ETV Bharat / entertainment

ಒಟಿಟಿಯಲ್ಲೂ ಗೀತಾ ಭಾರತಿ 'ರವಿಕೆ ಪ್ರಸಂಗ' ಸಖತ್​ ಸದ್ದು - Ravike Prasanga - RAVIKE PRASANGA

ಗೀತಾಭಾರತಿ ಅಭಿನಯದ ರವಿಕೆ ಪ್ರಸಂಗ ಸಿನಿಮಾ ಅಮೆಜಾನ್​ ಪ್ರೈಮ್​ನಲ್ಲಿ ಎಪ್ರಿಲ್​ 23ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.

ರವಿಕೆ ಪ್ರಸಂಗ'
ರವಿಕೆ ಪ್ರಸಂಗ' (ETV Bharat)
author img

By ETV Bharat Karnataka Team

Published : May 29, 2024, 1:36 PM IST

ಹೆಣ್ಣುಮಕ್ಕಳು ಮನೆಯಲ್ಲಿ ಯಾವುದೇ ಸಮಾರಂಭವಾದರೂ ಸೀರೆಗೆ ತಕ್ಕಂತೆ ರವಿಕೆ ಹೊಲಿಸಿಕೊಳ್ಳುವುದು ರೂಡಿ.. ಅಂತಹ ರವಿಕೆಯ ಕುರಿತಾದ ಸಿನಿಮಾವೇ 'ರವಿಕೆ ಪ್ರಸಂಗ'. ಸಂತೋಷ್​ ಕೊಡೆಂಕೆರಿ ನಿರ್ದೇಶನದ, ನಟಿ ಗೀತಾ ಭಾರತಿ ನಟಿಸಿರುವ ರವಿಕೆ ಪ್ರಸಂಗ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಿನಿಮಾ ಪ್ರೇಕ್ಷಕರ ರವಿಕೆ ಪ್ರಸಂಗ ಚಿತ್ರ ತಲುಪಿತ್ತು. ಇದೀಗ ಒಟಿಟಿ ಅಮೆಜಾನ್ ಫ್ರೈಮ್​ನಲ್ಲಿ ಬಿಡುಗಡೆ ಆಗುವ ಮೂಲಕ‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕಿರುತೆರೆ ಹಾಗು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಗೀತಾ ಭಾರತಿ ಭಟ್ ರವಿಕೆ ಪ್ರಸಂಗ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಎಷ್ಟು ಪ್ರೀತಿ, ಅದರ ಅಳತೆ ಎಷ್ಟು ಇರಬೇಕು ಎಂಬ ಕಥೆಯನ್ನು ರವಿಕೆ ಪ್ರಸಂಗ ಚಿತ್ರ ಒಳಗೊಂಡಿದೆ. ಕನ್ನಡ ಹಾಗು ಮಂಗಳೂರು ಭಾಷೆಯ ಶೈಲಿಯಲ್ಲಿ ಸಂಭಾಷಣೆ ಇರೋದು ವಿಶೇಷ.

'ರವಿಕೆ ಪ್ರಸಂಗ' ತಂಡ
'ರವಿಕೆ ಪ್ರಸಂಗ' ತಂಡ (ETV Bharat)

ಈ ಚಿತ್ರದಲ್ಲಿ ಗೀತಾಭಾರತಿ ಭಟ್ ಅಲ್ಲದೇ ಪದ್ಮಜಾರಾವ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್, ರಘು ಪಾಂಡೇಶ್ವರ್ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶಕ ಸಂತೋಷ್ ಕೊಡೆಂಕೆರಿ ನಿರ್ದೇಶನ ಮಾಡಿದ್ದು, ಪತ್ನಿ ಪಾವನ ಸಂತೋಷ್​ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿಧರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನವಿದ್ದು, ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಇಷ್ಟೆಲ್ಲಾ ವಿಶೇಷತೆ ಇರುವ ರವಿಕೆ ಪ್ರಸಂಗ ಚಿತ್ರಕ್ಕೆ ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಗ್ತಾ ಇರೋದು ಚಿತ್ರತಂಡಕ್ಕೆ ಖುಷಿ ತಂದಿದೆ.

ಇದನ್ನೂ ಓದಿ: "ಪುಷ್ಪಾ 2": ಶ್ರೀವಲ್ಲಿ-ಪುಷ್ಪರಾಜ್ ರೊಮ್ಯಾಂಟಿಕ್​​ ಸಾಂಗ್​​ 6 ಭಾಷೆಯಲ್ಲಿ ಬಿಡುಗಡೆ - pushpa 2 couple song released

ETV Bharat Logo

Copyright © 2025 Ushodaya Enterprises Pvt. Ltd., All Rights Reserved.