ಹೈದರಾಬಾದ್: ನಿರ್ದೇಶಕ ಬಿಜಾಯ್ ನಂಬಿಯಾರ್ ಇದೀಗ 'ಡಾಂಗೆ' ಸಿನಿಮಾದ ಮೂಲಕ ಮತ್ತೆ ಬೆಳ್ಳಿ ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆೆ. ದ್ವಿಭಾಷೆಯಲ್ಲಿ ಈ ಚಿತ್ರವೂ ಮೂಡಿಬರುತ್ತಿದ್ದು, ತಮಿಳಿನಲ್ಲಿ 'ಪೊರ್' ಎಂಬ ಹೆಸರಿನಲ್ಲಿ ಈ ಚಿತ್ರ ತೆರೆಕಾಣಲಿದೆ. ಹಿಂದಿಯಲ್ಲಿ ಹರ್ಷವರ್ಧನ್ ರಾಣೆ ಮತ್ತು ಇಹಾನ್ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ತಮಿಳಿನಲ್ಲಿ ಅರ್ಜುನ್ ದಾಸ್ ಮತ್ತು ಕಾಳಿದಾಸ್ ಜಯರಾಂ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಎರಡು ಭಾಷೆಯಲ್ಲಿನ ಟೀಸರ್ ಇಂದು ಬಿಡುಗಡೆಯಾಗಿದೆ.
- " class="align-text-top noRightClick twitterSection" data="">
ರ‍್ಯಾಗಿಂಗ್ ದೃಶ್ಯದಿಂದ ಪ್ರಾರಂಭವಾಗುವ ಈ ಚಿತ್ರದ ಟೀಸರ್, ಸಿನಿಮಾವೂ ಕಾಲೇಜಿನ ಕ್ಯಾಂಪಸ್ನಲ್ಲಿ ನಡೆಯುವ ಪೈಪೋಟಿ, ನಿಷ್ಠೆ, ಆಯ್ಕೆಯ ರೋಮಾನ್ಸ್ ಡ್ರಾಮಾ ಹೊಂದಿರಲಿದೆ ಎಂಬ ಸುಳಿವು ನೀಡಿದೆ. ಕಾಲೇಜಿನ ಎರಡು ತಂಡಗಳ ನಡುವಣ ಹೋರಾಟ ಸೇರಿದಂತೆ ರೋಮಾನ್ಸ್ ಅಂಶಗಳು ಚಿತ್ರದ ಮೂಲ ಕಥೆಯಾಗಿದೆ ಎಂದು ಟೀಸರ್ ನೋಡಿದಾಕ್ಷಣ ಅನಿಸುತ್ತಿದೆ. ಹರ್ಷವರ್ಧನ್ ಮತ್ತು ಇಹಾನ್ ಗುಂಪುಗಳ ನಡುವಿನ ಹೋರಾಟದ ಕಥೆಯಲ್ಲಿ ಕೆಂಪು ಮತ್ತು ನೀಲಿ ಬಣ್ಣಗಳು ಪ್ರಾಬಲ್ಯ ಹೊಂದಿದೆ. ಪಿಕ್ ಎ ಸೈಡ್ ಎನ್ನುವುದು ಚಿತ್ರದ ಟ್ಯಾಗ್ಲೈನ್ ಆಗಿದ್ದು, ಯಾವುದರ ಆಯ್ಕೆಗೆ ನಾಯಕ ಮುಂದಾಗಲಿದೆ ಎಂಬುದು ಚಿತ್ರದ ಕಥೆಯಾಗಿದೆ.
ಚಿತ್ರದಲ್ಲಿ ಹರ್ಷವರ್ಧನ್ ಪಾತ್ರವೂ ವಿವಿಧ ರೂಪದಲ್ಲಿ ಕಂಡು ಬರಲಿದೆ. ಉದ್ದ ತಲೆಗೂದಲು, ಮೂಗಿನಲ್ಲಿ ರಿಂಗ್, ಹೀಗೆ ವಿವಿಧ ಆಯಾಮದಲ್ಲಿ ಅವರ ಪಾತ್ರ ಪೋಷಣೆ ಕಂಡು ಬಂದಿದೆ. '99 ಸಾಂಗ್ಸ್' ಮತ್ತು 'ಸ್ಟಾರ್ಫಿಶ್'ನ ಪಾತ್ರದ ಮೂಲಕ ಪರಿಚಿತರಾಗಿರುವ ಇಹಾನ್ ಭಟ್ ಕೂಡ ಚಿತ್ರದಲ್ಲಿ ತಮ್ಮ ಪ್ರತಿಭೆ ತೋರಿಸುವಲ್ಲಿ ಹಿಂದೆ ಬಿದ್ದಿಲ್ಲ. ಹರ್ಷವರ್ಧನ್ ಈ ಹಿಂದೆ 'ತಾರಾ ವರ್ಸಸ್ ಬಿಲಾಲ್' ಮತ್ತು 'ಹಸೀನ್ ದಿಲ್ರುಬಾ'ದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದರು.
'ಶೈತನ್', 'ಡೇವಿಡ್', 'ವಾಜೀರ್' ಮತ್ತು 'ತೈಶ್' ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಬಿಜಾಯ್ ನಂಬಿಯಾರ್, ಡಾಂಗೆ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಬಂಡವಾಳವನ್ನು ಹೂಡಿದ್ದಾರೆ. ತಮಿಳು - ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಭೂಷಣ್ ಕುಮಾರ್, ಕಿಶನ್ ಕುಮಾರ್, ಪ್ರಭು ಆಂಟೋನಿ ಮತ್ತು ಮಧು ಅಲೆಕ್ಸಾಂಡರ್ ಹೂಡಿಕೆ ಮಾಡಿದ್ದಾರೆ.
- " class="align-text-top noRightClick twitterSection" data="">
ಹಿಂದಿ ಭಾಷೆಯ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಜಿಮೆಶಿ ಖಲಿದ್ ಪ್ರಮುಖ ಪಾತ್ರದಲ್ಲಿ ಕಂಡು ಬಂದಿದ್ದರೆ, ಪ್ರೆಸ್ಲೆ ಆಸ್ಕರ್ ಡಿಸೋಜಾ ಸಿನಿಮಾಟೋಗ್ರಫಿ ಮಾಡಿದ್ದಾರೆ. ಗೌರವ್ ಗೊಡ್ಕಿಂಡಿ, ಸಂಚಿತ್ ಹೆಗ್ಡೆ, ಧ್ರುವ ವಿಶ್ವನಾಥ್ ಮತ್ತು ಶಶ್ವಾತ್ ಬುಲುಸು ಎರಡು ಭಾಷೆಗಳಲ್ಲಿನ ಸಂಗೀತಕ್ಕೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ: 'ಚಂದು ಚಾಂಪಿಯನ್': ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಕಾರ್ತಿಕ್ ಆರ್ಯನ್ ಲುಕ್