ETV Bharat / entertainment

ಅಮೀರ್​, ಸಮಂತಾ, ಕಮಲ್ ಹಾಸನ್​, ಧನುಷ್​​...! ವಿಚ್ಛೇದನ ಪಡೆದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿ ಹೀಗಿದೆ! - Divorced Celebrities list

author img

By ETV Bharat Karnataka Team

Published : Jul 19, 2024, 5:37 PM IST

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

Natasa Stankovic with Hardik Pandya
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ರೂಪದರ್ಶಿ ನತಾಶಾ ಸ್ಟಾಂಕೋವಿಕ್ (ANI)

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ರೂಪದರ್ಶಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಪಡೆದಿದ್ದಾರೆ. ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಿರಾಮ ಇಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ವಿಚ್ಛೇದಿತ ದಂಪತಿ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ದೃಢಪಡಿಸಿದ್ದಾರೆ.

2018ರಲ್ಲಿ ಪರಸ್ಪರರ ಸ್ನೇಹಿತರ ಮೂಲಕ ಭೇಟಿಯಾಗಿ, ಡೇಟಿಂಗ್ ಪ್ರಾರಂಭಿಸಿದರು. 2020ರ ಮೇ 31ರಂದು ವಿವಾಹವಾದರು. ಅದೇ ವರ್ಷ ಅಗಸ್ತ್ಯನನ್ನು ಬರಮಾಡಿಕೊಂಡರು. ಜುಲೈ 30, 2020ರಂದು ಪೋಷಕರಾಗಿ ಬಡ್ತಿ ಪಡೆದರು. ಕಳೆದ ವರ್ಷ ಸರ್ಬಿಯನ್ ಮತ್ತು ಭಾರತೀಯ ಸಂಪ್ರದಾಯಗಳ ಪ್ರಕಾರ ಮದುವೆ ಸಮಾರಂಭ ಇಟ್ಟುಕೊಂಡಿದ್ದರು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಂಬಂಧದಲ್ಲಿ ಬಿರುಕು ವದಂತಿ ಹರಡಿತ್ತು. ಅಂತಿಮವಾಗಿ ನಿನ್ನೆ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಿಸಿದ್ದಾರೆ. ಭಾರತೀಯ ಚಿತ್ರರಂಗದ ಅನೇಕ ಖ್ಯಾತನಾಮರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಅವರಾರು ಎಂಬವುದನ್ನು ನೋಡೋಣ ಬನ್ನಿ.

ವಿಚ್ಛೇದನ ಪಡೆದ ಖ್ಯಾತನಾಮರು:

  • ಹಾರ್ದಿಕ್ ಪಾಂಡ್ಯ - ನತಾಶಾ ಸ್ಟಾಂಕೋವಿಕ್
  • ಪ್ರೇಮಾ - ಜೀವನ್​ ಅಪ್ಪಚ್ಚು
  • ಶೃತಿ - ಮಹೇಂದರ್
  • ಅನು ಪ್ರಭಾಕರ್ - ಕೃಷ್ಣ ಕುಮಾರ್​​
  • ನಿವೇದಿತಾ ಗೌಡ - ಚಂದನ್​ ಶೆಟ್ಟಿ
  • ನಿಧಿ ಸುಬ್ಬಯ್ಯ - ಲವೇಶ್​​
  • ಅಮೀರ್ ಖಾನ್ - ಕಿರಣ್ ರಾವ್
  • ಸಮಂತಾ ರುತ್ ಪ್ರಭು - ನಾಗ ಚೈತನ್ಯ
  • ಕಮಲ್ ಹಾಸನ್ - ಸಾರಿಕಾ
  • ಸೈಫ್ ಅಲಿ ಖಾನ್ - ಅಮೃತಾ ಸಿಂಗ್
  • ಕರೀಷ್ಮಾ ಕಪೂರ್ - ಸಂಜಯ್ ಕಪೂರ್
  • ಧನುಷ್ - ಐಶ್ವರ್ಯಾ ರಜನಿಕಾಂತ್
  • ಮನಿಶಾ ಕೊಯಿರಾಲಾ - ಸಾಮ್ರಾಟ್ ದಹಲ್
  • ಶಿಖರ್ ಧವನ್ - ಆಯೇಶಾ ಮುಖರ್ಜಿ
  • ಹೃತಿಕ್ ರೋಷನ್ - ಸುಸ್ಸಾನ್ನೆ ಖಾನ್
  • ಹನಿ ಸಿಂಗ್ - ಶಾಲಿನಿ ತಲ್ವಾರ್
  • ಸೊಹೈಲ್ ಖಾನ್ - ಸೀಮಾ
  • ಲಿಯಾಂಡರ್ ಪಾಯಿಸ್ - ರಿಯಾ ಪಿಳ್ಳೈ
  • ರಿಯಾ ಪಿಳ್ಳೈ - ಸಂಜಯ್ ದತ್
  • ಮಸಾಬ ಗುಪ್ತಾ - ಮಧು ಮಂಟೆನಾ
  • ಇಶಾ ಡಿಯೋಲ್ - ಭರತ್ ತಖ್ತಾನಿ
  • ಫರ್ಹಾನ್ ಅಖ್ತರ್ - ಅಧುನಾ ಭಬಾನಿ
  • ಪೂಜಾ ಭಟ್ - ಮನೀಶ್ ಮಖಿಜಾ
  • ರತಿ ಅಗ್ನಿಹೋತ್ರಿ - ಅನಿಲ್ ವಿರ್ವಾನಿ
  • ಅರ್ಜುನ್ ರಾಂಪಾಲ್ - ಮೆಹರ್ ಜೆಸಿಯಾ
  • ದಿಯಾ ಮಿರ್ಜಾ - ಸಾಹಿಲ್ ಸಂಘಾ
  • ಕೀರ್ತಿ ಕುಲ್ಹಾರಿ - ಸಾಹಿಲ್ ಸ್ಹೇಗಲ್
  • ಇಶಾ ಕೊಪ್ಪಿಕರ್ - ಟಿಮ್ಮಿ ನಾರಂಗ್
  • ಕರಣ್ ಮೆಹ್ರಾ - ನಿಶಾ ರಾವಲ್.

ಅಮೀರ್ ಖಾನ್ ಮತ್ತು ಕಿರಣ್ ರಾವ್: 15 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ನಂತರ, ಬಾಲಿವುಡ್​ ಸೂಪರ್ ಸ್ಟಾರ್ ಅಮೀರ್ ಖಾನ್​​ ಮತ್ತು ನಿರ್ಮಾಪಕಿ ಕಿರಣ್ ರಾವ್​​ 2021ರ ಜುಲೈ 3ರಂದು ತಮ್ಮ ವಿಚ್ಛೇದನ ಘೋಷಿಸಿದರು. ತಮ್ಮ ಮಗನ ಜವಾಬ್ದಾರಿಯನ್ನು ಇಬ್ಬರೂ ಹೊತ್ತಿದ್ದಾರೆ. (ದಾಂಪತ್ಯ ಜೀವನ 2005 - 2021) .

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ: ಮದುವೆಯಾದ 4 ವರ್ಷಗಳ ನಂತರ, ದಕ್ಷಿಣ ಭಾರತದ ಪ್ರಸಿದ್ಧ ತಾರಾ ಜೋಡಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದರು. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದ ಜನಪ್ರಿಯ ನಟ-ನಟಿ 2021ರ ಅಕ್ಟೋಬರ್ 2ರಂದು ಸಾಮಾಜಿಕ ಜಾಲತಾಣದಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. (ದಾಂಪತ್ಯ ಜೀವನ 2017 - 2021).

ಕಮಲ್ ಹಾಸನ್ ಮತ್ತು ಸಾರಿಕಾ: ಟಾಲಿವುಡ್ ಸೂಪರ್‌ಸ್ಟಾರ್ ಕಮಲ್ ಹಾಸನ್ ಮತ್ತು ನಟಿ-ಕಾಸ್ಟೂಮ್​ ಡಿಸೈನರ್​ ಸಾರಿಕಾ 2004ರಲ್ಲಿ ವಿಚ್ಛೇದನ ಪಡೆದರು. ಲಿವ್-ಇನ್ ರಿಲೇಶನ್​ಶಿಪ್​ನಲ್ಲಿದ್ದ ಅವರು ಹಿರಿಯ ಪುತ್ರಿ ಶ್ರುತಿಯನ್ನು ಸ್ವಾಗತಿಸಿದರು. ನಂತರ 1991ರಲ್ಲಿ ಕಿರಿಯ ಮಗಳು ಅಕ್ಷರಾಳನ್ನು ಬರಮಾಡಿಕೊಂಡರು. ದುರಾದೃಷ್ಟವಶಾತ್, ನಟಿ ಗೌತಮಿ ತಡಿಮಲ್ಲ ಅವರೊಂದಿಗಿನ ಕಮಲ್​​​ರ ವಿವಾಹೇತರ ಸಂಬಂಧದ (ಆರೋಪ) ಬಗ್ಗೆ ಸಾರಿಕಾಗೆ ತಿಳಿದು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತು. 2004ರಲ್ಲಿ ದಂಪತಿ ವಿಚ್ಛೇದನ ಪಡೆದರು. (ದಾಂಪತ್ಯ ಜೀವನ 1988 - 2004).

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್: ಬಾಲಿವುಡ್​​ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ (ಪಟೌಡಿ ವಂಶದ ಚೋಟೆ ನವಾಬ್) 1991ರ ಅಕ್ಟೋಬರ್‌ನಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು. 13 ವರ್ಷಗಳ ನಂತರ ಬೇರ್ಪಟ್ಟರು. 2004ರಲ್ಲಿ ವಿಚ್ಛೇದನ ಪಡೆದ ಈ ದಂಪತಿಗೆ ಸಾರಾ ಅಲಿ ಖಾನ್​ ಮತ್ತು ಇಬ್ರಾಹಿಂ ಅಲಿ ಖಾನ್​ ಎಂಬ ಇಬ್ಬರು ಮಕ್ಕಳಿದ್ದಾರೆ. ಸಖತ್​ ಸ್ಟಾರ್‌ಡಮ್‌ ಹಿನ್ನೆಲೆ ಈ ಜೋಡಿಯ ವಿಚ್ಛೇದನ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. (ದಾಂಪತ್ಯ ಜೀವನ 1991 - 2004).

ಕರೀಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್: ಬಾಲಿವುಡ್​​​ ಬೇಡಿಕೆಯ ನಟಿಯಾಗಿದ್ದ ಕರೀಷ್ಮಾ ಕಪೂರ್ ಮತ್ತು ಉದ್ಯಮಿ ಸಂಜಯ್ ಕಪೂರ್ 2003ರಲ್ಲಿ ವಿವಾಹವಾದರು. ಭಿನ್ನಾಭಿಪ್ರಾಯಗಳ ಹಿನ್ನೆಲೆ ದಂಪತಿ 2014ರಲ್ಲಿ ಅಧಿಕೃತವಾಗಿ ಬೇರ್ಪಟ್ಟರು. (ದಾಂಪತ್ಯ ಜೀವನ 2003 - 2004).

ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್: ದಕ್ಷಿಣ ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವ ನಟ ಧನುಷ್ ಮತ್ತು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ತಮ್ಮ 18 ವರ್ಷಗಳ ದಾಂಪತ್ಯ ಜೀವನವನ್ನು 2022ರ ಜನವರಿಯಲ್ಲಿ ಕೊನೆಗೊಳಿಸಿದರು. ಹಿರಿಯ ಮಗ ಯಾತ್ರ ರಾಜ 2006ರ ಅಕ್ಟೋಬರ್ 10ರಂದು ಜನಿಸಿದರು, ಕಿರಿಯ ಮಗ ಲಿಂಗ ರಾಜ 2010ರ ಜೂನ್ 21ರಂದು ಜನಿಸಿದರು. 2022ರ ಜನವರಿ 17ರಂದು ಸಾಮಾಜಿಕ ಮಾಧ್ಯಮದ ಮೂಲಕ ವಿಚ್ಛೇದನವನ್ನು ಘೋಷಿಸಿದರು. (ದಾಂಪತ್ಯ ಜೀವನ 2004 - 2022).

ಮನಿಶಾ ಕೊಯಿರಾಲಾ ಮತ್ತು ಸಾಮ್ರಾಟ್ ದಹಲ್: ನಟಿ ಮನಿಶಾ ಕೊಯಿರಾಲಾ 2012ರಲ್ಲಿ ನೇಪಾಳ ಮೂಲದ ಉದ್ಯಮಿ ಸಾಮ್ರಾಟ್ ದಹಾಲ್ ಅವರಿಂದ ಬೇರ್ಪಟ್ಟಿದ್ದರು. (ದಾಂಪತ್ಯ ಜೀವನ 2010 - 2012).

ಶಿಖರ್ ಧವನ್ ಮತ್ತು ಆಯೇಶಾ ಮುಖರ್ಜಿ: ಕ್ರಿಕೆಟರ್ ಶಿಖರ್ ಧವನ್ ಮತ್ತು ಆಯೇಶಾ ಮುಖರ್ಜಿ 2012ರ ಅಕ್ಟೋಬರ್​ನಲ್ಲಿ ಮದುವೆಯಾದರು. ಆಯೇಶಾ, ಕ್ರಿಕೆಟಿಗನಿಗಿಂತ 12 ವರ್ಷ ಹಿರಿಯರು. 2014ರಲ್ಲಿ ಇಬ್ಬರೂ ಗಂಡು ಮಗುವನ್ನು ಬರಮಾಡಿಕೊಂಡರು. 2021ರಲ್ಲಿ ವಿಚ್ಛೇದನ ಪಡೆದರು. (ದಾಂಪತ್ಯ ಜೀವನ 2012 - 2021).

ಹೃತಿಕ್ ರೋಷನ್ ಮತ್ತು ಸುಸ್ಸಾನ್ನೆ ಖಾನ್: ಬಾಲಿವುಡ್​ ಸೂಪರ್​ ಸ್ಟಾರ್ ಹೃತಿಕ್ ಮತ್ತು ಇಂಟೀರಿಯರ್​ ಡಿಸೈನರ್​​ ಸುಸ್ಸಾನ್ನೆ 2000ರ ಡಿಸೆಂಬರ್ 20ರಂದು ವಿವಾಹವಾದರು. 14 ವರ್ಷಗಳ ದಾಂಪತ್ಯ ಜೀವನದ ನಂತರ, 2014ರ ನವೆಂಬರ್ 1ರಂದು ಪರಸ್ಪರ ಬೇರ್ಪಟ್ಟರು. (ದಾಂಪತ್ಯ ಜೀವನ 2000 - 2014).

ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್: ಭಾರತದ ಪ್ರಸಿದ್ಧ ರ್ಯಾಪರ್, ಪಾಪ್ ಕಲಾವಿದ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ 2011ರಲ್ಲಿ ಮದುವೆಯಾಗಿದ್ದರು. 2022ರಲ್ಲಿ ವಿಚ್ಛೇದನ ಪಡೆದಿದ್ದಾರೆ. ದೌರ್ಜನ್ಯಕ್ಕೊಳಗಾಗಿರುವುದಾಗಿ ಶಾಲಿನಿ ಆರೋಪಿಸಿದ್ದರು. ಅಲ್ಲದೇ ಹನಿ ಸಿಂಗ್ ಹಲವು ವಿವಾಹೇತರ ಸಂಬಂಧಗಳನ್ನು ಹೊಂದಿರುವುದಾಗಿಯೂ ಗಂಭೀರ ಆರೋಪ ಎಸಗಿದ್ದರು.

ಇದನ್ನೂ ಓದಿ: ಹಾರ್ದಿಕ್​ ​ -ನತಾಶಾ ಡಿವೋರ್ಸ್: ಈ ಜೋಡಿಯ ಜೀವನದ ಒಂದು ನೋಟ - Hardik Natasa

ರಿಯಾ ಪಿಳ್ಳೈ ಮತ್ತು ಸಂಜಯ್ ದತ್: ರಿಯಾ, ಬಾಲಿವುಡ್ ನಟ ಸಂಜಯ್ ದತ್ ಅವರ ಎರಡನೇ ಪತ್ನಿ. ರಿಯಾ, ಟೆನಿಸ್ ತಾರೆ, ಲಿಯಾಂಡರ್ ಪಾಯಿಸ್ ಅವರನ್ನು ಪ್ರೀತಿಸಿದ ಬಳಿಕ ಸಂಜಯ್​ ಅವರಿಂದ ಬೇರ್ಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.