ETV Bharat / entertainment

ಪಡೆದುಕೊಂಡಿದ್ದ ಹಣವನ್ನು ದರ್ಶನ್​ಗೆ ವಾಪಸ್ ಕೊಟ್ಟಿದ್ದೇನಷ್ಟೇ: ವಿಚಾರಣೆ ಬಳಿಕ ಮೋಹನ್ ರಾಜ್ - Mohan Raj On Darshan Case - MOHAN RAJ ON DARSHAN CASE

ಬಿಬಿಎಂಪಿ ಮಾಜಿ ಉಪಮೇಯರ್ ಮೋಹನ್ ರಾಜ್ ಅವರು ನಟ ದರ್ಶನ್ ಅವರಿಗೆ ಹಣ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದರು.

Darshan, Mohan Raj
ದರ್ಶನ್,​ ಮೋಹನ್​​ ರಾಜ್​ (ETV Bharat)
author img

By ETV Bharat Karnataka Team

Published : Jul 6, 2024, 7:02 AM IST

ಬಿಬಿಎಂಪಿ ಮಾಜಿ ಉಪಮೇಯರ್ ಮೋಹನ್ ರಾಜ್ (ETV Bharat)

ಬೆಂಗಳೂರು: ''ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ'' ಎಂದು ಬಿಬಿಎಂಪಿ ಮಾಜಿ ಉಪಮೇಯರ್ ಮೋಹನ್ ರಾಜ್ ತಿಳಿಸಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಅವರಿಗೆ 40 ಲಕ್ಷ ರೂ ಹಣ ನೀಡಿದ್ದ ಆರೋಪದಡಿ ಶುಕ್ರವಾರ ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ಮೋಹನ್ ರಾಜ್ ಮಾತನಾಡಿದರು.

ಶುಕ್ರವಾರದಂದು ಬಸವೇಶ್ವರ ನಗರ ಠಾಣೆಗೆ ಆಗಮಿಸಿದ್ದ ಮೋಹನ್ ರಾಜ್, ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್‌ ನೇತೃತ್ವದಲ್ಲಿ ವಿಚಾರಣೆ ಎದುರಿಸಿದರು. ಸುಮಾರು 4 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿ ಹೊರಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಅವರು, ''ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ನಟ ದರ್ಶನ್ ಅವರು ನನಗೆ ಪರಿಚಿತರು. ಅವರಿಂದ ಪಡೆದುಕೊಂಡಿದ್ದ ಹಣವನ್ನು ವಾಪಸ್ ಕೊಟ್ಟಿದ್ದೆ. 12 ಗಂಟೆಗೆ (ಶುಕ್ರವಾರ) ನೋಟಿಸ್ ನೀಡಿದ್ದ ಪೊಲೀಸರು, ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ವಿಚಾರಣೆಗೆ ಬಂದಿದ್ದೆ. ಎಸಿಪಿ ಸೇರಿದಂತೆ ನಾಲ್ವರು ಅಧಿಕಾರಿಗಳು ವಿಚಾರಣೆ ನಡೆಸಿ ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದೇನೆ. ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚೇನು ಹೇಳುವುದಿಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ: ದರ್ಶನ್, ಪವಿತ್ರಾ ಗೌಡ ಆಪ್ತರ ವಿಚಾರಣೆಗೆ ಮುಂದಾದ ಪೊಲೀಸರು - Renukaswamy Murder Case

ಹತ್ಯೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ 40 ಲಕ್ಷ ರೂ. ನೀಡಿದ್ದ ಹಿನ್ನೆಲೆ ಮೋಹನ್ ರಾಜ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಮೊದಲ ಬಾರಿ ನೀಡಿದ್ದ ನೋಟಿಸ್​​​ಗೆ ಗೈರಾಗಿದ್ದ ಮೋಹನ್ ರಾಜ್ ಅವರಿಗೆ ಮತ್ತೊಮ್ಮೆ ನೋಟಿಸ್‌ ನೀಡಲಾಗಿತ್ತು. ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.