ETV Bharat / entertainment

'S/O ಮುತ್ತಣ್ಣ' ಪ್ರಣಂ ದೇವರಾಜ್​​ಗೆ ಸಿಕ್ಕಳು ಖುಷಿ ರವಿ: 'ದಿಯಾ' ನಟಿಗೆ ಸ್ಪೆಷಲ್​​ ಬರ್ತ್​​ಡೇ ಗಿಫ್ಟ್​​ - son of muttanna

Happy Birthday Kushee Ravi: 'ದಿಯಾ' ಖ್ಯಾತಿಯ ಖುಷಿ ರವಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 'S/O ಮುತ್ತಣ್ಣ' ಚಿತ್ರತಂಡ ಸ್ಪೆಷಲ್​ ವಿಡಿಯೋ ಅನಾವರಣಗೊಳಿಸಿ ನಟಿಗೆ ವಿಶೇಷವಾಗಿ ಶುಭ ಕೋರಿದೆ.

Kushee Ravi Birthday
ಖುಷಿ ರವಿ ಜನ್ಮದಿನ
author img

By ETV Bharat Karnataka Team

Published : Jan 23, 2024, 1:11 PM IST

'ದಿಯಾ' ಸಿನಿಮಾ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಒಂದು ವಿಭಿನ್ನ ಪ್ರೇಮಕಥೆಯನ್ನು ಹೇಳಿ ಅಪಾರ ಸಂಖ್ಯೆಯ ಸಿನಿಪ್ರಿಯರನ್ನು ಆಕರ್ಷಿಸಿದ ಚಿತ್ರವಿದು. ಸಿನಿಮಾ ಸೂಪರ್​ ಹಿಟ್​ ಆಗಿದ್ದು ಮಾತ್ರವಲ್ಲದೇ, ಇದರಲ್ಲಿ ಬಣ್ಣ ಹಚ್ಚಿದ ಕಲಾವಿದರ ಜನಪ್ರಿಯತೆಯೂ ಹೆಚ್ಚಿದು. ಬಣ್ಣ ಹಚ್ಚಿದ ಮೂರು ಪ್ರಮುಖ ತಾರೆಯರೀಗ ಪ್ರತ್ಯೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

'ದಿಯಾ' ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡವರು ಖುಷಿ ರವಿ. ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋ ಸಿಂಪಲ್​​ ಬ್ಯೂಟಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರೂ ಸೇರಿದಂತೆ ಚಿತ್ರರಂಗದವರು ಶುಭ ಕೋರುತ್ತಿದ್ದಾರೆ. 'S/O ಮುತ್ತಣ್ಣ' ಚಿತ್ರತಂಡ ಕೂಡ ಸ್ಪೆಷಲ್​ ವಿಡಿಯೋ ಶೇರ್ ಮಾಡೋ ಮೂಲಕ ನಾಯಕ ನಟಿಗೆ ವಿಶೇಷವಾಗಿ ಶುಭ ಕೋರಿದೆ.

'ದಿಯಾ' ಬಳಿಕ ಕನ್ನಡದ ಜೊತೆಗೆ ಪರಭಾಷಾ ಸಿನಿಮಾಗಳಲ್ಲಿಯೂ ಬ್ಯುಸಿ ಆಗಿರುವ ಖುಷಿ ರವಿ ಅವರೀಗ ''S/O ಮುತ್ತಣ್ಣ'' ಬಳಗ ಸೇರಿದ್ದಾರೆ. ಯಂಗ್ ಡೈನಾಮಿಕ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿತ್ತಿರುವ 'S/O ಮುತ್ತಣ್ಣ' ಸಿನಿಮಾದಲ್ಲಿ ಖುಷಿ ರವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚೆಲುವೆಯ ಜನ್ಮದಿನದ ಅಂಗವಾಗಿ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದ್ದು, ಸ್ಪೆಷಲ್ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಮಾಡಿ ಶುಭ ಕೋರಿದೆ.

ಕುಮಾರಿ 21ಎಫ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಯಂಗ್ ಡೈನಾಮಿಕ್ ಖ್ಯಾತಿಯ ಪ್ರಣಂ ದೇವರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿರುವ ಪ್ರಣಂ ದೇವರಾಜ್ ಅವರೀಗ 'S/O ಮುತ್ತಣ್ಣ'ನಾಗಲು ರೆಡಿಯಾಗಿದ್ದಾರೆ. ವಿಭಿನ್ನ ಶೀರ್ಷಿಕೆಯ ಸಿನಿಮಾಗೆ 'ದಿಯಾ' ಚೆಲುವೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: 'ಇವತ್ತು ನಾನ್​ ಹೇಳ್ತೀನಿ, ನೀವ್ ಕೇಳ್ಬೇಕ್​​​': ವಿನಯ್ ಏಟಿಗೆ ಪ್ರತಾಪ್​ ತಿರುಗೇಟು!

ಅಂದಹಾಗೆ 'S/O ಮುತ್ತಣ್ಣ'ನಿಗೆ ಶ್ರೀಕಾಂತ್ ಹುಣ್ಸೂರ್ ಸಾರಥಿ. ಆರ್. ಚಂದ್ರು ಹಾಗೂ ಪ್ರೇಮ್​ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶ್ರೀಕಾಂತ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಣಂ ದೇವರಾಜ್, ಖುಷಿ ರವಿ ಜೊತೆಗೆ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಪಂಚ ಭಾಷೆಗಳಲ್ಲಿ ಬರಲಿದೆ ರಾಮಾಯಣ ಕಥಾಧಾರಿತ ಪ್ಯಾನ್​ ಇಂಡಿಯಾ ಸಿನಿಮಾ; ಹೆಸರೇನು ಗೊತ್ತಾ?

ಶೀರ್ಷಿಕೆಯೇ ಹೇಳುವಂತೆ ಇದೊಂದು ಅಪ್ಪ-ಮಗನ ಬಾಂಧವ್ಯದ ಕಥೆಯಾಗಿದ್ದು, ಸಿನಿಮಾವನ್ನು ಪುರಾತನ ಫಿಲ್ಮ್ಸ್ ಬ್ಯಾನರ್​ನಲ್ಲಿ ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ. 'S/O ಮುತ್ತಣ್ಣ' ಸಿನಿಮಾಗೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರತಂಡ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.