ETV Bharat / entertainment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ - ರಾಧಿಕಾ: ವೈಭವೋಪೇತ ಮದುವೆಗೆ ಸಾಕ್ಷಿಯಾದ ಅಂಬಾನಿ ಕುಟುಂಬ - Anant Radhika wedding - ANANT RADHIKA WEDDING

ವೈಭವೋಪೇತ ವಿವಾಹ ಸಮಾರಂಭದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಸಪ್ತಪದಿ ತುಳಿದಿದ್ದಾರೆ.

Anant Radhika wedding
ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದುವೆ (ANI)
author img

By ETV Bharat Karnataka Team

Published : Jul 13, 2024, 7:23 AM IST

ಮುಂಬೈ (ಮಹಾರಾಷ್ಟ್ರ): ದೇಶದ ಸಿರಿವಂತ ಉದ್ಯಮಿ ಮುಖೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಪುತ್ರ ಅನಂತ್​ ಮದುವೆ ಕಳೆದ ದಿನ (ಶುಕ್ರವಾರ, ಜುಲೈ 12) ಅದ್ಧೂರಿಯಾಗಿ ಜರುಗಿತು. ವೈಭವೋಪೇತ ವಿವಾಹ ಸಮಾರಂಭದಲ್ಲಿ ಅನಂತ್ ಅಂಬಾನಿ ಅವರು ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕ್ಷಣಕ್ಕೆ ಬಾಲಿವುಡ್​​​ ಸೇರಿದಂತೆ ವಿಶ್ವದ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಪುತ್ರ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ಶುಕ್ರವಾರ ಸಂಜೆ ಮುಂಬೈನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಸೋಷಿಯಲ್​ ಮೀಡಿಯಾದಲ್ಲೀಗ ಅಂಬಾನಿ ಗ್ರ್ಯಾಂಡ್​ ವೆಡ್ಡಿಂಗ್​​​ನದ್ದೇ ಸದ್ದು.

ವೈರಲ್​ ಆಗುತ್ತಿರುವ ಫೋಟೋ ವಿಡಿಯೋಗಳಲ್ಲಿ ನವ ದಂಪತಿ ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಸುತ್ತುವರಿದಿರುವುದನ್ನು ಕಾಣಬಹುದು. ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಅವರು ವಿವಾಹದ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅನಂತ್ ಮತ್ತು ರಾಧಿಕಾ ಫೆರಾ ಶಾಸ್ತ್ರಕ್ಕೆ ಹೋಗುತ್ತಿರುವುದನ್ನು ನೋಡಬಹುದು.

ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಗೊಳಿಸಿದ್ದ ಅತ್ಯಾಕರ್ಷಕ ಲೆಹೆಂಗಾದಲ್ಲಿ ವಧು ರಾಧಿಕಾ ಮರ್ಚೆಂಟ್ ಬೆರಗುಗೊಳಿಸುವ ನೋಟ ಬೀರಿದ್ದಾರೆ. 29ರ ಹರೆಯದ ನವವಧು ಕಸೂತಿ ಮಾಡಿಡಿದ ಉಡುಗೆ ಧರಿಸಿ, ಅದಕ್ಕೆ ತಕ್ಕ ಆಭರಣ ತೊಟ್ಟು ಬಹಳ ಸುಂದರವಾಗಿ ಕಾಣಿಸಿಕೊಂಡರು. ಕೆಂಪು ಮತ್ತು ಬಿಳಿ ಬಣ್ಣದ ಉಡುಪು ಗುಜರಾತಿ ಸಂಪ್ರದಾಯ (Panetar) ವನ್ನು ಎತ್ತಿ ಹಿಡಿದಿತ್ತು.

ಇದನ್ನೂ ಓದಿ: ಹೂವಿನ ಮೊಗ್ಗುಗಳ ದುಪಟ್ಟಾ, ಆಭರಣ! ಹಲ್ದಿಯಲ್ಲಿ ಹೊಳೆದ ವಧು ರಾಧಿಕಾ, ಇದು ಅಂಬಾನಿ ಮಗನ ಮದುವೆ ವೈಭವ - Radhika Merchant Haldi Look

ನಿನ್ನೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ರಾಧಿಕಾ ಮತ್ತು ಅನಂತ್ ಅಂಬಾನಿ ವಿವಾಹ ಮಹೋತ್ಸವ ನೆರವೇರಿತು. ಇಂದು 'ಶುಭ್ ಆಶೀರ್ವಾದ್' ಮತ್ತು ನಾಳೆ-ಜುಲೈ 14ರಂದು 'ಮಂಗಲ್ ಉತ್ಸವ' ಅಥವಾ ಮದುವೆಯ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್​​ 29ರಂದೇ ವಿವಾಹ ಮುನ್ನದ ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು. ಅದಕ್ಕೂ ಮುನ್ನ ಎರಡು ಅದ್ಧೂರಿ ವಿವಾಹ ಪುರ್ವ ಆಚರಣೆಗಳು ಜರುಗಿದ್ದು, ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ: ಭೈರತಿ ರಣಗಲ್ ಟೀಸರ್​ನಲ್ಲಿ ಕರುನಾಡ ಚಕ್ರವರ್ತಿ ದರ್ಬಾರ್, ಅಭಿಮಾನಿಗಳು ದಿಲ್ ಖುಷ್ - Shivaraj kumar Birthday

ವಿವಾಹ ಸಮಾರಂಭದಲ್ಲಿ ಕಿಮ್ ಮತ್ತು ಕ್ಲೋಯ್ ಕಾರ್ಡಶಿಯಾನ್, ಜಾನ್ ಸೀನಾ, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ರಜನಿಕಾಂತ್, ಮಹೇಶ್ ಬಾಬು, ರಾಮ್​ ಚರಣ್​​, ಯಶ್ ದಂಪತಿ, ಶಾರುಖ್ ಖಾನ್ ಕುಟುಂಬ, ಬಚ್ಚನ್​ ಕುಟುಂಬ, ರೇಖಾ, ಸಲ್ಮಾನ್ ಖಾನ್, ಅಜಯ್ ದೇವಗನ್, ವಿಕ್ಕಿ ಕೌಶಲ್, ಶಾಹಿದ್ ಕಪೂರ್, ರಣ್​​ಬೀರ್ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್, ಮತ್ತು ದೀಪಿಕಾ ಪಡುಕೋಣೆ, ಸೇರಿದಂತೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.