ETV Bharat / entertainment

'ಬಿಗ್ ಬಾಸ್ ಒಟಿಟಿ' ವಿಜೇತೆ ದಿವ್ಯಾ ಅಗರ್ವಾಲ್ ಜೊತೆಗೆ ಅಪೂರ್ವ ಪಡ್ಗಾಂವ್ಕರ್ ಸರಳ ವಿವಾಹ - ಸರಳ ವಿವಾಹ

'ಬಿಗ್ ಬಾಸ್ ಒಟಿಟಿ' ವಿಜೇತೆ ದಿವ್ಯಾ ಅಗರ್ವಾಲ್, ಅಪೂರ್ವ ಪಡಗಾಂವ್ಕರ್ ಜೊತೆಗೆ ಫೆಬ್ರವರಿ 20 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ವಿವಾಹವಾದ ಈ ಜೋಡಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

Divya Agarwal Apurva Padgaonkar  Divya agarwal wedding pics  ದಿವ್ಯಾ ಅಗರ್ವಾಲ್ ಅಪೂರ್ವ ಪಡ್ಗಾಂವ್ಕರ್  ಸರಳ ವಿವಾಹ  ಬಿಗ್ ಬಾಸ್ ವಿಜೇತೆ ದಿವ್ಯಾ ಅಗರ್ವಾಲ್
ದಿವ್ಯಾ ಅಗರ್ವಾಲ್- ಅಪೂರ್ವ ಪಡ್ಗಾಂವ್ಕರ್ ಜೋಡಿಯ ಸರಳ ವಿವಾಹ
author img

By ETV Bharat Karnataka Team

Published : Feb 21, 2024, 1:08 PM IST

ಮುಂಬೈ (ಮಹಾರಾಷ್ಟ್ರ): 'ಬಿಗ್ ಬಾಸ್ ಒಟಿಟಿ' ವಿನ್ನರ್​ ದಿವ್ಯಾ ಅಗರ್ವಾಲ್ ಅವರು, ಫೆಬ್ರವರಿ 20, 2024 ರಂದು (ಮಂಗಳವಾರ) ಅಪೂರ್ವ ಪದಗಾಂವ್ಕರ್ ಅವರನ್ನು ಸರಳವಾಗಿ ವಿವಾಹವಾಗಿದ್ದಾರೆ. ಈ ಜೋಡಿ 2022 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 'ಬಿಗ್ ಬಾಸ್ ಒಟಿಟಿ' ವಿಜೇತೆ ದಿವ್ಯಾ ಚೆಂಬೂರಿನಲ್ಲಿರುವ ತಮ್ಮ ಮನೆಯಲ್ಲಿ ರೆಸ್ಟೋರೆಂಟ್ ಮಾಲೀಕ ಅಪೂರ್ವ ಅವರನ್ನು ಸರಳವಾಗಿ ಮದುವೆಯಾಗಿದ್ದಾರೆ. ಫೆಬ್ರವರಿ 18 ರಂದು ಸಂಗೀತ ಸಮಾರಂಭದೊಂದಿಗೆ ದಿವ್ಯಾ ಅವರ ಮದುವೆಯ ಸಿದ್ಧತೆಗಳು ಪ್ರಾರಂಭವಾದವು. ನಂತರ 19 ರಂದು ಮೆಹೆಂದಿ ಮತ್ತು ಫೆಬ್ರವರಿ 20 ರಂದು ಫೆರಾ ಕಾರ್ಯಕ್ರಮ ನೆರವೇರಿತು.

ದಿವ್ಯಾ ಅಗರ್ವಾಲ್​ಗೆ ಅಪ್ಪನ ನೆನಪು: ಮದುವೆ ಕಾರ್ಯಕ್ರಮದ ಸಿದ್ಧತೆಗಳ ನಡುವೆಯೇ ನಿರತರಾದ ನಟಿ ದಿವ್ಯಾ, ಈ ವಿಶೇಷ ಕ್ಷಣದಲ್ಲಿ ತನ್ನ ತಂದೆಯನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಬೇಸರ ಹೊರಹಾಕಿದರು. 'ನನ್ನ ತಂದೆಯನ್ನು ಮಿಸ್ ಮಾಡಿಕೊಳ್ಳುವುದರಿಂದ ಕೆಲವೊಮ್ಮೆ ನನಗೆ ಸಂತೋಷವಾಗುತ್ತದೆ. ಮತ್ತು ಕೆಲವೊಮ್ಮೆ ದುಃಖವಾಗುತ್ತದೆ. ನಾನು ತುಂಬಾ ಭಾವುಕಳಾಗಿದ್ದರೂ ಖುಷಿಯಾಗಿದ್ದೇನೆ. ಈ ಮದುವೆಯ ವಿಶೇಷ ದಿನಕ್ಕಾಗಿ, ವಧು ದಿವ್ಯಾ ಮತ್ತು ವರ ಅಪೂರ್ವ ಅವರು ಗಮನ ಸೆಳೆಯುವಂತಹ ಉಡುಗೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಟಿ ದಿವ್ಯಾ ಪಿಂಕ್ ಒಂಬ್ರೆ ಪರ್ಪಲ್ ಲೆಹೆಂಗಾದಲ್ಲಿ ಮಿಂಚಿದ್ದಾರೆ. ತನಗೆ ಹೊಂದಾಣಿಕೆಯಾಗುವ ದುಪಟ್ಟಾ ಮತ್ತು ಬಹು - ಶ್ರೇಣಿಯ ವಜ್ರ ಮತ್ತು ಪಚ್ಚೆ ಆಭರಣಗಳನ್ನು ಧರಿಸಿದ್ದರು. ವಿಶೇಷ ಲುಕ್​ನಲ್ಲಿ ದಿವ್ಯಾ ಎಲ್ಲರ ಗಮನ ಸೆಳೆದಿದ್ದಾರೆ.

ಗಮನಸೆಳೆದ ಸರಳ ಮದುವೆ: ಅವಳು ಕಲಿರೆಯೊಂದಿಗೆ(ಕಿವಿಯೋಲೆ) ಸಾಂಪ್ರದಾಯಿಕ ಬಳೆಗಳನ್ನು ಸಹ ಧರಿಸಿದ್ದಳು. ಜೊತೆಗೆ ಮರಾಠಿ ಪದ್ಧತಿಯಂತೆ ಮುಂಡವಲ್ಯವನ್ನು ಧರಿಸಿದ್ದಳು. ಮತ್ತೊಂದೆಡೆ, ವರ ಅಪೂರ್ವ ಕೂಡ ದಿವ್ಯಾಗೆ ಪೂರಕವಾಗಿ ಅದೇ ರೀತಿಯ ಪ್ರಿಂಟ್‌ನೊಂದಿಗೆ ಮ್ಯಾಚಿಂಗ್ ಪರ್ಪಲ್ ಕುರ್ತಾವನ್ನು ಧರಿಸಿದ್ದರು. ಸದ್ದುಗದ್ದಲ, ಆಡಂಬರವಿಲ್ಲದೇ ಅತ್ಯಂತ ಸರಳವಾಗಿ ಈ ಮದುವೆ ನಡೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಮದುವೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ದಿವ್ಯಾ ಅವರು, 'ಈ ಕ್ಷಣದಿಂದ ನಮ್ಮ ಪ್ರೇಮಕಥೆ ಮುಂದುವರಿಯುತ್ತದೆ' ಎಂಬ ಶೀರ್ಷಿಕೆ ಬರೆದಿದ್ದಾರೆ.

ನಟಿ ದಿವ್ಯಾಗೆ ಬಂದಿತ್ತು ಬಿಗ್ ಬಾಸ್-1 ಒಟಿಟಿ ಟ್ರೋಫಿ: ಬಾಲಿವುಡ್​ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್-1 ಒಟಿಟಿ (Bigg Boss OTT) ಫಿನಾಲೆ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ಜರುಗಿತ್ತು. 42 ದಿನಗಳವರೆಗೆ ನಡೆದ ಈ ಶೋನಲ್ಲಿ 14 ಸ್ಪರ್ಧಿಗಳು ಪಾಲ್ಗೊಂಡಿದ್ದರು. ದಿವ್ಯಾ ಅಗರ್ವಾಲ್​ ಈ ಸ್ಪರ್ಧೆಯ ವಿಜೇತರಾಗಿ ಟ್ರೋಫಿ ಮತ್ತು 25 ಲಕ್ಷ ರೂಪಾಯಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದರು.

ಬಿಗ್​ ಮನೆಯಲ್ಲಿ ಸದಾ ಕ್ರಿಯಾಶೀಲರಾಗಿದ್ದ ಸ್ಪರ್ಧಿ ದಿವ್ಯಾ ಅಗರ್ವಾಲ್ ಬಿಬಿ ಒಟಿಟಿ ಸೀಸನ್‌ 1ರ ವಿಜೇತರಾಗುವ ಮೂಲಕ ಎಲ್ಲರ ಸೆಳೆದಿದ್ದರು. ನಿಶಾಂತ್ 1ನೇ ರನ್ನರ್ ಅಪ್​, ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ 2ನೇ ರನ್ನರ್ ಅಪ್, ರಾಕೇಶ್‌ 3ನೇ ರನ್ನರ್‌ ಅಪ್ ಹಾಗೂ ಪ್ರತೀಕ್ 4ನೇ ರನ್ನರ್‌ ಅಪ್ ಸ್ಥಾನ ಗಳಿಸಿದ್ದರು.

ಇದನ್ನೂ ಓದಿ: ಶಾಹಿದ್​​ ಕಪೂರ್​ರನ್ನು ನಿರ್ಲಕ್ಷಿಸಿದರಾ ಕರೀನಾ?: ವೈರಲ್​​ ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.