ಹೈದರಾಬಾದ್: ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಫೈಟರ್' ಸಿನಿಮಾ ಬಿಡುಗಡೆಯಾಗಿ 12ನೇ ದಿನಕ್ಕೆ ದೇಶಿಯಾ ಬಾಕ್ಸ್ ಆಫೀಸ್ನಲ್ಲಿ ಗಳಿಕೆಯ ಪ್ರಮಾಣವನ್ನು ಕಡಿಮೆ ಆಗಿದೆ. ಕಳೆದ ವಾರದಿಂದ ದೇಶಿಯ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡದ ಚಿತ್ರ ಎರಡನೇ ವಾರ ನೀರಸ ಪ್ರದರ್ಶನ ತೋರುತ್ತಿದೆ. ಆದಾಗ್ಯೂ ಚಿತ್ರವೂ ವಾರಾಂತ್ಯದಲ್ಲಿ ಕೊಂಚ ಚೇತರಿಸಿಕೊಂಡಿತು ಎನ್ನುವಾಗಲೇ ಮತ್ತೆ ಸಿಂಗಲ್ ಡಿಜಿಟ್ ಗಳಿಕೆಯತ್ತ ಮುಖ ಮಾಡಿದೆ.
ನಟ ಹೃತಿಕ್ ರೋಶನ್ ಮತ್ತು ದೀಪಿಕಾ ಪಡುಕೋಣೆ ಅಭಿಯನದ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ 146.5 ಕೋಟಿ ಗಳಿಕೆ ಮಾಡಿತ್ತು. 9ನೇ ದಿನ 5.75 ಕೋಟಿ, 10ನೇ ದಿನ 10.5 ಮತ್ತು 11ನೇ ದಿನ 12.5 ಕೋಟಿ ಸಂಪಾದಿಸಿದೆ. ಎರಡನೇ ಸೋಮವಾರ ಚಿತ್ರ ಎಲ್ಲಾ ಭಾಷೆಗಳಲ್ಲಿ 3.35 ಕೋಟಿ ನಿವ್ವಳ ಸಂಪಾದನೆ ಮಾಡಿದೆ. ಇದುವರೆಗೂ ಒಟ್ಟಾರೆಯಾಗಿ 178.60 ಕೋಟಿ ಸಂಪಾದಿಸಿದ್ದು, ಈ ವಾರ ಮುಗಿಯುವುದರೊಳಗೆ 200 ಕೋಟಿ ಗಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಜನವರಿ 25ಕ್ಕೆ ಬಿಡುಗಡೆಯಾಗಿತ್ತು. ಅಭಿಮಾನಿಗಳ ವರ್ಗದಿಂದ ಚಿತ್ರದ ಕುರಿತು ಉತ್ತಮ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ವಯಾಕಾಮ್ 18 ಸ್ಟುಡಿಯೋ ಜೊತೆಗೆ ಮಾರ್ಫ್ಲಿಕ್ಸ್ ಪಿಕ್ಚರ್ ಚಿತ್ರವನ್ನು ನಿರ್ಮಾಣ ಮಾಡಿತ್ತು.
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಹೊರತಾಗಿ ಚಿತ್ರದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ಕಂಡಿದ್ದರು. ಪ್ಯಾಟಿ ಎಂಬ ಹೆಸರಿನ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಪಾತ್ರವನ್ನು ಹೃತಿಕ್ ನಿರ್ವಹಣೆ ಮಾಡಿದ್ದರು. ಮಿನಿ ಅಥವಾ ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋಡ್ ಆಗಿ ದೀಪಿಕಾ ಪಡುಕೋಣೆ ಮಿಂಚಿದ್ದರು. ಅನಿಲ್ ಕಪೂರ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಅಥವಾ ರಾಕಿಯಾಗಿ ಕಂಡಿದ್ದರು. ಚಿತ್ರ ಭಾರತೀಯ ಸೇನೆಯ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಕುರಿತು ಕಥೆಯನ್ನು ಹೊಂದಿದೆ.
ಈ ಚಿತ್ರದ ಮೂಲಕ ಮೊದಲ ಬಾರಿಗೆ ನಟಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಒಟ್ಟಿಗೆ ನಟಿಸಿದ್ದರು. ಹೃತಿಕ್ ಮತ್ತು ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೋಡಿಯಲ್ಲಿ ಮೂಡಿ ಬಂದ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಇಬ್ಬರೂ 'ಬ್ಯಾಂಗ್ ಬ್ಯಾಂಗ್' ಮತ್ತು 'ವಾರ್' ಚಿತ್ರದಲ್ಲಿ ಕೆಲಸ ಮಾಡಿದ್ದರು. ನಟಿ ದೀಪಿಕಾ ಸಿದ್ದಾರ್ಥ್ ಜೊತೆ 'ಬಚನಾ ಎ ಹಸೀನಾ' ಮತ್ತು 'ಪಠಾಣ್'ನಲ್ಲಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಮೊದಲ ದಿನ 22 ಕೊಟಿ ರೂ. ಕಲೆಕ್ಷನ್ ಮಾಡಿದ 'ಫೈಟರ್'