ರಾಷ್ಟ್ರ ಪ್ರಶಸ್ತಿ ಪಡೆದ 'ಗ್ರಹಣ' ಸಿನಿಮಾದ ಕಥೆಗಾರ ಹಾಗೂ ಬೆಳ್ಳಿ ಬೆಳಕು ಚಿತ್ರದ ನಿರ್ಮಾಪಕ ಕೋಡಳ್ಳಿ ಶಿವರಾಮ್ ನಿಧನರಾಗಿದ್ದಾರೆ. ಟಿ.ಎಸ್ ನಾಗಾಭರಣ ನಿರ್ದೇಶನದ ಗ್ರಹಣ ಚಿತ್ರಕ್ಕೆ ಕೋಡಳ್ಳಿ ಶಿವರಾಮ್ ಕಥೆ ಬರೆದಿದ್ದರು. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಒಲಿದು ಬಂದಿತ್ತು. ಕಳೆದ ರಾತ್ರಿ ಕೋಡಳ್ಳಿ ಶಿವರಾಮ್ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬ ವರ್ಗ ತಿಳಿಸಿದೆ.
ಕೋಡಳ್ಳಿ ಶಿವರಾಮ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣದ ಮೂಲಕ ಹೆಸರು ಸಂಪಾದಿಸಿದ್ದರು. ಮದುವೆಯಾಗದೇ ಬೆಂಗಳೂರಿನ ಹನುಮಂತ ನಗರದಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. 75ರ ಹರೆಯದ ಕೋಡಳ್ಳಿ ಶಿವರಾಮ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಹಣ ಚಿತ್ರದ ನಿರ್ದೇಶಕ ಟಿ.ಎಸ್ ನಾಗಾಭರಣ ಮಾತನಾಡಿ, ಕೋಡಳ್ಳಿ ಶಿವರಾಮ್ ಹೆಚ್ಚಾಗಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಅವರು ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ಬೆಂಗಳೂರಿನ ಗವಿಪುರಂನಲ್ಲಿರುವ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರವನ್ನು ಕುಟುಂಬ ನೆರವೇರಿಸಿದೆ ಎಂದು ತಿಳಿಸಿದ್ದಾರೆ. ಸದ್ಯ ಕೋಡಳ್ಳಿ ಶಿವರಾಮ್ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ದರ್ಶನ್ ಭೇಟಿಗಾಗಿ ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ, ನಟ ಧನ್ವೀರ್ - Actor Dhanveer Meets Darshan