ್ನಿಸಿದ್ದರು. ಅಂತಿಮವಾಗಿ 'ಇಬ್ಬನಿ ತಬ್ಬಿದ ಇಳೆಯಲಿ' ರಿಲೀಸ್​​ ಡೇಟ್ ಅನೌನ್ಸ್​ ಮಾಡುವ ಸಮಯ ಒದಗಿ ಬಂದಿದೆ. ಈ ಬಗ್ಗೆ ರಕ್ಷಿತ್​ ಶೆಟ್ಟಿ ಮಾಲೀಕತ್ವದ ಪರಂವಃ ಸಂಸ್ಥೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ಗಳಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ' ಪೋಸ್ಟರ್ ಹಂಚಿಕೊಂಡ ರಕ್ಷಿತ್​​ ಶೆಟ್ಟಿ, ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಬಿಡುಗಡೆ ದಿನಾಂಕವನ್ನು ನಾಳೆಯ ದಿವ್ಯ ದಿನದಂದು ಪ್ರಕಟಿಸಲಾಗುತ್ತದೆ. ನಮ್ಮೊಂದಿಗಿರಿ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್​​ನಲ್ಲಿ ಸಿನಿಮಾದ ಶೀರ್ಷಿಕೆ ಜೊತೆಗೆ ಆಗಸ್ಟ್​ 16 ಎಂಬುದನ್ನು ದೊಡ್ಡದಾಗಿ ಬರೆಯಲಾಗಿದೆ. ಜೊತೆಗೆ ವರಮಹಾಲಕ್ಷ್ಮಿ ಹಬ್ಬದಂದು ಗ್ರ್ಯಾಂಡ್​ ಅನೌನ್ಸ್​ಮೆಂಟ್ ಆಗಲಿದೆ ಎಂಬುದನ್ನೂ ಬರೆಯಲಾಗಿದೆ. ​​

ಮತ್ತೊಂದೆಡೆ ಸಾಂಗ್​ ಪೋಸ್ಟರ್​ ಹಂಚಿಕೊಂಡ ಪರಂವಃ ಸ್ಟುಡಿಯೋಸ್​, ''ಪ್ರೀತಿಯ ಸಂಭ್ರಮಾಚಾರಣೆಗೆ ಇನ್ನು ಕಾಯಬೇಕಿಲ್ಲ. ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಆಗಸ್ಟ್​​ 16ರಂದು ಅನಾವರಣಗೊಳಿಸಲಿದ್ದೇವೆ'' ಎಮದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇದು ಡೊಳ್ಳೊಟ್ಟೆ ಪೊಲೀಸ್ ಕಾನ್ಸ್​​​​ಟೇಬಲ್​​​​ ಕಥೆ: 'ಲಾಫಿಂಗ್​ ಬುದ್ಧ'ನ ಮನರಂಜನೆಗೆ ರೆಡಿಯಾಗಿ - Laughing Buddha Trailer

ಇನ್ನೂ ನಿರ್ಮಾಪಕ ರಕ್ಷಿತ್​ ಶೆಟ್ಟಿ ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ. ನಟ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ 'ಎಲ್ಲರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೃಷ್ಣಂ ಪ್ರಣಯ ಸಖಿ' ಬಿಡುಗಡೆ: ಗಣಿ ಅಭಿಮಾನಿಗಳ ಸಂಭ್ರಮ ನೋಡಿ - Krishnam Pranaya Sakhi

'ಇಬ್ಬನಿ ತಬ್ಬಿದ ಇಳೆಯಲಿ' ಈ ಸಾಲಿನ ಕನ್ನಡದ ಬಹುನಿರೀಕ್ಷಿತ ಚಿತ್ರ. ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರವನ್ನು ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ಅವರು ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ. 'ಪಂಚತಂತ್ರ' ಖ್ಯಾತಿಯ ನಟ ವಿಹಾನ್ ಮತ್ತು ನಟಿ ​ಅಂಕಿತ ಅಮರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ಮಯೂರಿ ನಟರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗಾರ್ಜುನ್​​​ ಶರ್ಮಾ, ಗಗನ್​ ಬಡೇರಿಯಾ, ಚರಣ್​​​ ರಾಜ್​ ಸಂಗೀತ ವಿಭಾಗಗಳಲ್ಲಿ ಕೆಲಸ ಮಾಡಿದ್ದು, ಈಗಾಗಲೇ ಚಿತ್ರದ ಸುಮಧುರ ಹಾಡುಗಳು ಬಿಡುಗಡೆ ಆಗಿವೆ. ನಾಳೆ ಸಿನಿಮಾ ಎಂದು ಬಿಡುಗಡೆ ಆಗಲಿದೆ ಎಂಬುದು ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.