ETV Bharat / entertainment

ಉಪ್ಪಿ ಬರ್ತ್​​​ಡೇಗೆ 10ಗ್ರಾಂ ಚಿನ್ನದ ಡಾಲರ್ ತಂದ ಭದ್ರಾವತಿ ನಾಗ: '45' ಚಿತ್ರತಂಡದಿಂದಲೂ ಸ್ಪೆಷಲ್ ಗಿಫ್ಟ್ - 45 Movie Glimpse - 45 MOVIE GLIMPSE

56ನೇ ವಸಂತಕ್ಕೆ ಕಾಲಿಟ್ಟ ರಿಯಲ್ ಸ್ಟಾರ್ ಉಪೇಂದ್ರ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತ್​​​ಡೇ ಸೆಲೆಬ್ರೇಟ್​​ ಮಾಡಿಕೊಂಡಿದ್ದಾರೆ.

Upendra Birthday celebration
ಉಪೇಂದ್ರ ಬರ್ತ್​​ಡೇ ಸೆಲೆಬ್ರೇಶನ್​​ (ETV Bharat)
author img

By ETV Bharat Entertainment Team

Published : Sep 18, 2024, 2:18 PM IST

ಉಪೇಂದ್ರ ಬರ್ತ್​​ಡೇ ಸೆಲೆಬ್ರೇಶನ್​​ (ETV Bharat)

ಬೆಂಗಳೂರು: ಕನ್ನಡ ಚಿತ್ರರಂಗದ 'ಬುದ್ಧಿವಂತ' ನಟ, ನಿರ್ದೇಶಕ ಖ್ಯಾತಿಯ ಉಪೇಂದ್ರ ಅವರಿಗೆ ಇಂದು ಜನುಮದಿನದ ಸಂಭ್ರಮ. 56ನೇ ವಸಂತಕ್ಕೆ ಕಾಲಿಟ್ಟ ರಿಯಲ್ ಸ್ಟಾರ್ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತ್​​​ಡೇ ಸೆಲೆಬ್ರೇಟ್​​ ಮಾಡಿಕೊಂಡರು.

ನಿನ್ನೆ ಮಧ್ಯರಾತ್ರಿಯಿಂದಲೇ ರಿಯಲ್ ಸ್ಟಾರ್ ಮನೆಯಲ್ಲಿ ಬರ್ತ್​​​​ ಡೇ ಸೆಲೆಬ್ರೇಷನ್ ಜೋರಾಗೇ ನಡೆಯುತ್ತಿದೆ. ಉಪ್ಪಿ ನಿವಾಸದತ್ತ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ಸ್ ಬರುತ್ತಿದ್ದಾರೆ. ಅಭಿಮಾನಿಗಳೊಂದಿಗೆ ನಟ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದಾರೆ.

ಉಪ್ಪಿ ಬರ್ತ್​​​ಡೇಗೆ ಫ್ಯಾನ್​ ಗೋಲ್ಡ್ ಗಿಫ್ಟ್: ಭದ್ರಾವತಿ ನಾಗ ಎನ್ನುವ ಉಪ್ಪಿ ಕಟ್ಟಾ ಅಭಿಮಾನಿ 10 ಸಿನಿಮಾಗಳ ಹೆಸರನ್ನು ತಮ್ಮ ಬೈಕ್ ಮೇಲೆ ಸ್ಟಿಕ್ಕರಿಂಗ್ ಮಾಡಿಸಿದ್ದಾರೆ. ಎಲೆಕ್ಟ್ರಾನಿಕ್​​ ಸಿಟಿಯಿಂದ ಉಪ್ಪಿ ಮನೆಗೆ ಆಗಮಿಸಿ ಅವರು ಸಂಭ್ರಮಿಸಿದ್ದಾರೆ. ಕಳೆದ ವರ್ಷ 6 ಗ್ರಾಂನ ಉಂಗುರ ಗಿಫ್ಟ್ ತಂದಿದ್ದರು. ಆದ್ರೆ ಅಭಿಮಾನಿಯ ಗೋಲ್ಡ್ ರಿಂಗ್ ಅನ್ನು ಉಪ್ಪಿ ಸ್ವೀಕರಿಸಿರಲಿಲ್ಲ. ಈ ಬಾರಿ 10 ಗ್ರಾಂ ಚಿನ್ನದ ಡಾಲರ್ ತಂದಿದ್ದು, ಅದನ್ನೂ ಕೂಡಾ ನಟ ಅಭಿಮಾನಿಗೆ ವಾಪಸ್​ ನೀಡಿದ್ದಾರೆ. ಯುಐ ಸಿನಿಮಾ ಹೆಸರನ್ನು ಡಾಲರ್ ಮಾಡಿಸಿ ಗಮನ ಸೆಳೆದಿದ್ದಾರೆ.

45 ಚಿತ್ರತಂಡದಿಂದ ಉಡುಗೊರೆ: ಇನ್ನೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರತಂಡದಿಂದ ಉಪ್ಪಿಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. 45 ಚಿತ್ರತಂಡದ ಕಡೆಯಿಂದ ಕೇಕ್ ಮಾಡಿಸಿ ಉಪೇಂದ್ರ ಅವರಿಗೆ ನಿರ್ಮಾಪಕ ರಮೇಶ್ ರೆಡ್ಡಿ ವಿಶೇಷವಾಗಿ ಶುಭ ಕೋರಿದ್ದಾರೆ. ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ‌ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ '45'. ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಶಿವರಾಜ್​​ಕುಮಾರ್, ರಾಜ್ ಬಿ ಶೆಟ್ಟಿ ಸೆರಿದಂತೆ ಮಲ್ಟಿಸಾರ್ಸ್ ಇದ್ದಾರೆ. ಶೇ.75ರಷ್ಟು ಶೂಟಿಂಗ್ ಮುಗಿಸಿರುವ '45' ಚಿತ್ರತಂಡ ಉಪ್ಪಿ ಬರ್ತ್‌ಡೇಗೆ ರೆಟ್ರೋ ಅವತಾರದಲ್ಲಿರೋ ಫಸ್ಟ್ ಲುಕ್ ಗ್ಲಿಂಪ್ಸ್​​​ ಅನಾವರಣಗೊಳಿಸಿದೆ.

ಇದನ್ನೂ ಓದಿ: 'ಬುದ್ಧಿವಂತ'ನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: 'ಯುಐ' ಸಿನಿಮಾ ಬಗ್ಗೆ ಉಪೇಂದ್ರ ಸಂದರ್ಶನ - Upendra Birthday

'ಯುಐ' ಪೋಸ್ಟರ್ ರಿಲೀಸ್​: ಉಪೇಂದ್ರ ನಟನೆಯ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಯುಐ'. ನಟನೆ ಜೊತೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ಈ ಚಿತ್ರದ ಪೋಸ್ಟರ್​​ ಇಂದು ಅನಾವರಣಗೊಂಡಿದೆ. ಪೋಸ್ಟರ್​​ನಲ್ಲಿ ಉಪೇಂದ್ರ ಕುದುರೆಯೇರಿ ಕುಳಿತಿದ್ದಾರೆ. ಸಿನಿಮಾ ಅಕ್ಟೋಬರ್​ಗೆ ತೆರೆಕಾಣಲಿದ್ದು, ಪ್ರೇಕ್ಷಕರು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಷ್ಣು​, ಉಪ್ಪಿ, ಶ್ರುತಿ ಜನ್ಮದಿನ: 'ಸಾಹಸಸಿಂಹ ಕರುಣಾಮಯಿಯ ಜನ್ಮದಿನ ಹಂಚಿಕೊಂಡ ನಾನು ಪುಣ್ಯವಂತ'ವೆಂದ ರಿಯಲ್​ ಸ್ಟಾರ್ - UI Poster Release

ಇನ್ನು, ಯುಐ ಸಿನಿಮಾ ಬಗ್ಗೆ ಮಾತನಾಡಿರುವ ರಿಯಲ್​​ ಸ್ಟಾರ್ ಉಪೇಂದ್ರ, ಸ್ಯಾಂಡಲ್​​​ವುಡ್​ ಮಾತ್ರವಲ್ಲದೇ ಬಹುಭಾಷೆಯವರೂ ಕೂಡಾ ಸಿನಿಮಾ ಬಗ್ಗೆ ಮಾತನಾಡುವ ಹಾಗಾಗಬೇಕು. ಆ ನಿಟ್ಟಿನಲ್ಲಿ ಕೆಲಸಗಳು ಸಾಗಿವೆ. ವಿಎಫ್​ಎಕ್ಸ್ ಕೆಲಸ ಹೆಚ್ಚಿದ್ದು, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಬಹುನಿರೀಕ್ಷಿತ ಪ್ರೊಜೆಕ್ಟ್​ನ ಮೇಕಿಂಗ್ ಸ್ಟೈಲ್ ವಿಭಿನ್ನವಾಗಿದೆ. ಹಾಗಾಗಿ ಸಿನಿಮಾ ಸಮಯ ತೆಗೆದುಕೊಂಡಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.