ETV Bharat / entertainment

ರಜನಿಕಾಂತ್ 'ವೆಟ್ಟೈಯನ್‌' ಬಿಡುಗಡೆ: ಚಿತ್ರಮಂದಿರಗಳೆದುರು ಸಂಭ್ರಮಾಚರಣೆ ಜೋರು - ವಿಡಿಯೋ ನೋಡಿ - VETTAIYAN FANS CELEBRATION

ರಜನಿಕಾಂತ್ ಮುಖ್ಯಭೂಮಿಕೆಯ ಬಹು ನಿರೀಕ್ಷಿತ ಚಿತ್ರ ವೆಟ್ಟೈಯನ್‌ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳೆದುರು ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ.

Vettaiyan Fans Celebration
'ವೆಟ್ಟೈಯನ್‌' ಬಿಡುಗಡೆ, ಅಭಿಮಾನಿಗಳ ಸಂಭ್ರಮಾಚರಣೆ (Photo source: Film Poster/ ETV Bharat)
author img

By ETV Bharat Entertainment Team

Published : Oct 10, 2024, 1:32 PM IST

ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಮುಖ್ಯಭೂಮಿಕೆಯ ಬಹು ನಿರೀಕ್ಷಿತ ಚಿತ್ರ ವೆಟ್ಟೈಯನ್‌ ಇಂದು ಬಹಳ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ದೇಶಾದ್ಯಂತ ಹಲವೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಿನಿಪ್ರಿಯರು ಚಿತ್ರಮಂದಿರಗಳೆದುರು ಸಂಭ್ರಮಾಚರಣೆ ಮಾಡಿದ್ದಾರೆ. ಅಪ್ರತಿಮ ಕಲಾವಿದನ ಡ್ಯುಯಲ್ - ಶೇಡ್ ಪೊಲೀಸ್ ಪಾತ್ರಕ್ಕೆ ಬಹುತೇಕ ಮೆಚ್ಚುಗೆಯೇ ವ್ಯಕ್ತವಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾ ದೇಶಾದ್ಯಂತ ಸಖತ್​ ಸದ್ದು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಚೆನ್ನೈನಲ್ಲಿ ಸ್ಪೆಚಲ್ ಸ್ಕ್ರೀನಿಂಗ್ಸ್, ಮಾರ್ನಿಂಗ್​ ಶೋಗಳು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶ ಕಂಡಿದೆ. ದಿ ಮೋಸ್ಟ್ ಎಕ್ಸ್​​ಪೆಕ್ಟೆಡ್​ ಮೂವಿ ಈಗಾಗಲೇ ಅಡ್ವಾನ್ಸ್ ಟಿಕೆಟ್​ ವಿಷಯದಲ್ಲಿ 40 ಕೋಟಿ ರೂ.ಗೂ ಅಧಿಕ ಗಳಿಸಿದೆ ಎಂದು ವರದಿಗಳು ಸೂಚಿಸಿವೆ. ಈ ವ್ಯವಹಾರ ರಜನಿ ಸಿನಿಮಾ ಕ್ರೇಜ್​​​ಗೆ ಹಿಡಿದ ಕೈಗನ್ನಡಿ.

'ವೆಟ್ಟೈಯನ್‌' ಬಿಡುಗಡೆ, ಅಭಿಮಾನಿಗಳ ಸಂಭ್ರಮಾಚರಣೆ (Video source: ETV Bharat)

ನಿನ್ನೆ ರಾತ್ರಿಯಿಂದಲೇ ಚಿತ್ರಮಂದಿರಗಳೆದುರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸೌತ್​ ಸೂಪರ್​ ಸ್ಟಾರ್ ರಜನಿಕಾಂತ್ ಅವರ ಬೃಹತ್ ಕಟೌಟ್‌ಗಳು, ಬ್ಯಾನರ್‌ಗಳು ರಾರಾಜಿಸುತ್ತಿವೆ. ಮಧ್ಯರಾತ್ರಿ, ಮುಂಜಾನೆ ಪಟಾಕಿಗಳಿಂದ ಆಕಾಶ ಬೆಳಗಿದೆ. ಸಂಭ್ರಮಾಚರಣೆ ಮೂಲಕ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಮೇಲಿನ ಪ್ರೀತಿ, ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ತುಂಬಿದ ಚಿತ್ರಮಂದಿರಗಳೊಳಗೆ ಪ್ರೇಕ್ಷಕರ ಹರ್ಷೋದ್ಗಾರ ಜೋರಾಗಿದೆ. ಬಿಗ್​​ ಸ್ಕ್ರೀನ್​ನಲ್ಲಿ ತಲೈವಾ ಎಂಟ್ರಿಯಾಗುತ್ತಿದ್ದಂತೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳು ದೊಡ್ಡ ಮಟ್ಟದಲ್ಲೇ ಕೇಳಿ ಬರುತ್ತಿವೆ.

ಸೋಷಿಯಲ್​ ಮೀಡಿಯಾದ ವಿವಿಧ ಪ್ಲ್ಯಾಟ್​ಪಾರ್ಮ್​​​ಗಳು ರಜನಿಕಾಂತ್ ಅಭಿನಯದ ಬಗೆಗಿನ ಮೆಚ್ಚುಗೆಯ ಮಾತುಗಳು, ಅದ್ಧೂರಿ ಸೆಲೆಬ್ರೆಶನ್​ ವಿಡಿಯೋಗಳಿಂದ ತುಂಬಿವೆ. ಇದು ಸ್ಟಾರ್​​ಡಮ್​ಗೆ ಸ್ಪಷ್ಟ ಉದಾಹರಣೆ. ಅಭಿಮಾನಿಗಳು ತಮ್ಮ ಅಭಿಮಾನ ವ್ಯಕ್ತಪಡಿಸುವ ರೀತಿ, ನಟನ ಮೇಲಿನ ಅವರ ಆರಾಧನೆ ವರ್ಣನಾತೀತ. ಅನೇಕರು ಇಂದಿನ ಈ ಅನುಭವವನ್ನು ಮಹಾ ಉತ್ಸವಕ್ಕೆ ಹೋಲಿಸಿದ್ದಾರೆ.

ಇದನ್ನೂ ಓದಿ: ಧ್ರುವ ಸರ್ಜಾ 'ಮಾರ್ಟಿನ್' ಕಾಸ್ಟೂಮ್, ಟ್ಯಾಟೂ ಹಿಂದಿನ ಸೂತ್ರಧಾರರು ಇವ್ರೇ

ಇನ್ನು ನಾವಿಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸೂಪರ್‌ ಸ್ಟಾರ್​ನ ಅಭಿಮಾನಿಗಳು ಚೆನ್ನೈನ ಥಿಯೇಟರ್‌ನ ಹೊರಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿ, ಅವರ ಹಾಡುಗಳಿಗೆ ನೃತ್ಯ ಮಾಡುವುದನ್ನು, ಸಂಭ್ರಮಿಸುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ರತನ್​ ಟಾಟಾ ನಿಧನ: ಶಿವಣ್ಣ, ರಿಷಬ್​​​ ಶೆಟ್ಟಿ, ಉಪ್ಪಿ ಸೇರಿದಂತೆ ಸಿನಿಗಣ್ಯರಿಂದ ಸಂತಾಪ

ಟಿ.ಜೆ.ಜ್ಞಾನವೆಲ್ ನಿರ್ದೇಶನದ ವೆಟ್ಟೈಯನ್ ಚಿತ್ರದಲ್ಲಿ ಹಿರಿಯ ಬಾಲಿವುಡ್​ ನಟ ಅಮಿತಾಭ್ ಬಚ್ಚನ್, ಮಂಜು ವಾರಿಯರ್ ಮತ್ತು ಫಹದ್ ಫಾಸಿಲ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಎಸ್‌ಆರ್ ಕಥಿರ್ ಅವರ ಕ್ಯಾಮರಾ ಕೈಚಳಕ ಇರುವ ಈ ಚಿತ್ರವು ಕ್ಲಾಸ್ ಆ್ಯಂಡ್​ ಮಾಸ್ ಅಂಶಗಳ ಮಿಶ್ರಣವಾಗಿದೆ. ಚಿತ್ರ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವ ನಿರೀಕ್ಷೆಯಿದೆ. ಸಾಗರೋತ್ತರ ಪ್ರದೇಶದ ಗಳಿಕೆಯು ದೇಶೀಯ ವ್ಯವಹಾರದ ಅಂಕಿಅಂಶಗಳನ್ನು ಮೀರಿಸುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.