ಹೈದರಾಬಾದ್: ಇತ್ತೀಚಿನ ದಿನದಲ್ಲಿ ದೇಶ ಮಾತ್ರವಲ್ಲದೇ ಜಗತ್ತಿನೆಲ್ಲಡೆ ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿದೆ. 'ಬಾಹುಬಲಿ' 1 ಮತ್ತು 2, 'ಕೆಜಿಎಫ್ ಚಾಪ್ಟರ್ 1' ಮತ್ತು 2, 'ಪುಷ್ಪಾ: ದಿ ರೈಸ್', 'ಆರ್ಆರ್ಆರ್' ಮತ್ತು ಇತರ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಮಾತ್ರವಲ್ಲದೇ, ಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸುತ್ತಿದೆ. ಈ ಚಿತ್ರಗಳು ಊಹಿಸದ ರೀತಿಯಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿವೆ.
ಅನೇಕ ದಕ್ಷಿಣ ಭಾರತದ ಕಲಾವಿದರು ಕೂಡ ಬಾಲಿವುಡ್ ಚಿತ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ. ಸಾಯಿ ಪಲ್ಲವಿ, ಸಮಂತಾ ಋತು ಪ್ರಭು, ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ನಂತಹ ಅನೇಕ ನಟಿಯರು ಬಾಲಿವುಡ್ ಮತ್ತು ಒಟಿಟಿಯಲ್ಲಿ ಮಿಂಚುತ್ತಿದ್ದಾರೆ. ನಟಿ ಸಾಯಿಪಲ್ಲವಿ 'ರಾಮಾಯಣ' ಚಿತ್ರದಲ್ಲಿ ನಟಿ ರಣಬೀರ್ ಕಪೂರ್ ಮತ್ತು ಆಮೀರ್ ಖಾನ್ ಮಗ ಜುನೈದ್ ಖಾನ್ ಜೊತೆಗೆ ಮತ್ತೊಂದು ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕೀರ್ತಿ ಸುರೇಶ್ ನಟನೆಯ 'ಬೇಬಿ ಜಾನ್' ಚಿತ್ರ ಸಿದ್ದವಾಗಿದೆ. ರಶ್ಮಿಕಾ ಮಂದಣ್ಣ 'ಸಿಕಂದರ್' ಮತ್ತು 'ಛಾವಾ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನು ಸಮಂತಾ ಸಿಟಾಡೆಲ್ನಲ್ಲಿ ಮಗ್ನರಾಗಿದ್ದಾರೆ.
ತಮ್ಮ ನೈಸರ್ಗಿಕ ನಟನಾ ಸಾಮರ್ಥ್ಯದಿಂದ ಪ್ರೇಕ್ಷಕರನ್ನು ಹಿಡಿದಿರುವ ನಟಿ ಸಾಯಿ ಪಲ್ಲವಿ. ಇದೀಗ ಅವರು ತಮ್ಮ ಮುಂದಿನ ಚಿತ್ರದ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ಮಂತ್ರ ಮುಗ್ದವಾಗಿಸಲಿದ್ದಾರೆ. ದಕ್ಷಿಣ ಭಾರತದ ಚಿತ್ರಗಳಿಂದ ಅಪಾಯ ಅಭಿಮಾನಿಗಳನ್ನು ಪಡೆದಿರುವ ಅವರು, ಇದೀಗ ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
- " class="align-text-top noRightClick twitterSection" data="">
ನ್ಯಾಷನಲ್ ಕ್ರಶ್ ಆಗಿ ಈಗಾಗಲೇ ಪಟ್ಟ ಅಲಂಕರಿಸಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ನ ಸಾಲು ಸಾಲು ಚಿತ್ರ ಮತ್ತು ಒಟಿಟಿಯಲ್ಲಿ ತಲ್ಲೀನರಾಗಿದ್ದಾರೆ. ನಟ ರಣಬೀರ್ ಕಪೂರ್ ಜೊತೆಗಿನ 'ಅನಿಮಲ್' ಚಿತ್ರದ ಯಶಸ್ಸಿನಲ್ಲಿರುವ ನಟಿಯ ಸಿಕಂದರ್ ಮತ್ತು ಛಾಯಾ ಚಿತ್ರಗಳು ಅಭಿಮಾನಿಗಳಲ್ಲಿ ಮತ್ತುಷ್ಟು ಕಾತರತೆ ಹೆಚ್ಚಿಸಿದೆ. ನಟ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ರಶ್ಮಿಕಾ ನಟ ಸಿದ್ದಾರ್ಥ್ ಜೊತೆ 'ಮಿಷನ್ ಮಜ್ನು' ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಚಿತ್ರಗಳಲ್ಲಿನ ಅವರ ಪಾತ್ರ ಪೋಷಣೆ ಅವರಿಗೆ ಅವಕಾಶಕ್ಕೆ ವೇದಿಕೆಯಾಗಿದೆ.
- " class="align-text-top noRightClick twitterSection" data="">
ತಮ್ಮ ಅದ್ಬುತ ನಟನೆ ಮೂಲಕ ತಾವು ಉತ್ತಮ ನಟಿ ಎಂದು ಸಾಬೀತು ಪಡಿಸಿರುವ ಸಮಂತಾ ಇದೀಗ ತಮ್ಮ ಮುಂದಿನ ಒಟಿಟಿ ಪ್ರಾಜೆಕ್ಟ್ 'ಸಿಟಾಡೆಲ್'ನಲ್ಲಿ ತಲ್ಲೀನರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಉತ್ತಮ ಹಿಟ್ ಸಿನಿಮಾ ನೀಡುವ ಮೂಲಕ ಬೇಡಿಕೆ ಪಡೆದಿರುವ ನಟಿ ಇದೀಗ ರಿಸ್ಸೊ ಬ್ರದರ್ಸ್ ನಿರ್ದೇಶನದ ಸಿಟಾಡೆಲ್ ಮೂಲಕ ಜಾಗತಿಕ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ದಕ್ಷಿಣ ಭಾರತದ ಮತ್ತೊಬ್ಬ ಬೇಡಿಕೆ ನಟಿಯಾಗಿರುವ ಕೀರ್ತಿ ಸುರೇಶ್ ಕೂಡ 'ಬೇಬಿ ಜಾನ್' ಚಿತ್ರದ ಮೂಲಕ ಬಾಲಿವುಡ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮ್ಮ ಅಮೋಘ ನಟನೆಯ ಮಹಾನಟಿ ಚಿತ್ರದ ಮೂಲಕ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಅವರು ಹೊಂದಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ನಟನೆಯ 'ಸಿಖಂದರ್'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ