ETV Bharat / entertainment

ತುಮಕೂರು: ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ ಕಿಚ್ಚ ಸುದೀಪ್ - Kiccha Sudeep Rejected Doctorate

author img

By ETV Bharat Karnataka Team

Published : Aug 6, 2024, 10:54 AM IST

ನಟ ಕಿಚ್ಚ ಸುದೀಪ್ ​ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ್ದಾರೆ.

ಗೌರವ ಡಾಕ್ಟರೇಟ್ ಪದವಿ ತಿರಸ್ಕರಿಸಿದ ಕಿಚ್ಚ ಸುದೀಪ್
ಗೌರವ ಡಾಕ್ಟರೇಟ್ ಪದವಿ ತಿರಸ್ಕರಿಸಿದ ಕಿಚ್ಚ ಸುದೀಪ್ (ETV Bharat)
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾಹಿತಿ (ETV Bharat)

ತುಮಕೂರು: ಈ ಬಾರಿಯ ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ನಟ ಕಿಚ್ಚ ಸುದೀಪ್​ಗೆ ಡಾಕ್ಟರೇಟ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈ ಗೌರವವನ್ನು ಸುದೀಪ್​ ಅವರು ನಿರಾಕರಿಸಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, "ವಿವಿಧ ಹಂತದಲ್ಲಿ ಅವರನ್ನು ಸಂಪರ್ಕಿಸಲು ಯತ್ನಿಸಲಾಗಿತ್ತು. ಅಂತಿಮವಾಗಿ ಅವರ ಆಪ್ತ ಸಹಾಯಕರ ಮೂಲಕ ಅವರನ್ನು ಪ್ರಸ್ತಾಪ ಮಾಡಲಾಯಿತು. ಡಾಕ್ಟರೇಟ್ ಪದವಿ ಪಡೆಯುವ ನಿರ್ಧಾರ ತಿಳಿಸಲು ಎರಡು ದಿನಗಳ ಕಾಲಾವಕಾಶ ಕೇಳಿದ್ದರು. ಆ ನಂತರ ಅವರು ತಮ್ಮ ಆಪ್ತ ಸಹಾಯಕನ ಮೂಲಕವೇ ನನಗಿಂತ ಅನೇಕ ಮಂದಿ ಹೆಚ್ಚು ಸಾಧನೆ ಮಾಡಿದವರು ಇದ್ದಾರೆ. ಅವರನ್ನು ಪರಿಗಣಿಸಿ, ಅಲ್ಲದೇ ತುಮಕೂರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ".

"ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮೂಲಕವೂ ಕೂಡ ಸುದೀಪ್ ಅವರನ್ನು ಸಂಪರ್ಕಿಸಿದಾಗಲೂ ಸುದೀಪ್​ ಅವರು ಡಾಕ್ಟರೇಟ್ ಪದವಿ ಪಡೆಯಲು ನಿರಾಕರಿಸಿದ್ದಾರೆ ಎಂದು ವಿವರಿಸಿದರು. ಸುದೀಪ್​ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಡಾಕ್ಟರ್ ಪದವಿ ನೀಡಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿತ್ತು" ಎಂದು ಕುಲಪತಿ ಹೇಳಿದರು.

ಇದನ್ನೂ ಓದಿ: 18 ವರ್ಷಗಳ ಸಿನಿಪಯಣ, ಕಷ್ಟ ಮೆಲುಕು ಹಾಕಿದ ಗೋಲ್ಡನ್ ಸ್ಟಾರ್ - ದುನಿಯಾ ವಿಜಯ್ - Duniya Vijay Meet Ganesh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.