ETV Bharat / entertainment

90ರ ದಶಕದ ಪ್ರೇಮ ಕಥೆ ಹೇಳುವ 'ವಿಷ್ಣುಪ್ರಿಯ' ಸಿನಿಮಾಗೆ ಸಿಕ್ತು ಶರಣ್ - ರುಕ್ಮಿಣಿ ವಸಂತ್ ಸಾಥ್ - Vishnu Priya Movie

ಶ್ರೇಯಸ್ ಮಂಜು ನಟನೆಯ 'ವಿಷ್ಣುಪ್ರಿಯ' ಎಂಬ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಸದ್ಯ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

ವಿಷ್ಣುಪ್ರಿಯ ಚಿತ್ರ ತಂಡ
ವಿಷ್ಣುಪ್ರಿಯ ಚಿತ್ರ ತಂಡ
author img

By ETV Bharat Karnataka Team

Published : Jan 29, 2024, 7:57 PM IST

'ಪಡ್ಡೆಹುಲಿ' ಮತ್ತು 'ರಾಣಾ' ಚಿತ್ರದಲ್ಲಿ ಮಾಸ್​ ಹೀರೋ ಆಗಿ ಮಿಂಚಿದ ಯುವ ನಟ ಶ್ರೇಯಸ್ ಮಂಜು ಇದೀಗ, ಪ್ರೇಮಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ವಿಷ್ಣುಪ್ರಿಯ' ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ಶೂಟಿಂಗ್ ಮುಗಿಸಿ ರಿಲೀಸ್​ಗೂ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಮೊದಲ ಪ್ರೇಮ ಗೀತೆಯ ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಿತು.

ವಿಷ್ಣುಪ್ರಿಯ ಚಿತ್ರ ತಂಡ
ವಿಷ್ಣುಪ್ರಿಯ ಚಿತ್ರ ತಂಡ

ನಟ ಶರಣ್ ಹಾಗೂ ನಟಿ ರುಕ್ಮಿಣಿ ವಸಂತ್ ಸೇರಿ ನಾಗೇಂದ್ರ ಪ್ರಸಾದ್ ರಚನೆಯ 'ಚಿಗುರು ಚಿಗುರು ಸಮಯ' ಹಾಡನ್ನು ಲಾಂಚ್ ಮಾಡಿದರು. ನಿರ್ಮಾಪಕರಾದ ರಮೇಶ್ ರೆಡ್ಡಿ, ಚೇತನ್ ಕುಮಾರ್, ಸೂರಪ್ಪಬಾಬು, ನಿರ್ದೇಶಕರಾದ ಗುರು ದೇಶಪಾಂಡೆ, ದಯಾಳ್ ಪದ್ಮನಾಬನ್, ಭರ್ಜರಿ ಚೇತನ್, ಸತ್ಯಪ್ರಕಾಶ್, ಮಹೇಶ್ ಕುಮಾರ್, ನಟ ವಿಕ್ರಂ ರವಿಚಂದ್ರನ್ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಈ ವೇಳೆ, ಚಿತ್ರ ತಂಡದ ಎಲ್ಲ ಸದಸ್ಯರು 'ವಿಷ್ಣುಪ್ರಿಯ'ದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಡಿಸಿದರು.

ವಿಷ್ಣುಪ್ರಿಯ ಚಿತ್ರ ತಂಡ
ವಿಷ್ಣುಪ್ರಿಯ ಚಿತ್ರ ತಂಡ

ನಟ ಶರಣ್ ಮಾತನಾಡಿ, ಕೆಲವು ಹಾಡುಗಳು ಥಟ್ ಅಂತ ಮೆದುಳಿಗೇ ನಾಟುತ್ತವೆ. ಅಂಥ ಹಾಡನ್ನು ನಾನಿಲ್ಲಿ ನೋಡಿದೆ. ಇದೊಂದು ಫೀಲ್ ಗುಡ್ ಸಿನಿಮಾ. ನಿರ್ದೇಶಕರು ಪ್ರತಿ ಫ್ರೇಮ್​​​​ನಲ್ಲೂ ಕಾಣಿಸ್ತಾರೆ. ಟೈಟಲ್​​ನಲ್ಲೇ ವಿಷ್ಣು ಸರ್ ಇದ್ದಾರೆ. 2024 ಅನ್ನು ಖುಷಿ ಖುಷಿಯಾಗಿ ಸ್ಟಾರ್ಟ್ ಮಾಡಲು ಅದ್ಭುತವಾದ ಸಾಂಗ್ ಸಿಕ್ಕಿದೆ ಎಂದರು.

ವಿಷ್ಣುಪ್ರಿಯ ಚಿತ್ರ ತಂಡ
ವಿಷ್ಣುಪ್ರಿಯ ಚಿತ್ರ ತಂಡ

ನಂತರ ದಯಾಳ್ ಪದ್ಮನಾಭನ್ ಮಾತನಾಡಿ, ಮಂಜು ಒಂದು ಸಿನಿಮಾ ಮಾಡುವಾಗ ತುಂಬಾ ಕ್ಲಿಯರ್ ಆಗಿರ್ತಾರೆ. ಅವರಿಲ್ಲಿ ಬರೀ ಪ್ರೊಡ್ಯೂಸರ್ ಆಗಿ ಸಿನಿಮಾ ಮಾಡಿಲ್ಲ. ಒಬ್ಬ ತಂದೆಯಾಗಿ ಜವಾಬ್ದಾರಿ ಇದೆ ಎಂದರು. ಗುರು ದೇಶಪಾಂಡೆ ಮಾತನಾಡಿ, ಶ್ರೇಯಸ್ ತುಂಬಾ ಹಾರ್ಡ್ ವರ್ಕ್ ಮಾಡೋ‌ ಹುಡುಗ ಎಂದು ನಟನನ್ನು ಕೊಂಡಾಡಿದರು.

ವಿಷ್ಣುಪ್ರಿಯ ಚಿತ್ರ ತಂಡ
ವಿಷ್ಣುಪ್ರಿಯ ಚಿತ್ರ ತಂಡ

ನಿರ್ಮಾಪಕ ಕೆ.ಮಂಜು ಮಾತನಾಡಿ, ಚಿತ್ರರಂಗ ನನಗೆ ಹಣ, ಗೌರವ ಎಲ್ಲವನ್ನೂ ಕೊಟ್ಟಿದೆ. ಒಬ್ಬ ರೈತ ಒಳ್ಳೆಯ ಬೆಳೆ ಬೆಳೆಯಬೇಕಾದರೆ ಮಳೆಯನ್ನು ನಂಬ್ತಾನೆ. ಆದೇ ರೀತಿ ನನ್ನ ಮಗನನ್ನು ಚಿತ್ರರಂಗದಲ್ಲಿ ಬೆಳೆಸಲು ನಿರ್ದೇಶಕರನ್ನು ನಂಬಿದ್ದೇನೆ. ಈಗಿನ ಕೆಲ ನಿರ್ದೇಶಕರಿಗೆ ಜವಾಬ್ದಾರಿ ಇಲ್ಲ. ನಿರ್ಮಾಪಕ ದುಡ್ಡನ್ನು ಎಲ್ಲಿಂದ ತಂದು ಹಾಕ್ತಾನೆ ಅಂತ ಅವರು ಅರ್ಥ ಮಾಡಿಕೊಳ್ಳಬೇಕು. ಚೆನ್ನಾಗಿ ಬರಬೇಕು ಎಂಬ ಕಾರಣದಿಂದ ಸಿನಿಮಾ ಲೇಟಾಗಿದೆ. ಶಿವರಾತ್ರಿಗೆ ಅಥವಾ ಏಪ್ರಿಲ್ 5ಕ್ಕೆ ರಿಲೀಸ್ ಮಾಡಬೇಕು ಎನ್ನುವ ಯೋಚನೆ ಇದೆ ಎಂದು ಹೇಳಿದರು.

ಗಂಡುಗಲಿ ಕೆ. ಮಂಜು ಅವರ ಬಿಂದಿಯಾ ಪ್ರೊಡಕ್ಷನ್ಸ್ ನಿರ್ಮಾಣದ, ರಾಷ್ಟ್ರಪ್ರಶಸ್ತಿ ವಿಜೇತ ವಿಕೆ ಪ್ರಕಾಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳ ಹಿನ್ನೆಲೆಯ ವಿಶಿಷ್ಠ ಪ್ರೇಮ ಕಥಾನಕವಿದೆ. ಮಲೆಯಾಳಂನ ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರದ ಹಾಡುಗಳಿಗಿದೆ. ವಿನೋದ್ ಭಾರತಿ ಅವರ ಛಾಯಾಗ್ರಹಣ, ವಿಕ್ರಂ ಮೋರ್, ಜಾಲಿ ಬಾಸ್ಟಿನ್, ವಿನೋದ್ ಅವರ ಸಾಹಸ ಸಂಯೊಜನೆ ಈ ಚಿತ್ರಕ್ಕಿದೆ. ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿ ನಟಿಯಾಗಿದ್ದರೆ ಉಳಿದಂತೆ ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ನಿಹಾಲ್ ರಾಜ್ ಹಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. 'ವಿಷ್ಣುಪ್ರಿಯ' ಇದೊಂದು 1990ರ ಕಾಲದಲ್ಲಿ ನಡೆದಂಥ ಮಾಸ್ ಲವ್ ಸ್ಟೋರಿ. 90 ದಶಕದಲ್ಲಿ ನಡೆದಂಥ ಒಂದು ಪ್ರೇಮ ಕಥೆಯನ್ನು ಈ ಚಿತ್ರದ ಮೂಲಕ ನಿರ್ದೇಶಕ ವಿಕೆ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರದ ಹಾಡು ರಿಲೀಸ್ ಆಗಿದ್ದು ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ: ಮುತ್ತಣ್ಣನ ಮಗನಾಗಿ ಅದೃಷ್ಟ ಪರೀಕ್ಷೆಗಿಳಿದ ಪ್ರಣಂ ದೇವರಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.