ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಪ್ರೀತಿಸಲ್ಪಟ್ಟ ನಟ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಮೂರು ವರ್ಷಗಳಾಗಿವೆ. ಆದ್ರೆ ಅವರ ನೆನಪು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ನಟ, ನಿರ್ಮಾಪಕ, ಹಿನ್ನೆಲೆ ಗಾಯಕ, ಸಮಾಜಸೇವಕನಾಗಿ ಗುರುತಿಸಿಕೊಂಡ ಅಭಿಮಾನಿಗಳ ಅಪ್ಪು ಕುರಿತ ಕೆಲ ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.
ಪುನೀತ್ ರಾಜ್‌ಕುಮಾರ್ ಅವರ ಮೂಲ ಹೆಸರು ಲೋಹಿತ್.
1976ರಲ್ಲಿ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಬಾಲಕಲಾವಿದರಾಗಿ ನಟನೆ ಪ್ರಾರಂಭ.
2002ರ 'ಅಪ್ಪು' ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶ.
2021ರಲ್ಲಿ ಬಿಡುಗಡೆಯಾದ 'ಯುವರತ್ನ' ನಟ ಬದುಕಿದ್ದಾಗ ಬಿಡುಗಡೆಯಾದ ಕೊನೆಯ ಚಿತ್ರ.
ನಾಯಕ ನಟನಾಗಿ ಸ್ಯಾಂಡಲ್‌ವುಡ್ ಪ್ರವೇಶಿಸುವ ಮುನ್ನ 16ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಾಸ್ಟರ್ ಲೋಹಿತ್ ಆಗಿ ಕೆಲಸ.
1985ರ 'ಬೆಟ್ಟದ ಹೂವು' ಚಿತ್ರಕ್ಕಾಗಿ ಪ್ರತಿಷ್ಠಿತ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಪ್ರಶಸ್ತಿ.
ಪುನೀತ್ ಅವರ ಕಸಿನ್ ಪೂರ್ಣಿಮಾ ರಾಜ್‌ಕುಮಾರ್ ಮತ್ತು ನಟ ಹೊನ್ನಾವಳ್ಳಿ ಅವರು ಅಪ್ಪುಗೆ ನಟನೆ ಕಲಿಸಿಕೊಟ್ಟರು. ಆದ್ರೆ ಫಾರ್ಮಲ್ ಎಜುಕೇಶಷನ್ ಪಡೆಯಲು ಸಾಧ್ಯವಾಗಲಿಲ್ಲ.
ಪವರ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಪುನೀತ್ ಅವರ ಮೆಚ್ಚಿನ ಹಾಡು ಮಿಥುನ್ ಚಕ್ರವರ್ತಿ ಅವರ 'ಐ ಆ್ಯಮ್ ಎ ಡಿಸ್ಕೋ ಡ್ಯಾನ್ಸರ್' ಆಗಿತ್ತು.
ಪುನೀತ್ ಮತ್ತು ಅಶ್ವಿನಿ ಪರಸ್ಪರರ ಮ್ಯುಚುವಲ್ ಫ್ರೆಂಡ್ ಮೂಲಕ ಪರಿಚಯವಾದರು. ಸ್ನೇಹ ಪ್ರೀತಿಗೆ ತಿರುಗಿ 1999ರಲ್ಲಿ ಹಸೆಮಣೆಯೇರಿದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಕಿರುತೆರೆ ಕಾರ್ಯಕ್ರಮದ ಮೂಲಕವೂ ಹೆಚ್ಚು ಜನಪ್ರಿಯರಾದರು. ಕನ್ನಡದ ಕೋಟ್ಯಧಿಪತಿ ಪ್ರಸಿದ್ಧವಾಗಿದೆ. ಯುವರತ್ನ ನಟನ ವೃತ್ತಿಜೀವನದಲ್ಲಿ ಹೆಚ್ಚು ಯಶ ಕಂಡ ಸಿನಿಮಾ.
ಕನ್ನಡದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೇ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಯರಲ್ಲಿ ಒಬ್ಬರಾಗಿದ್ದರು. ವರದಿಗಳ ಪ್ರಕಾರ, ಪ್ರತೀ ಚಿತ್ರಕ್ಕೆ ಸುಮಾರು 2-3 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆದುಕೊಳ್ಳುತ್ತಿದ್ದರು. ಅಲ್ಲದೇ ಸಿನಿಮಾದ ಲಾಭದಲ್ಲೂ ಅವರಿಗೆ ಪಾಲಿತ್ತು.
ತಾಯಿ ಪಾರ್ವತಮ್ಮ ರಾಜ್‌ಕುಮಾರ್ ನಟನ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ತಮ್ಮ ಮಗನಿಗಾಗಿ 'ಜಾಕಿ', 'ಅಪ್ಪು', 'ಅಣ್ಣಾ ಬಾಂಡ್' ಮತ್ತು 'ಅರಸು' ಚಿತ್ರಗಳನ್ನು ಆರಿಸಿಕೊಂಡರು.
ಪುನೀತ್ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿಯೂ ಗುರುತಿಸಿಕೊಂಡಿದ್ದರು. ಪತ್ನಿ ಅಶ್ವಿನಿ ಮೇಲೆ ವಿಶೇಷ ಒಲವಿತ್ತು. ಅಂತಾರಾಷ್ಟ್ರೀಯ ಮಹಿಳಾ ದಿನದಂದು 4 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಪುನೀತ್ ಅವರ ಸಿನಿಮಾಗಳು ಬೇರೆ ಬೇರೆ ಪ್ರಾದೇಶಿಕ ಭಾಷೆಗಳಲ್ಲಿಯೂ ರಿಮೇಕ್ ಆಗಿವೆ. ಅವರ 'ಅಪ್ಪು' ಚಿತ್ರ ತೆಲುಗಿನಲ್ಲಿ 'ಈಡಿಯಟ್' ಆಗಿ ರಿಮೇಕ್ ಆಗಿತ್ತು. 'ಅಭಿ' ತೆಲುಗಿನಲ್ಲಿ 'ಅಭಿಮನ್ಯು' ಆಗಿ ರಿಮೇಕ್ ಆಗಿತ್ತು. ಹೀಗೆ ಅವರ ಹಲವು ಚಿತ್ರಗಳು ಒಡಿಯಾ ಮತ್ತು ಇತರೆ ಭಾಷೆಗಳಲ್ಲಿ ರೀಮೇಕ್ ಆಗಿವೆ.
ನಟನ ಆದಾಯದಲ್ಲಿ ಅರ್ಧದಷ್ಟು ಸದ್ದಿಲ್ಲದೇ ನೂರಾರು ಪುಣ್ಯಕಾರ್ಯಗಳಿಗೆ ಬಳಕೆಯಾಗಿವೆ. ವರದಿಗಳ ಪ್ರಕಾರ, ಅವರು 26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು, 15 ಉಚಿತ ಶಾಲೆಗಳು ಮತ್ತು 19 ಗೋಶಾಲೆಗಳಿಗೆ ಬೆಂಬಲವಾಗಿದ್ದರು. ಅಲ್ಲದೇ, ನಿಧನದ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಇದು ಅನೇಕರಿಗೆ ಸ್ಫೂರ್ತಿಯಾಯಿತು.
ಇದನ್ನೂ ಓದಿ: ನನಸಾಯ್ತು ಜಗ್ಗೇಶ್ 40 ವರ್ಷಗಳ ಹಿಂದಿನ ಕನಸು: ಸಿನಿಮಾ ಇಂಡಸ್ಟ್ರಿ ಸೇವೆಗಾಗಿ 'ಜಗ್ಗೇಶ್ ಸ್ಟುಡಿಯೋಸ್'