ETV Bharat / entertainment

ಅನೂಪ್ ರೇವಣ್ಣ ನಟನೆಯ 'ಹೈಡ್ ಅಂಡ್ ಸೀಕ್‌' ಟ್ರೇಲರ್​ ಅನಾವರಣಗೊಳಿಸಿದ ರಾಮಲಿಂಗಾರೆಡ್ಡಿ - ಅನೂಪ್ ರೇವಣ್ಣ

'ಹೈಡ್ ಅಂಡ್ ಸೀಕ್‌' ಚಿತ್ರದ ಟ್ರೇಲರ್​ ಅನ್ನು ಸಚಿವ ರಾಮಲಿಂಗಾರೆಡ್ಡಿ ಅನಾವರಣಗೊಳಿಸಿದ್ದಾರೆ.

'Hide and Seek'
'ಹೈಡ್ ಅಂಡ್ ಸೀಕ್‌' ಟ್ರೇಲರ್​ ರಿಲಿಸ್​ ಈವೆಂಟ್
author img

By ETV Bharat Karnataka Team

Published : Feb 28, 2024, 12:57 PM IST

ಕನ್ನಡ ಚಿತ್ರರಂಗದಲ್ಲಿ ಲಕ್ಷ್ಮಣ ಹಾಗೂ ಪಂಟ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ಅನೂಪ್ ರೇವಣ್ಣ. ಬಹಳ ದಿನಗಳ ಬಳಿಕ ಕ್ಯಾಚೀ ಟೈಟಲ್ ಹೊಂದಿರುವ 'ಹೈಡ್ ಅಂಡ್ ಸೀಕ್' ಎಂಬ ಚಿತ್ರದೊಂದಿಗೆ ಪ್ರೇಕ್ಷಕರೆದುರು ಬರಲು ರೆಡಿಯಾಗಿದ್ದಾರೆ. ಅನೂಪ್ ರೇವಣ್ಣ ನಟಿಸುತ್ತಿರುವ ನಾಲ್ಕನೇ ಚಿತ್ರ ಇದಾಗಿದ್ದು, ಪುನೀತ್ ನಾಗರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರೋ ಹೈಡ್ ಅಂಡ್ ಸೀಕ್ ಚಿತ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರ ಸಾಥ್ ಸಿಕ್ಕಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್​​ ಅನ್ನು ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ವಿ.ಪ ಸದಸ್ಯ ಎಸ್. ವಿಶ್ವನಾಥ್ ಹಾಗೂ ರೇವಣ್ಣ ಅವರ ಅನೇಕ ಸ್ನೇಹಿತರು ಹಾಜರಿದ್ದು, ಶುಭ ಹಾರೈಸಿದರು.

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರೇವಣ್ಣ ಅವರ ಮಗ ನಾಯಕನಾಗಿ ನಟಿಸಿರುವ ಈ ಚಿತ್ರ ಯಶಸ್ವಿಯಾಗಲಿ. ಇದು ಅವರ ನಾಲ್ಕನೇ ಚಿತ್ರ. ಟ್ರೇಲರ್​​​ನಲ್ಲಿ ಅವರ ಅಭಿನಯ ಬಹಳ ಚೆನ್ನಾಗಿದೆ. ಚಿತ್ರವೂ ಸಹ ಚೆನ್ನಾಗಿರುತ್ತದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯ ಹೆಸರು ಸಿಗಲಿ ಎಂದು ಶುಭಹಾರೈಸಿದರು.

'Hide and Seek'
'ಹೈಡ್ ಅಂಡ್ ಸೀಕ್‌' ಟ್ರೇಲರ್​ ರಿಲಿಸ್​ ಈವೆಂಟ್

‌‌ಎಸ್. ವಿಶ್ವನಾಥ್ ಮಾತನಾಡಿ, ಈ ಚಿತ್ರದಲ್ಲಿ ನಮ್ಮ ಹುಡುಗನೇ ಹೀರೋ ಆಗಿದ್ದಾನೆ. ರಾಜ್‌ಕುಮಾರ್ ಅವರ ಮೊಮ್ಮಗಳು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಎಲ್ಲರ ಮನಗೆಲ್ಲಲಿ ಎಂದು ಶುಭ ಕೋರಿದರು. ಸೀನಿಯರ್ ಪ್ರೊಫೆಸರ್ ಡಿ.ಕೆ ರವಿ ಮಾತನಾಡಿ, ಟ್ರೇಲರ್​​ ಬಹಳ ಇಂಪ್ರೆಸಿವ್ ಆಗಿದೆ. ಅನೂಪ್ ಒಳ್ಳೇ ಹುಡುಗ. ಆತನಿಗೆ ಉತ್ತಮ ಭವಿಷ್ಯವಿದೆ. ನಾಯಕಿ ರಾಜ್‌ಕುಮಾರ್ ಅವರ ಮೊಮ್ಮಗಳು. ಎಲ್ಲರೂ ಚಿತ್ರ ನೋಡಿ ಹರಸಿ ಎಂದು ತಿಳಿಸಿದರು.

ನಂತರ ಮಾಜಿ ಸಚಿವ ರೇವಣ್ಣ ಮಾತನಾಡಿ, ಚಿತ್ರರಂಗ ಇಂದು ಚಾಲೆಂಜಿಂಗ್ ಏರಿಯಾ ಆಗಿದೆ. ಕನ್ನಡ ಚಿತ್ರರಂಗಕ್ಕೆ ಹಿಂದೆ ಸೀಮಿತ ಮಾರುಕಟ್ಟೆ ಇತ್ತು. ಈಗದು ವಿಸ್ತಾರವಾಗಿದೆ. ನಾನು ಈ ಚಿತ್ರದ ಶೂಟಿಂಗ್ ಟೈಮ್‌ನಲ್ಲಿ ಹೋಗಿದ್ದೆ. ಎಲ್ಲರೂ ಕುಟುಂಬದ ರೀತಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ನಟ ಹಾಗೂ ಧನ್ಯಾ ಸಹೋದರ ಧೀರೆನ್ ರಾಮ್ ಕುಮಾರ್ ಮಾತನಾಡಿ, ಹೈಡ್ ಅಂಡ್ ಸೀಕ್ ಮಾ.15ಕ್ಕೆ ತೆರೆಕಾಣುತ್ತಿದೆ. ನನ್ನ ತಂಗಿ ಧನ್ಯಾ ಹಾಗೂ ಅನೂಪ್ ಅವರ ಈ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

ನಾಯಕಿ ಧನ್ಯಾ ರಾಮಕುಮಾರ್ ಮಾತನಾಡಿ, ನನ್ನ ಪಾತ್ರದ ಹೆಸರು ಹಾಸಿನಿ. ಒಂದೊಳ್ಳೆ ಕುಟುಂಬದಿಂದ ಬಂದ ಹುಡುಗಿ. ಅಂಥ ಹುಡುಗಿ ಕಿಡ್ನ್ಯಾಪ್ ಆದಾಗ ಆಕೆ ಎದುರಿಸಿದ ಪರಿಸ್ಥಿತಿ ಎಂಥದ್ದು? ಆ ಕಿಡ್ನಾಪರ್ಸ್ ಉದ್ದೇಶ, ಹಿನ್ನೆಲೆ ಏನು? ಅನ್ನೋದರ ಮೇಲೆ ಈ ಸಿನಿಮಾ ಸಾಗುತ್ತದೆ ಎಂದು ತಿಳಿಸಿದರು.

ಈ ಚಿತ್ರದಲ್ಲಿ ಅನೂಪ್ ರೇವಣ್ಣ ಅವರೋರ್ವ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದಾರೆ. ಅನೂಪ್​ಗೆ ಧನ್ಯಾ ರಾಮ್‌ಕುಮಾರ್ ಜೋಡಿಯಾಗಿದ್ದಾರೆ‌. ಇವರ ಜೊತೆಗೆ ನಟ ಬಲ ರಾಜವಾಡಿ, ಸೂರಜ್, ಜಗ್ಗಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ಕರಟಕ ದಮನಕ' ಚಿತ್ರದ ಕ್ಯಾರೆಕ್ಟರ್ ಟೀಸರ್ ರಿಲೀಸ್​: ಕಿಚ್ಚ ಸುದೀಪ್​ ಮೆಚ್ಚುಗೆ

ನಿರ್ದೇಶಕ ಪುನೀತ್ ನಾಗರಾಜು ಮಾತನಾಡಿ, ಕಿಡ್ನಾಪಿಂಗ್ ಕೂಡ ಹೇಗೆ ಒಂದು ಸಂಸ್ಥೆ ಮೂಲಕ ನಡೆಯುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಬೆಂಗಳೂರು, ಮಾಗಡಿ, ಚಿಕ್ಕಮಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಹೈಡ್ ಅಂಡ್ ಸೀಕ್ ಚಿತ್ರದಲ್ಲಿ ನಾಯಕನೇ ಕಿಡ್ನಾಪರ್. ಹೆಚ್ಚು ಮಾತನಾಡದ, ಯಾವುದನ್ನೂ ಎಕ್ಸ್​​ಪ್ರೆಸ್​​ ಮಾಡದ ವ್ಯಕ್ತಿಯ ಪಾತ್ರ ಅನೂಪ್ ರೇವಣ್ಣ ಅವರದ್ದು. ಅಲ್ಲದೇ ನಾಯಕಿ ಓರ್ವ ಬ್ಯುಸಿನೆಸ್ ಮ್ಯಾನ್​ನ ಮಗಳಾಗಿರುತ್ತಾಳೆ ಎಂದು ತಿಳಿಸಿದರು‌.

  • " class="align-text-top noRightClick twitterSection" data="">

ಇದನ್ನೂ ಓದಿ: ಬರಗೂರು ರಾಮಚಂದ್ರಪ್ಪರ 'ಚಿಣ್ಣರ ಚಂದ್ರ' ಸಿನಿಮಾಗೆ ಮತ್ತೊಂದು ಪ್ರಶಸ್ತಿ

ಈ ಚಿತ್ರಕ್ಕೆ ರಿಜೋ ಪಿ. ಜಾನ್ ಅವರ ಛಾಯಾಗ್ರಾಹಣ, ಸ್ಯಾಂಡಿ ಅದಾನ್ಕಿ ಅವರ ಸಂಗೀತ ಸಂಯೋಜನೆ, ಮಧು ತುಂಬಕೆರೆ ಅವರ ಸಂಕಲನವಿದೆ. ಚಿತ್ರದ ವಿತರಣೆಯ ಹೊಣೆಯನ್ನು ಕಮರ್ ಹೊತ್ತುಕೊಂಡಿದ್ದಾರೆ. ಸುನೇರಿ ಆರ್ಟ್ ಕ್ರಿಯೇಶನ್ಸ್ ಮೂಲಕ ಪುನೀತ್ ನಾಗರಾಜು ಹಾಗೂ ವಸಂತ್‌ರಾವ್ ಎಂ. ಕುಲಕರ್ಣಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೇಲರ್​ನಿಂದ ಗಮನ ಸೆಳೆಯುತ್ತಿರೋ ಹೈಡ್ ಅಂಡ್ ಸೀಕ್ ಚಿತ್ರ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.