ಅದ್ಧೂರಿ ಮೇಕಿಂಗ್, ಸ್ಟೈಲಿಶ್ ಡೈರೆಕ್ಷನ್ ಜೊತೆಗೆ ನವತಾರೆಯರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಮಾಡಿಸುವ ಸ್ಟೈಲಿಷ್ ನಿರ್ದೇಶಕರಂದ್ರೆ ಅದು ಇಂದ್ರಜಿತ್ ಲಂಕೇಶ್. ಈ ಮಾತು 'ಗೌರಿ' ಚಿತ್ರದಲ್ಲೂ ನಿಜವಾಗಿದೆ. ಹೌದು, ಪಿ.ಲಂಕೇಶ್ ಪುತ್ರ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಹಾಗೂ ಬಿಗ್ ಬಾಸ್ ಬೆಡಗಿ ಸಾನ್ಯಾ ಅಯ್ಯರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಟ್ರೇಲರ್ ಹಾಗೂ ಹಾಡುಗಳಿಂದಲೇ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಹುಟ್ಟಿಸಿದ್ದ ಗೌರಿ ಇಂದು ರಾಜ್ಯಾದ್ಯಾಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.
ಇಂದ್ರಜಿತ್ ಲಂಕೇಶ್ ಹಿಂದಿನ ಸಿನಿಮಾಗಳನ್ನು ನೋಡಿದ್ರೆ ಗೌರಿ ಆ ಎಲ್ಲಾ ಚಿತ್ರಗಳಿಗಿಂತ ವಿಭಿನ್ನವಾಗಿದೆ. ಯಾಕಂದ್ರೆ ಇಂದ್ರಜಿತ್ ಚಿತ್ರಗಳೆಂದ್ರೆ ಅಲ್ಲಿ ಲವ್ ಸ್ಟೋರಿ ಜೊತೆಗೆ ಗ್ಲ್ಯಾಮರ್ ಹೆಚ್ಚಾಗಿ ಇರುತ್ತಿತ್ತು. ಆದ್ರೆ ಗೌರಿ ಚಿತ್ರದಲ್ಲಿ ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್ ಹಾಗೂ ವಿಶೇಷಚೇತನರ ಬಗ್ಗೆ ಸಂದೇಶವಿದೆ. ಮೆಸೇಜ್ ಹೊತ್ತು ಬಂದ ಚಿತ್ರಕ್ಕೆ ಸಿನಿಪ್ರಿಯರು ಮೆಚ್ಚಿ ಬೆನ್ನು ತಟ್ಟಿದ್ದಾರೆ.
ಇಂದ್ರಜಿತ್ ಲಂಕೇಶ್ ಅವರು 'ಗೌರಿ' ಟೈಟಲ್ ಅನೌನ್ಸ್ ಮಾಡಿದಾಗ ಎಲ್ಲರೂ ಅವರ ಸಹೋದರಿ, ದಿವಗಂತ ಗೌರಿ ಅವರ ಕಥೆ ಇರಬೇಕೆಂದುಕೊಂಡಿದ್ದರು. ಆದ್ರೆ ಕಥೆ ಅದಲ್ಲ. ಮೊದಲ ಸಿನಿಮಾದಲ್ಲೇ ಸಮರ್ಜಿತ್ ಲಂಕೇಶ್ ಎರಡು ವಿಭಿನ್ನ ಶೇಡ್ನಲ್ಲಿ ಗಮನ ಸೆಳೆದಿದ್ದಾರೆ. ಇನ್ನೂ ಸಾನ್ಯಾ ಅಯ್ಯರ್ ತಾನು ಪ್ರೀತಿಸಿದ ಹುಡುಗನ ಕನಸನ್ನು ಹೇಗೆ ನನಸು ಮಾಡುತ್ತಾಳೆ ಅನ್ನೋದನ್ನು ತೀಳಿದುಕೊಳ್ಳಬೇಕಾದರೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು.
ಇದನ್ನೂ ಓದಿ: 'ಕೃಷ್ಣಂ ಪ್ರಣಯ ಸಖಿ'ಗೆ ಮೆಚ್ಚುಗೆ: ಪ್ರೇಕ್ಷಕರು, ಚಿತ್ರತಂಡ ಹೇಳಿದ್ದೇನು? ವಿಡಿಯೋ ನೋಡಿ - Krishnam Pranaya Sakhi
ಚೊಚ್ಚಲ ಚಿತ್ರದಲ್ಲೇ ಸಮರ್ಜಿತ್ ಲಂಕೇಶ್ ಆ್ಯಕ್ಷನ್, ಡೈಲಾಗ್ ಜೊತೆಗೆ ಎಮೋಷನ್ನಲ್ಲಿ ಕನ್ನಡಿಗರ ಹೃದಯ ಗೆಲ್ಲುತ್ತಾರೆ. ಸಾನ್ಯಾ ಅಯ್ಯರ್ ಗ್ಲ್ಯಾಮರ್ ಜೊತೆಗೆ ಉತ್ತಮ ನಟನೆಯಿಂದ ಎಲ್ಲರ ಹೃದಯ ಕದ್ದಿದ್ದಾರೆ. ಜೊತೆಗೆ ಮಾನಸಿ ಸುಧೀರ್, ಸಂಪತ್ ಮೈತ್ರೇಯ, ಪ್ರಿಯಾಂಕಾ ಉಪೇಂದ್ರ, ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ ಸೇರಿದಂತೆ ಒಟ್ಟು 80 ಕಲಾವಿದರು ಸಿನಿಮಾದಲ್ಲಿ ನಟಿಸಿರುವುದು ವಿಶೇಷ.
ಇದನ್ನೂ ಓದಿ: ಸೆನ್ಸಾರ್ ಪರೀಕ್ಷೆಯಲ್ಲಿ 'ಪೌಡರ್' ಪಾಸ್: ಸ್ವಾತಂತ್ರ್ಯ ದಿನದಂದು ಸ್ಪೆಷಲ್ ಪೋಸ್ಟ್ ಶೇರ್ - Powder
ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಮಾಸ್ತಿ ಮಂಜು, ರಾಜಶೇಖರ್ ಹಾಗೂ ಮಧು ಸಂಭಾಷಣೆ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ರವಿವರ್ಮಾ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಲವ್ ಸ್ಟೋರಿ ಹಾಗೂ ಗ್ಲ್ಯಾಮರ್ ಚಿತ್ರಗಳಿಗೆ ಸೀಮಿತ ಆಗದೇ ಇಂದ್ರಜಿತ್ ಲಂಕೇಶ್ ಸಂದೇಶದ ಜೊತೆಗೆ ವಿಶೇಷಚೇತನರ ಪ್ರತಿಭೆ ಅನಾವರಣಗೊಳಿಸಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.