ETV Bharat / entertainment

ಟಾಲಿವುಡ್ ಸಂಕ್ರಾಂತಿ ಬ್ಲಾಕ್​ ಬ್ಲಾಸ್ಟರ್​​ ಸಿನಿಮಾ 'ಹನುಮಾನ್​' ಹೊಸ ದಾಖಲೆ

author img

By ETV Bharat Karnataka Team

Published : Feb 3, 2024, 10:35 AM IST

ಸಂಕ್ರಾಂತಿ ಸೀಸನ್​ನಲ್ಲಿ ಬಿಡುಗಡೆಯಾದ ಹನುಮಾನ್​ ಸಿನಿಮಾ ಅತಿ ಹೆಚ್ಚುಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

hanuman-movie-set-a-record-thar-highest-grossing-film-in-sankranti-season

ಹೈದರಾಬಾದ್​: ಸಿನಿ ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾದ 'ಹನುಮಾನ್'​​ ಸಿನಿಮಾ ಅತಿ ಹೆಚ್ಚು ಪ್ರೇಕ್ಷಕರನ್ನು ಮನರಂಜಿಸಲು ಯಶಸ್ವಿಯಾಗಿದೆ. ಪ್ರಶಾಂತ್​ ವರ್ಮಾ, ತೇಜಾ ಸಜ್ಜಾ ನಿರ್ದೇಶನದ ಈ ಚಿತ್ರ ಹೊಸದೊಂದು ದಾಖಲೆಯನ್ನೇ ಸೃಷ್ಟಿಸಿದೆ. ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡಿದ ನಂಬರ್​ ಒನ್​ ಚಿತ್ರ ಇದಾಗಿದೆ. ಈ ಸಂತಸದ ವಿಷಯವನ್ನು ಇದೀಗ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 'ಹನುಮಾನ್​' ಜಾಗತಿಕವಾಗಿ ಎಲ್ಲ ಅಭಿಮಾನಿಗಳ ಪ್ರೀತಿಯನ್ನು ಗಳಿಸಿ ಹೊಸ ದಾಖಲೆ ಸೃಷ್ಟಿಸಿದೆ. ಟಾಲಿವುಡ್​ನ 92 ವರ್ಷದ ಇತಿಹಾಸದಲ್ಲಿ ಸಂಕ್ರಾಂತಿ ಸೀಸನ್​ನಲ್ಲಿ ಬಿಡುಗಡೆಯಾದ ಬ್ಲಾಕ್​ ಬಸ್ಟರ್​ ಸಿನಿಮಾ ಇದಾಗಿದೆ ಎಂದು ಪೋಸ್ಟರ್​ ಹಂಚಿಕೊಂಡಿದೆ.

ಜನವರಿ 12ರಂದು ಬಿಡುಗಡೆಯಾದ ಚಿತ್ರ 278 ಕೋಟಿ ರೂಗಳನ್ನು ಇದುವರೆಗೆ ಸಂಗ್ರಹಿಸಿದ್ದು, ಚಿತ್ರದ ಮುಂದಿನ ಸಿಕ್ವೇಲ್​ 'ಜೈ ಹನುಮಾನ್'​ ಅನ್ನು ನಿರ್ಮಿಸಲು ಚಿತ್ರತಂಡ ಸಜ್ಜಾಗಿದೆ. ಚಿತ್ರದ ಪ್ರಿ ಪ್ರೊಡಕ್ಷನ್​ ಕೆಲಸ ಈಗಾಗಲೇ ಆರಂಭವಾಗಿದೆ. ಇನ್ನು ಈ ಚಿತ್ರಕ್ಕೆ ಬಾಲಿವುಡ್​ ನಟರನ್ನು ಕರೆತರುವ ಯೋಜನೆಯನ್ನು ನಿರ್ದೇಶಕರು ಹೊಂದಿದ್ದಾರೆ.

ಪರದೆ ಮೇಲೆ ಮಾತ್ರವಲ್ಲದೇ ಪರದೆ ಹಿಂದಿನ ಹೊಂದಾಣಿಕೆ ಕೂಡ ಸಾಗಬೇಕಿದೆ. ಪರದೆ ಮೇಲೆ ಪಾತ್ರವನ್ನು ನೋಡಿದಾಗ ಪಾತ್ರವೂ ಆಧ್ಯಾತ್ಮದ ಅನುಭವವನ್ನು ಪ್ರೇಕ್ಷಕರಿಗೆ ಮೂಡಿಸಬೇಕು. ಅಂತಹ ಪಾತ್ರದ ಹುಡಕಾಟದಲ್ಲಿದ್ದು, ಚಿರಂಜೀವಿ ಹೆಸರು ಕೂಡ ನಮ್ಮ ಪಟ್ಟಿಯಲ್ಲಿದೆ ಎಂದು ನಿರ್ದೇಶಕ ಪ್ರಶಾಂತ್​ ವರ್ಮಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ರಾಮನ ಪಾತ್ರಕ್ಕೆ ನಟ ಮಹೇಶ್​ ಬಾಬು ಮಾಡಿದರೆ ಚೆನ್ನಾಗಿರುತ್ತದೆ ಎಂದು ಕೊಂಡಿದ್ದೇವೆ. ಅವರನ್ನು ರಾಮನ ಅವತಾರದಲ್ಲಿ ಚಿತ್ರಿಸಿರುವ ಫೋಟೋವನ್ನು ಮಹೇಶ್​ ಬಾಬು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದಾರೆ. ಅವರ ಆಫೀಸ್​ನಲ್ಲಿ ಮಹೇಶ್​​ ಬಾಬು ಮುಖವನ್ನು ರಾಮನ ಪಾತ್ರದಲ್ಲಿ ಮರು ಸೃಷ್ಟಿ ಮಾಡಲಾಗಿದೆ. ಪಾರ್ಟ್​ 1ರಲ್ಲಿ ನಟಿಸಿದ ತೇಜಾ ಭಾಗ ಎರಡರಲ್ಲೂ ಕಾಣಲಿದ್ದಾರೆ ಎಂದಿದ್ದಾರೆ.

ಸಿನಿಮಾದಲ್ಲಿ ಹನುಮಂತನ ಪ್ರವೇಶದ ದೃಶ್ಯವನ್ನು ಅಯೋಧ್ಯೆಯ ಹಿನ್ನಲೆಯಲ್ಲಿ ತೆಗೆಯ ಬಯಸಿದ್ದರು. ಒಂದು ಮಗುವೊಂದು ರಾಮಮಂದಿರದಲ್ಲಿ ದೀಪಗಳನ್ನು ಬೆಳಗಿಸಲು ಪ್ರಯತ್ನಿಸುತ್ತದೆ. ಆದರೆ, ಜೋರಾದ ಗಾಳಿಯಿಂದಾಗಿ ದೀಪಗಳು ಬೆಳಗುವುದಿಲ್ಲ. ಈ ವೇಳೆ ಹನುಮಂತನು ದೇವಾಲಯದ ಮೇಲೆ ಹೋದಾಗ ಆ ದೀಪಗಳು ಬೆಳಗುತ್ತವೆ. ಈ ರೀತಿಯಾಗಿ ನಿರ್ದೇಶಕರು ದೃಶ್ಯವನ್ನು ಸೃಷ್ಟಿಸಿದ್ದರು. ಆದರೆ ಕಾರಣಾಂತರಗಳಿಂದ ಈ ಸೀನ್​ ಬದಲಾಯಿಸಬೇಕಾಯಿತು.

ಇದನ್ನೂ ಓದಿ: 53 ಲಕ್ಷಕ್ಕೂ ಅಧಿಕ ಟಿಕೆಟ್​ ಮಾರಾಟ: ರಾಮಮಂದಿರಕ್ಕೆ 'ಹನುಮಾನ್' ದೇಣಿಗೆ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.