ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ಕಿರಿ ಮಗ ಗಿರಿ ದ್ವಾರಕೀಶ್ ಸದ್ಯ ತಮಿಳಿನ ಹಲವು ಸಿನಿಮಾಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಆ ಪೈಕಿ ಅವರ ಮುಂಬರುವ 'ಯೋಲೋ' ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ರೋಮ್ ಕಾಮ್ ಜಾನರ್‌ನ ಈ ಸಿನಿಮಾದಲ್ಲಿ ಹಾಸ್ಯಮಯ ಪೊಲೀಸ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಮಹೇಶ್ ಸೆಲ್ವರಾಜ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಸಿ.ಎಸ್ ಸಾಮ್ ನಿರ್ದೇಶನ ಮಾಡಿದ್ದಾರೆ.
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿನ ಜನಪ್ರಿಯ ತಮಿಳು ವೆಬ್ ಸರಣಿ ಹಾರ್ಟ್ಬೀಟ್ನಲ್ಲಿ ಡಾ.ರಾಮನಾಥನ್ ಪಾತ್ರದಲ್ಲಿ ನಟಿಸಿದ್ದ ಗಿರಿ, ಆ ಪಾತ್ರದ ಮೂಲಕವೇ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದ್ದರು. ಕಾಮಿಡಿ ಪಂಚ್, ಪಾತ್ರ ಮೂಡಿ ಬಂದ ರೀತಿಗೆ ನೋಡುಗರಿಂದ ಕಾಂಪ್ಲಿಮೆಂಟ್ ಸಿಕ್ಕಿದ್ದವು. ತಮಿಳಿನಲ್ಲಿ ಹಿಟ್ ಆದ ಈ ಸರಣಿ ಇದೀಗ ತೆಲುಗಿನಲ್ಲಿಯೂ ಡಬ್ ಆಗಿದೆ. ಇನ್ನೇನು ಶೀಘ್ರದಲ್ಲೇ ಸ್ಟ್ರೀಮಿಂಗ್ ಆರಂಭಿಸಲಿದೆ.
ಯೋಲೋ ಸಿನಿಮಾದ ಜೊತೆಗೆ, ವೈರಾ ಪ್ರಕಾಶ್ ನಿರ್ಮಾಣದ ಮತ್ತು ಎಸ್.ಪಿ. ಪೊನ್ ಶಂಕರ್ ನಿರ್ದೇಶನದ ತಮಿಳು ಚಿತ್ರ ಮೇಡ್ ಇನ್ ಇಂಡಿಯಾ ಚಿತ್ರದಲ್ಲಿಯೂ ಗಿರಿ ನಟಿಸುತ್ತಿದ್ದಾರೆ. ಭಾರತದ ಪ್ರಮುಖ ನಗರಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಚಿತ್ರೀಕರಣಗೊಳ್ಳುತ್ತಿದೆ. ಮೇಡ್ ಇನ್ ಇಂಡಿಯಾ ಕೇವಲ ಲೊಕೇಷನ್‌ಗಳ ಮೂಲಕ ಮಾತ್ರವಲ್ಲದೇ ಸಂಗೀತದಿಂದಲೂ ನೋಡುಗರಿಗೆ ರಸದೌತಣ ನೀಡಲಿದೆ. ಖ್ಯಾತ ಸಂಗೀತ ನಿರ್ದೇಶಕ ರಾಜ್ ವರ್ಮ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮೋಟಿವೇಷನಲ್ ಭಾಷಣಕಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಗುಣ, ಯೋಗ್ಯತೆ ಪ್ರಶ್ನೆ: 'ನಾನು ಪಾಸಿಟಿವಿಟಿ' ಅನ್ನೋದನ್ನು ಮರೆತುಬಿಡಿಯೆಂದ ಗೌತಮಿ
ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿರುವ ಗಿರಿ, ಇಂತಹ ವೈವಿಧ್ಯಮಯ ಚಿತ್ರಗಳ ಭಾಗವಾಗಲು ನನಗೆ ಖುಷಿ ಎನಿಸುತ್ತದೆ. ಪ್ರತಿಯೊಂದು ಪಾತ್ರವೂ ಪ್ರೇಕ್ಷಕರೊಂದಿಗೆ ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಪ್ರೇಕ್ಷಕರ ಬೆಂಬಲ ಮತ್ತು ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಈ ಪ್ರಾಜೆಕ್ಟ್‌ಗಳ ಯಶಸ್ಸನ್ನು ಎದುರು ನೋಡುತ್ತಿದ್ದೇನೆ. ಸೂರಜ್ ನಲ್ಲುಸ್ವಾಮಿ ಛಾಯಾಗ್ರಹಣವಿರುವ ಈ ಚಿತ್ರ ಫ್ಯಾಂಟಸಿ ಮಿಶ್ರಿತ ಕಥೆಯೊಂದಿಗೆ ಸಾಗಲಿದೆ. ಇನ್ನೇನು ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎಂದರು. ಈ ಸಿನಿಮಾಗಳು ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಮನರಂಜಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಹನುಮಾನ್ ಪಾತ್ರದಲ್ಲಿ ರಿಷಬ್ ಶೆಟ್ಟಿ: ಟಾಲಿವುಡ್ನಲ್ಲಿ ಛಾಪು ಮೂಡಿಸಲು ಕಾಂತಾರ ಸ್ಟಾರ್ ರೆಡಿ