ETV Bharat / entertainment

ಹನುಮಾನ್ ಪಾತ್ರದಲ್ಲಿ ರಿಷಬ್​ ಶೆಟ್ಟಿ: ಟಾಲಿವುಡ್​ನಲ್ಲಿ ಛಾಪು ಮೂಡಿಸಲು ಕಾಂತಾರ ಸ್ಟಾರ್ ರೆಡಿ

ತೆಲುಗಿನ ಜೈ ಹನುಮಾನ್ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

Rishabh Shetty Jai Hanuman First Look
ರಿಷಬ್​ ಶೆಟ್ಟಿ 'ಜೈ ಹನುಮಾನ್' ಫಸ್ಟ್ ಲುಕ್ (Film Poster)
author img

By ETV Bharat Entertainment Team

Published : 2 hours ago

'ಕಾಂತಾರ ಅಧ್ಯಾಯ 1' ಚಿತ್ರದ ಮೂಲಕ ಡಿವೈನ್​​ ಸ್ಟಾರ್ ರಿಷಬ್​ ಶೆಟ್ಟಿ ಅವರನ್ನು ಕಾಡುಬೆಟ್ಟ ಶಿವನ ನೋಟದಲ್ಲಿ ಕಣ್ತುಂಬಿಕೊಳ್ಳಲು ಅಖಂಡ ಸಿನಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಕುಂದಾಪುರದ ಕೆರಾಡಿ ಹುಡುಗ ಕಾಂತಾರ ಪ್ರೀಕ್ವೆಲ್ ಮೂಲಕ ಕದಂಬರ ಕಥೆ ಹರವಿಡೋದಿಕ್ಕೆ ಹೊರಟಿದ್ದಾರೆ. ಜೊತೆ ಜೊತೆಗೆ ಪುರಾತನ ಸಮರ ಕಲೆ ಕಳರಿಪಯಟ್ಟು ಕಲೆಯನ್ನು ತೆರೆ ಮೇಲೆ ಅದ್ಭುತವಾಗಿ ಕಟ್ಟಿಕೊಡಲು ಕಸರತ್ತು ನಡೆಸಿದ್ದಾರೆ. ಡಿವೈನ್ ಸ್ಟಾರ್ ಚಿತ್ತವೀಗ ಕಾಂತಾರ ಪ್ರೀಕ್ವೆಲ್​​ ಮೇಲಿದೆ. ಸೌತ್​ ಸೂಪರ್​ ಸ್ಟಾರ್ ಮೋಹನ್ ಲಾಲ್ ಸೇರಿದಂತೆ ಒಂದಷ್ಟು ಬಹುಭಾಷಾ ತಾರೆಯರು ಕಾಂತಾರ ಪ್ರೀಕ್ವೆಲ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹೊತ್ತಲ್ಲಿ ರಿಷಬ್ ಶೆಟ್ಟಿ ತೆಲುಗಿನ ಜೈ ಹನುಮಾನ್​ಗೆ ಜೈಕಾರ ಹಾಕಿದ್ದಾರೆ.

ಟಾಲಿವುಡ್ ಅಂಗಳದಲ್ಲಿ ಮೂಡಿಬಂದಿದ್ದ ಜೈ ಹನುಮಾನ್ ಸಿನಿಮಾ ಪ್ಯಾನ್ ಇಂಡಿಯಾದ್ಯಂತ ಬಾಕ್ಸ್ ಆಫೀಸ್​​​​ನಲ್ಲಿ ಭಾರಿ ಸದ್ದು ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದ ಹನುಮಾನ್ ಸಿನಿಮಾದ ಸೀಕ್ವೆಲ್ ಮೂಡಿಬರುತ್ತಿದೆ. ಇದೀಗ ಪ್ಯಾನ್‌‌ ಇಂಡಿಯಾ ಹಿಟ್ ಸೀಕ್ವೆಲ್‌‌ನಲ್ಲಿ ಕಾಂತಾರ ಶಿವ ಕಾಣಿಸಿಕೊಳ್ಳಲಿರುವುದು ಅಧಿಕೃತವಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಡೈರೆಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿರುವ ಹನುಮಾನ್ ಸಿನಿಮಾದ ಸೀಕ್ವೆಲ್​​​ನಲ್ಲಿ ರಿಷಬ್ ಶೆಟ್ಟಿ ಹನುಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಾವಳಿಯ ವಿಶೇಷ ಸಂದರ್ಭ ನಟನ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡೋ ಮೂಲಕ ಸಿನಿಪ್ರಿಯರಿಗೆ ಸಿಹಿ ಹಂಚಲಾಗಿದೆ.

''ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಬೆಂಬಲದ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್'' - ರಿಷಬ್​ ಶೆಟ್ಟಿ ಟ್ವೀಟ್​.

ಇದನ್ನೂ ಓದಿ: 'ಕಾಲಾಯ ತಸ್ಮೈ ನಮಃ': ದರ್ಶನ್​​ ಬೇಲ್​ ಬೆನ್ನಲ್ಲೇ ನಟಿ ರಚಿತಾ ರಾಮ್​ ಹೇಳಿದ್ದಿಷ್ಟು

ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಜೈ ಹನುಮಾನ್ ಚಿತ್ರದ ಸೀಕ್ವೆಲ್​​ನಲ್ಲಿ 'ಹನುಮಾನ್' ಪಾತ್ರಧಾರಿಗಾಗಿ ಬಹಳಷ್ಟು ಅಳೆದು ತೂಗಿ ಕಾಂತಾರ ಸೃಷ್ಟಿಕರ್ತ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಕಾಂತಾರ ಸಿನಿಮಾಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡಿವೈನ್ ಸ್ಟಾರ್ ಕೇವಲ ನಟರಾಗಿ ಅಷ್ಟೇ ಅಲ್ಲದೇ ನಿರ್ದೇಶಕರಾಗಿಯೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೋಡಿ ಮಾಡಿದ್ದಾರೆ. ಇದೇ ಕಾರಣಕ್ಕೆ ಯಾವುದೇ ಪಾತ್ರವನ್ನಾದರೂ ಕಾಡುಬೆಟ್ಟ ಶಿವ ಸಮರ್ಥವಾಗಿ ನಿಭಾಯಿಸಬಲ್ಲರು. ಜೊತೆಗೆ, ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ವಿಭಾಗಗಳಲ್ಲೂ ರಿಷಬ್ ಶೆಟ್ಟಿ ಅವರಿಗೆ ಅನುಭವ ಇರುವ ಹಿನ್ನೆಲೆ, ಹನುಮಾನ್ ಸಿನಿಮಾದ ಸೀಕ್ವೆಲ್​ಗೆ ಪ್ಲಸ್ ಪಾಯಿಂಟ್​ ಆಗಲಿದ್ದಾರೆ. ಇನ್ನು ಅವರ ಸ್ಟಾರ್​ಡಮ್​ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಡಿವೈನ್ ಸ್ಟಾರ್ ಕ್ರೇಜ್ ಚಿತ್ರಕ್ಕೆ ತೂಕ ತಂದುಕೊಡಲಿದೆ ಎಂಬುದು ಜೈ ಹನುಮಾನ್ ಚಿತ್ರತಂಡದ ವಿಶ್ವಾಸವೆಂಬಂತೆ ತೋರುತ್ತಿದೆ. ಹಾಗಾಗಿ, ಜೈ ಹನುಮಾನ್ ಸಿನಿಮಾ ಕಣಕ್ಕೆ ಅವರನ್ನು ಇಳಿಸಿದೆ.

ಇದನ್ನೂ ಓದಿ: 'ಟಾಕ್ಸಿಕ್' ಶೂಟಿಂಗ್ ಸ್ಪಾಟ್​​​ಗೆ ಸಚಿವ ಈಶ್ವರ್​ ಖಂಡ್ರೆ ಭೇಟಿ: ಮತ್ತೆ ಸಂಕಷ್ಟದಲ್ಲಿ ಯಶ್​ ಸಿನಿಮಾ

ರಿಷಬ್​ ಶೆಟ್ಟಿ ಅವರ ಪವರ್​​ಫುಲ್​ ಪೋಸ್ಟರ್ ಅನಾವರಣಗೊಂಡಿದೆ. ಕೈಯಲ್ಲಿ ರಾಮನ ವಿಗ್ರಹ ಹಿಡಿದು ರಿಷಬ್ ಶೆಟ್ಟಿ ಹನುಮಾನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೈ ಹನುಮಾನ್ ಸಿನಿಮಾ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU)ನ ಭಾಗವಾಗಿ ತಯಾರಾಗಲಿದೆ. ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ಸೇರಿ ಬಿಗ್​​ ಬಜೆಟ್​​ನಲ್ಲಿ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.