ETV Bharat / entertainment

'ಬ್ಯಾಕ್ ಬೆಂಚರ್ಸ್' ಚಿತ್ರದ ಹೋಳಿ ಸಾಂಗ್ ನೋಡಿ - Back Benchers Holi Song - BACK BENCHERS HOLI SONG

'ಬ್ಯಾಕ್ ಬೆಂಚರ್ಸ್' ಸಿನಿಮಾದ ಹೋಳಿ ಹಾಡು ಅನಾವರಣಗೊಂಡಿದೆ.

holi song from back benchers
'ಬ್ಯಾಕ್ ಬೆಂಚರ್ಸ್' ಸಿನಿಮಾದ ಹೋಳಿ ಹಾಡು
author img

By ETV Bharat Karnataka Team

Published : Mar 26, 2024, 2:02 PM IST

ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಹೊಸಬರ ಆಗಮನ ಮುಂದುವರೆದಿದೆ. ಈ ಪೈಕಿ ಕೆಲವರನ್ನಷ್ಟೇ ಚಿತ್ರರಂಗ ಕೈ ಹಿಡಿಯುತ್ತದೆ. ಇಲ್ಲಿ ಪ್ರತಿಭೆ, ಶ್ರಮ, ಏಕಾಗ್ರತೆಯ ಜೊತೆಗೆ ಅದೃಷ್ಟವೂ ಬೇಕು. ಹೀಗೆ ಹೊಸಬರ ಶ್ರಮ ಅಡಗಿರುವ ಹೊಸ ಚಿತ್ರವೇ 'ಬ್ಯಾಕ್ ಬೆಂಚರ್ಸ್'. ಬಣ್ಣಗಳ ಹಬ್ಬದ ಸಂದರ್ಭದಲ್ಲಿ ಬಣ್ಣದ ಹಾಡೊಂದು ಬಿಡುಗಡೆಯಾಗಿದ್ದು, ಸಖತ್​ ಸದ್ದು ಮಾಡುತ್ತಿದೆ.

  • " class="align-text-top noRightClick twitterSection" data="">

ಬಿ.ಆರ್.ರಾಜಶೇಖರ್ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ಯುವ ನಟ ರಂಜನ್ ನರಸಿಂಹಮೂರ್ತಿ, ಜಿತಿನ್ ಆರ್ಯನ್, ಆಕಾಶ್, ಮಾನ್ಯ ಗೌಡ, ಕುಂಕುಮ್, ಅನುಷಾ ಸುರೇಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಹೋಳಿ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿನಿಮಾದಿಂದ ಸುಮಧುರ ಹಾಡೊಂದು ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದೆ. ಹೃದಯಶಿವ ಬರೆದಿರುವ ಈ ಹಾಡು ಭಾರತದ ಹೆಸರಾಂತ ಗಾಯಕ ಶಂಕರ್ ಮಹದೇವನ್ ಕಂಠಸಿರಿಯಲ್ಲಿ ಮೂಡಿಬಂದಿದೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ.

holi song from back benchers
'ಬ್ಯಾಕ್ ಬೆಂಚರ್ಸ್' ಸಿನಿಮಾದ ಹೋಳಿ ಹಾಡು

ಇದನ್ನೂ ಓದಿ: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಂಗನಾ ಹಳೇ ವಿಡಿಯೋ ವೈರಲ್‌ - Kangana Ranaut

ಬ್ಯಾಕ್ ಬೆಂಚರ್ಸ್ ನಮ್ಮ ಕಾಲೇಜು ದಿನಗಳನ್ನು ನೆನಪಿಸುತ್ತದೆ. ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಅಭಿನಯಿಸಿದ್ದಾರೆ.‌ ಆಡಿಷನ್ ಮೂಲಕ ಆಯ್ಕೆಯಾದ ಈ ಕಲಾವಿದರಿಗೆ ಸುಮಾರು ಒಂದು ವರ್ಷಗಳ ಕಾಲ ವರ್ಕ್‌ಶಾಪ್ ನಡೆಸಿ ಆ ನಂತರ ಚಿತ್ರೀಕರಣ ನಡೆಸಲಾಗಿದೆ.

holi song from back benchers
'ಬ್ಯಾಕ್ ಬೆಂಚರ್ಸ್' ಸಿನಿಮಾದ ಹೋಳಿ ಹಾಡು

ಇದನ್ನೂ ಓದಿ: ವಸಿಷ್ಠ ಸಿಂಹ ನಟನೆಯ 'ವಿಐಪಿ' ಸಿನಿಮಾಗೆ ಸಿಕ್ತು ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ - VIP

ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳಿಕರ್ ಕೂಡ ಚಿತ್ರದಲ್ಲಿದ್ದಾರೆ. ಮನೊಹರ್ ಜೋಶಿ ಛಾಯಾಗ್ರಹಣವಿದೆ. ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯಾ ನಿರ್ಮಿಸಿರುವ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.