ಹೈದರಾಬಾದ್: ವಿಜಯ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಕೌಟುಂಬಿಕ ಸಿನಿಮಾದ 'ಫ್ಯಾಮಿಲಿ ಸ್ಟಾರ್' ಬಿಡುಗಡೆಯಾಗಿ ಐದು ದಿನಗಳ ಕಳೆದಿದೆ. ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಪರಶುರಾಮ್ ಪೆಟ್ಲಾ ನಿರ್ದೇಶನವಿದೆ. ಏಪ್ರಿಲ್ 5ರಂದು ತೆರೆಕಂಡ ಈ ಚಿತ್ರಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಯುಗಾದಿ ಕಳೆದ ಮೇಲೆ ಚಿತ್ರ ನಿಧಾನವಾಗಿ ಪ್ರೇಕ್ಷಕರ ಸೆಳೆಯಲು ಮುಂದಾಗಿದ್ದು, 15 ಕೋಟಿ ರೂ. ಗಳಿಕೆ ಮಾಡಿದೆ.
- " class="align-text-top noRightClick twitterSection" data="">
ಇಂಡಸ್ಟ್ರಿ ಟ್ರಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಹಿಂದಿನ ದಿನಕ್ಕೆ ಹೋಲಿಸಿದರೆ 'ಫ್ಯಾಮಿಲಿ ಸ್ಟಾರ್' ಮಂಗಳವಾರ ಅಲ್ಪ ಏರಿಕೆ ಕಂಡಿದೆ. ಐದನೇ ದಿನ ತೆಲುಗು ಭಾಷೆ ಸಿನಿಮಾದಲ್ಲಿ ಶೇ 24.77ರಷ್ಟು ಪ್ರೇಕ್ಷಕರಿಂದ ಭರ್ತಿಯಾಗಿದ್ದರೆ, ತಮಿಳು ಭಾಷೆಯಲ್ಲಿನ ಸಿನಿಮಾದಲ್ಲಿ ಶೇ 15.46 ರಷ್ಟು ಭರ್ತಿ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ 9 ರಂದು ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಂದಾಜು 2.40 ಕೋಟಿ ಗಳಿಕೆ ಮಾಡುವ ಮೂಲಕ ಒಟ್ಟಾರೆ 15 ಕೋಟಿ ಸಂಪಾದಿಸಿದೆ.
ಚಿತ್ರದ ಮೊದಲನೇ ದಿನದಂದು ಬಾಕ್ಸ್ ಆಫೀಸ್ನಲ್ಲಿ 5.75 ಕೋಟಿ ಗಳಿಕೆ ಮಾಡಿತು. ಎರಡನೇ ದಿನ 3.45 ಕೋಟಿ ಸಂಪಾದಿಸಿದರೆ, ಭಾನುವಾರ 3.1 ಕೋಟಿ ಗಲ್ಲಾ ಪೆಟ್ಟಿಗೆಯಲ್ಲಿ ಸಂಗ್ರಹವಾಗಿದೆ. ಸೋಮವಾರ ಚಿತ್ರದ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿದ್ದು, 1.3 ಕೋಟಿ ಗಳಿಕೆ ಮಾಡಿತ್ತು. ಸಿನಿಮಾ ಮತ್ತು ನಟನ ಕುರಿತು ನಕಾರಾತ್ಮಕ ಪ್ರಚಾರ ಆರಂಭವಾಗಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ದೇವಕಕೊಂಡ ಪರ ಕೆಲವು ಅಭಿಯಾನ ಕೂಡ ಆರಂಭವಾಯಿತು. ವರದಿಗಳ ಪ್ರಕಾರ, ನಟನ ವಿರುದ್ಧ ನಕಾರಾತ್ಮಕ ಟೀಕೆಗಳ ವಿರುದ್ಧ ವಿಜಯ್ ದೇವರಕೊಂಡ ಕೆಲವು ಅಭಿಮಾನಿ ಗುಂಪುಗಳು ದೂರು ಕೂಡ ಸಲ್ಲಿಸಿವೆ.
ಚಿತ್ರದ ಕುರಿತು ಮಾತನಾಡುವುದಾದರೆ, ದೇವರ ಕೊಂಡ ಮತ್ತು ಮೃಣಾಲ್ ಮೊದಲ ಬಾರಿಗೆ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ವಾಸುಕಿ, ರೋಹಿಣಿ ಹತ್ತಂಗಡಿ, ರವಿ ಬಾಬು, ಮತ್ತು ಅಭಿನಯ ಚಿತ್ರದ ಪ್ರಮುಖ ಪಾತ್ರದಲ್ಲಿ ಕಂಡಿದ್ದಾರೆ. ವಿಶೇಷ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ. ದಿಲ್ ರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಹಲವು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ.
ವಿಜಯ ದೇವರಕೊಂಡ ಸಿನಿ ಜೀವನದಲ್ಲೇ 'ಫ್ಯಾಮಿಲಿ ಸ್ಟಾರ್' ಅತ್ಯಂತ ಕಳಪೆ ಓಪನಿಂಗ್ ಕಂಡಿದೆ. ಈ ಹಿಂದೆ ನಟಿ ಸಮಂತಾ ರುತ್ ಪ್ರಭು ಜೊತೆ ನಟಿಸಿದ್ದ 'ಖುಷಿ' ಮೊದಲ ದಿನ 16 ಕೋಟಿ ಗಳಿಸಿತು. 'ಫ್ಯಾಮಿಲಿ ಸ್ಟಾರ್'ಗೆ ಹೋಲಿಕೆ ಮಾಡಿದರೆ, ಇದು ಮೂರು ಪಟ್ಟು ಕಲೆಕ್ಷನ್ ಮಾಡಿದೆ.
ಇನ್ನು ನಟಿ ಮೃಣಾಲ್ಗೆ ಇದು ತೆಲುಗಿನಲ್ಲಿ ನಟಿಸುತ್ತಿರುವ ಮೂರನೇ ಚಿತ್ರವಾಗಿದೆ. ಅವರ ಮೊದಲ ಚಿತ್ರ 'ಸೀತಾ ರಾಮ' ಉತ್ತಮ ಪ್ರದರ್ಶನ ಕಂಡಿತು. ಇದಾದ ಬಳಿಕ ನಾನಿ ಜೊತೆ 'ಹಾಯ್ ನಾನಾ'ದಲ್ಲಿ ನಟಿಸಿದ್ದರು.
ಇದನ್ನೂ ಓದಿ: ವಿಜಯ್ ದೇವರಕೊಂಡ ನಟನೆಯ 'ಫ್ಯಾಮಿಲಿ ಸ್ಟಾರ್' ಮೊದಲ ದಿನ ಗಳಿಸಿದ್ದೆಷ್ಟು?