ದೇಶಾದ್ಯಂತ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯಕ್ಕಾಗಿ ನಡೆದ ಬಲಿದಾನಗಳನ್ನು ಸ್ಮರಿಸುವ ಕಾರ್ಯ ನಡೆದಿದೆ. ಶಾಲಾ, ಕಾಲೇಜು, ವಿವಿಧ ಸಂಸ್ಥೆಗಳಲ್ಲಿ ಧ್ವಜಾರೋಹಣ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಸಿನಿಮಾ ಸೆಲೆಬ್ರಿಟಿಗಳೂ ಸಹ ಕನ್ನಡಿಗರು ಸೇರಿದಂತೆ ಭಾರತೀಯರಿಗೆ ತಮ್ಮ ಶುಭಾಶಯ ಕೋರಿದ್ದಾರೆ.
“ನನ್ನ ದೇಶ - ನನ್ನ ಹೆಮ್ಮೆ
— Kichcha Sudeepa (@KicchaSudeep) August 15, 2024
ನನ್ನ ದೇಶ -ನನ್ನ
ಸ್ವಾಭಿಮಾನ "
ಹೋರಾಟಗಳು ನೂರೆಂಟು
ಭಾರತದ ಸ್ವಾತಂತ್ರ್ಯ ಕ್ಕೆ ವರುಷವು ಎಪ್ಪತ್ತೆಂಟು...
ಸಮಸ್ತ ಭಾರತೀಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
jai hind
happy august 15th,
happy independence day to every indian across the world.🙏🏼❤️ pic.twitter.com/FisDUHkLpd
ಕಿಚ್ಚ ಸುದೀಪ್ ಪೋಸ್ಟ್: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಖ್ಯಾತಿಯ ನಟ ಸುದೀಪ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾರತೀಯ ಧ್ವಜದ ನೋಟವನ್ನು ಹಂಚಿಕೊಂಡಿದ್ದು, 'ನನ್ನ ದೇಶ-ನನ್ನ ಹೆಮ್ಮೆ, ನನ್ನ ದೇಶ-ನನ್ನ ಸ್ವಾಭಿಮಾನ'. ಹೋರಾಟಗಳು ನೂರೆಂಟು, ಭಾರತ ಸ್ವಾತಂತ್ರ್ಯಕ್ಕೆ ವರುಷವು ಎಪ್ಪತ್ತೆಂಟು. ಸಮಸ್ತ ಭಾರತೀಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ. ಕನ್ನಡ ಕ್ಯಾಪ್ಷನ್ ಜೊತೆಗೆ ಇಂಗ್ಲಿಷ್ನಲ್ಲಿ ಹ್ಯಾಪಿ ಆಗಸ್ಟ್ 15. ಜಗತ್ತಿನಾದ್ಯಂತ ಇರುವ ಪ್ರತೀ ಭಾರತೀಯರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಸಹ ಬರೆದುಕೊಂಡಿದ್ದಾರೆ.
ಎಲ್ಲರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು✨
— Rakshit Shetty (@rakshitshetty) August 15, 2024
Reminiscing every brave heart that dreamt of freedom and strived for that reality.. Happy Independence day everyone 🤗
ನಟ ರಕ್ಷಿತ್ ಶೆಟ್ಟಿ ಪೋಸ್ಟ್: ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ಜನಪ್ರಿಯ ನಟ ರಕ್ಷಿತ್ ಶೆಟ್ಟಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, 'ಎಲ್ಲರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯದ ಕನಸು ಕಂಡ ಮತ್ತು ಅದನ್ನು ನನಸಾಗಲು ಶ್ರಮಿಸಿದ ಪ್ರತೀ ಧೈರ್ಯಶಾಲಿಗಳನ್ನು ನೆನಪಿಸಿಕೊಳ್ಳುತ್ತಾ, ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.
ಪರಂವಃ ಸ್ಟುಡಿಯೋಸ್ ಪೋಸ್ಟ್: ನಟ ರಕ್ಷಿತ್ ಶೆಟ್ಟಿ ಮಾಲೀಕತ್ವದ ಪರಂವಃ ಸ್ಟುಡಿಯೋಸ್ಇಂಡಿಪೆಂಡೆನ್ಸ್ ಡೇ ಪೋಸ್ಟರ್ ಹಂಚಿಕೊಂಡಿದ್ದು, ಸ್ವಾತಂತ್ರ್ಯದ ಚೈತನ್ಯವು ನಮಗೆ ಉತ್ತಮ, ಉಜ್ವಲ ಭವಿಷ್ಯದತ್ತ ಮಾರ್ಗದರ್ಶನ ನೀಡಲಿ. ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಬರೆದುಕೊಂಡಿದೆ.
Let's celebrate freedom
— KRG Studios (@KRG_Studios) August 15, 2024
Let's celebrate Kannada Cinema!!
Wishing you all a very 𝐇𝐚𝐩𝐩𝐲 𝐈𝐧𝐝𝐞𝐩𝐞𝐧𝐝𝐞𝐧𝐜𝐞 𝐃𝐚𝐲 🇮🇳
Feel free to watch it 😉#PowderKanMovie in theatres from 𝟮𝟯𝗿𝗱 𝗔𝘂𝗴𝘂𝘀𝘁 𝟮𝟬𝟮𝟰@KRG_Studios @TheViralFever #TVFMotionPictures… pic.twitter.com/Ejkq8GE5IE
ಶಿವಣ್ಣ ಪೋಸ್ಟ್: ಸ್ವಾತಂತ್ರ್ಯ ಹೋರಾಟಗಳನ್ನು ನೆನಪಿಸುವ ಪೋಸ್ಟರ್ ಒಂದನ್ನು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡ ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್ಕುಮಾರ್, 'ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.
ವಸಿಷ್ಠ ಸಿಂಹ ಪೋಸ್ಟ್: ಕಂಚಿನ ಕಂಠದ ನಟ ವಸಿಷ್ಠ ಸಿಂಹ ತ್ರಿವರ್ಣದ ತಿನಿಸುಗಳುಳ್ಳ ಸುಂದರ ಫೋಟೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎಂದು ಬರೆದುಕೊಂಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್: ತನ್ನ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡ ವಿಎನ್ ಪ್ರೊಡಕ್ಷನ್ಸ್, ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಬರೆದುಕೊಂಡಿದೆ.
ಪೌಡರ್ ಚಿತ್ರತಂಡದಿಂದ ಶುಭಾಶಯ: ಕನ್ನಡದ ಬಹುನಿರೀಕ್ಷಿತ ಪೌಡರ್ ಸಿನಿಮಾ ಹಿಂದಿರುವ ಕೆಆರ್ಜಿ ಸ್ಟುಡಿಯೋಸ್ ಸ್ಪೆಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಚಿತ್ರದ ಬಹುತೇಕ ಸದಸ್ಯರು ವಿಶ್ ಮಾಡಿರೋದನ್ನು ಕಾಣಬಹುದು. ವಿಡಿಯೋಗೆ, 'ಸ್ವಾತಂತ್ರ್ಯವನ್ನು ಆಚರಿಸೋಣ. ಕನ್ನಡ ಚಿತ್ರರಂಗವನ್ನು ಸಂಭ್ರಮಿಸೋಣ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇವೆ. ಇದೇ ಆಗಸ್ಟ್ 23ಕ್ಕೆ ಪೌಡರ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ' ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಪೋಸ್ಟ್: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿರೋ ಫೋಟೋ ಹಂಚಿಕೊಂಡ ಕಾಂತಾರ ಸ್ಟಾರ್, ನಾಡಿನ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಳ್ಳಿ ತೆರೆಮೇಲೆ ದೇಶಪ್ರೇಮ ಸಾರಿದ ಕನ್ನಡ ಚಿತ್ರಗಳ ಮೆಲುಕು ನೋಟ - Kannada Patriotic Movies