ETV Bharat / entertainment

ಕೆಕೆಆರ್​ IPL ಚಾಂಪಿಯನ್​: ಶಾರೂಖ್​ ಪುತ್ರಿ ಸುಹಾನಾ, ನಟಿ ಅನನ್ಯಾ ಪಾಂಡೆ, ಶನಯಾ ಕಪೂರ್​ರಿಂದ "LOL' - KKR IPL champion - KKR IPL CHAMPION

ಐಪಿಎಲ್​ ಚಾಂಪಿಯನ್​ ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ಬಾಲಿವುಡ್​ ಮಂದಿಯಿಂದ ಬಹುಪರಾಕ್​ ಹಾಕಲಾಗುತ್ತಿದೆ. ಇನ್​​ಸ್ಟಾಗ್ರಾಮ್​ನಲ್ಲಿ ಹಲವು ಅಭಿನಂದನೆ ಸಲ್ಲಿಸಿದ್ದಾರೆ.

IPL ಚಾಂಪಿಯನ್​ ಕೆಕೆಆರ್​ಗೆ ಅಭಿನಂದನೆಗಳ ಸುರಿಮಳೆ
IPL ಚಾಂಪಿಯನ್​ ಕೆಕೆಆರ್​ಗೆ ಅಭಿನಂದನೆಗಳ ಸುರಿಮಳೆ (ETV Bharat)
author img

By ETV Bharat Karnataka Team

Published : May 27, 2024, 3:30 PM IST

ಹೈದರಾಬಾದ್: ಬಾಲಿವುಡ್​ ನಟ ಶಾರುಖ್ ಖಾನ್ ಮತ್ತು ನಟಿ ಜೂಹಿ ಚಾವ್ಲಾ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ 2024ರ ಸಾಲಿನ ಐಪಿಎಲ್​ ಚಾಂಪಿಯನ್​ ಆಗಿದ್ದು, ಹಲವು ಸಿನಿ ತಾರೆಯರಿಗೆ ಖುಷಿ ತಂದಿದೆ. ಶಾರುಖ್ ಪುತ್ರಿ ಸುಹಾನಾ ಖಾನ್, ಆಕೆಯ ಸ್ನೇಹಿತರಾದ ಶನಯಾ ಕಪೂರ್, ಅನನ್ಯಾ ಪಾಂಡೆ ಗೆಲುವನ್ನು ಸಂಭ್ರಮಿಸಿದ್ದಾರೆ.

ಸಂಭ್ರಮಾಚರಣೆಯ ಚಿತ್ರಗಳನ್ನು ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೇ, ಹಲವು ಬಾಲಿವುಡ್​ ನಟ, ನಟಿಯರು ಕೂಡ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ತಂಡವನ್ನು ಅಭಿನಂದಿಸಿದ್ದಾರೆ.

ಕೆಕೆಆರ್​ ತಂಡ ಐಪಿಎಲ್​ ಟ್ರೋಫಿ ಗೆಲುವಿನ ಬಳಿಕ, ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್, ಪುತ್ರರಾದ ಆರ್ಯನ್ ಮತ್ತು ಅಬ್ರಾಮ್ ಜೊತೆಗೆ ಒಟ್ಟಾಗಿ ಫೋಟೋಗೆ ಪೋಸ್ ನೀಡಿದರು. ಎಸ್‌ಆರ್‌ಕೆ ತನ್ನ ಪತ್ನಿ ಗೌರಿ ಅವರನ್ನು ಅಪ್ಪಿಕೊಂಡು ಹಣೆಗೆ ಮುತ್ತು ನೀಡಿದ್ದು, ಸುಹಾನಾ, ಆರ್ಯನ್ ಮತ್ತು ಅಬ್ರಾಮ್​ರನ್ನೂ ತಬ್ಬಿಕೊಂಡ ಚಿತ್ರಗಳನ್ನು ಇನ್​ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ. ಸುಹಾನಾ ಖಾನ್ ಮತ್ತು ಆಕೆಯ ಸ್ನೇಹಿತರಾದ ಅನನ್ಯಾ ಮತ್ತು ಶನಯಾ ಅವರು ಕೆಕೆಆರ್​ ತಂಡ ಟ್ರೋಫಿ ಎತ್ತಿ ಹಿಡಿದ ಸಂಭ್ರಮದ ಕ್ಷಣದ ಚಿತ್ರಗಳನ್ನು ಹರಿಬಿಟ್ಟಿದ್ದಾರೆ.

ಸುಹಾನಾ ಇನ್​ಸ್ಟಾ ಸ್ರೋರಿ: 'ಕೆಕೆಆರ್​ 8 ವಿಕೆಟ್​ಗಳಿಂದ ಐಪಿಎಲ್​ ಟ್ರೋಫಿ ಗೆದ್ದಿತು' ಎಂದು ಒಕ್ಕಣೆ ಬರೆದಿದ್ದಾರೆ. ಇನ್ನೊಂದು ಫೋಟೋದಲ್ಲಿ 'ಯಾರಾದರೂ ನನ್ನನ್ನು ಚಿವುಟಿ' ಎಂದು ಕೋರಿದ್ದಾರೆ. ಮತ್ತೊಂದು ಸ್ಟೋರಿಯಲ್ಲಿ ಶಾರೂಖ್​ಖಾನ್​ ಅವರು ಈ ಹಿಂದೆ ತಂಡ ಟ್ರೋಫಿ ಗೆದ್ದಾಗ ಮೈದಾನದಲ್ಲಿ ಪಲ್ಟಿ ಹೊಡೆದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ, ಸುಹಾನಾ ಅವರ ಸ್ನೇಹಿತೆ ಶನಯಾ ಕಪೂರ್ ಕೆಕೆಆರ್‌ ತಂಡದ ಅಭಿಮಾನಿ. ತಂಡ ಗೆದ್ದ ಬಳಿಕ ಕ್ರೀಡಾಂಗಣದಲ್ಲಿನ ಸಂಭ್ರಮದ ಹಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಗೆಲುವಿನ ಖುಷಿಯಲ್ಲಿ ಅವರು ತಂಡಕ್ಕೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಜೊತೆಗೆ ಸುಹಾನಾ, ಅನನ್ಯಾ ಮತ್ತು ಆರ್ಯನ್ ಖಾನ್ ಜೊತೆಗಿರುವ ಚಿತ್ರಗಳನ್ನೂ ಸರಣಿಯಾಗಿ ಪೋಸ್ಟ್ ಮಾಡಿದ್ದಾರೆ.

ಚಾಂಪಿಯನ್​ ಕೆಕೆಆರ್​; ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ 17ನೇ ಆವೃತ್ತಿಯ ಐಪಿಎಲ್​ ಚಾಂಪಿಯನ್​ ಆಗಿದೆ. ಮೇ 26 ರಂದು ಚೆನ್ನೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಬಗ್ಗುಬಡಿಯಿತು. ಕೆಕೆಆರ್​ ಬೌಲರ್​ಗಳ ದಾಳಿಗೆ ಸಿಲುಕಿದ ಸನ್​ ಪಡೆ 114 ರನ್​ಗೆ ಆಲೌಟ್​ ಆಯಿತು. ಇದನ್ನು ಶ್ರೇಯಸ್​ ಅಯ್ಯರ್​ ಪಡೆ ಕೇವಲ 10.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಪಂದ್ಯ ಹಾಗೂ ಪ್ರಶಸ್ತಿ ಗೆದ್ದುಕೊಂಡಿತು. ತಂಡದ ಪರ ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ರಹಮಾನುಲ್ಲಾ ಗುರ್ಬಾಜ್ 32 ಎಸೆತಗಳಲ್ಲಿ 39 ರನ್ ಕಲೆಹಾಕಿದರು. ಹೈದರಾಬಾದ್ ಪರ ಪ್ಯಾಟ್ ಕಮಿನ್ಸ್ ಮತ್ತು ಶಹಬಾಜ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು. ಪಂದ್ಯವು ಫೈನಲ್​ನ ರೋಚಕತೆ ನೀಡದೇ ಏಕಪಕ್ಷೀಯವಾಗಿ ನಡೆಯಿತು.

ಇದನ್ನೂ ಓದಿ: IPL Final: ದಶಕಗಳ ಬಳಿಕ ಚಾಂಪಿಯನ್​ ಪಟ್ಟಕೇರಿದ​ ಕೆಕೆಆರ್​​ ​ - KKR won the IPL trophy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.